ಗೋಣಿಕೊಪ್ಪ ವರದಿ, ನ. ೧೫: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕಕ್ಕೆ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಮುಕ್ಕಾಟಿರ ನೀತ್ ಅಯ್ಯಪ್ಪ, ಕಾರ್ಯದರ್ಶಿಯಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿಯಾಗಿ ಬೊಜ್ಜಂಗಡ ಚೆಂಗಪ್ಪ, ಉಪಾಧ್ಯಕ್ಷರಾಗಿ ಹೆಚ್.ಆರ್. ಸತೀಶ್ (ನಿರ್ವಹಣೆ), ಟಿ.ಜೆ. ಆಂಟೋನಿ (ತರಬೇತಿ), ಎ.ಎಂ. ಬೋಪಣ್ಣ (ಅಭಿವೃದ್ಧಿ ಮತ್ತು ಬೆಳವಣಿಗೆ), ಪಿ. ಪಿ. ಬಿದ್ದಪ್ಪ (ಕಾರ್ಯಕ್ರಮ), ಕೆ.ಯು. ತಿಮ್ಮಯ್ಯ (ವ್ಯವಹಾರ), ಪಿ. ಪಿ. ಬೋಪಣ್ಣ (ಮಾರ್ಕೆಟಿಂಗ್), ಜಂಟಿ ಕಾರ್ಯದರ್ಶಿಯಾಗಿ ಟಿ.ಎಸ್. ಸುಜಿತ್, ನಿರ್ದೇಶಕರುಗಳಾಗಿ ಎಂ.ಪಿ. ಬೋಪಣ್ಣ, ಪಿ.ಬಿ. ಗೌತಮ್, ಸಿ.ಡಿ. ಮುತ್ತಪ್ಪ, ಜಿ.ಪಿ. ಸ್ವಾಮಿ, ಟಿ.ಜಿ. ಲಿಕಿತ್ ಕುಮಾರ್ ಅವರನ್ನು ಆಯ್ಕೆಗೊಳಿಸಲಾಯಿತು. ಘಟಕದ ಜೂನಿಯರ್ ಜೇಸಿ ವಿಭಾಗದ ಮುಖ್ಯಸ್ಥರಾಗಿ ಎ.ಡಿ. ಚರಣ್ ಚೆಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.