ಗೋಣಿಕೊಪ್ಪ ವರದಿ, ನ. ೧೫: ದಕ್ಷಿಣ ಕೊಡಗು ಕಾಫಿ ಮಂಡಳಿ ವತಿಯಿಂದ ಸ್ವಚ್ಛತಾ ಪಖ್ವಡಾ ಎಂಬ ಸ್ವಚ್ಛತೆ ಅಭಿಯಾನ ಕಾರ್ಯಕ್ರಮದಡಿ ರ‍್ವತೊಕ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ಸೋಂಕು ಹರಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಕರಪತ್ರ ವಿತರಣೆ ಮಾಡಲಾಯಿತು. ಪ್ರಮುಖರಾದ ಸುನಿಲ್ ಕುಮಾರ್, ಡಾ. ಎಸ್. ಎ. ನಡಾಫ್ ಸೋಂಕು ಹರಡುವ ಬಗ್ಗೆ ಮಾಹಿತಿ ನೀಡಿದರು.