ಮಡಿಕೇರಿ, ನ. ೧೫: ವೀರಾಜಪೇಟೆಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆಯ ಅಧೀನದಲ್ಲಿರುವ ನಹ್ದತುಸ್ಸುನ್ನಃ ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿ ವರ್ಷ ಈದ್ ಮಿಲಾದ್ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ ದಸ್ತಗೀರ್ ಕಾನ್ಫರೆನ್ಸ್ ಕಾರ್ಯಕ್ರಮ ತಾ. ೧೭ ರಿಂದ ೨೦ರವರೆಗೆ ಏರ್ಪಡಿಸಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಜತೆ ಕಾರ್ಯದರ್ಶಿ ಮುಹಮ್ಮದ್ ಸಾಬಿತ್ ಕುಂಜಿಲ; ತಾ. ೧೭ ರಂದು ಬೆಳಿಗ್ಗೆ ೧೦ ಗಂಟೆಗೆ ಅಸ್ಸಯ್ಯಿದ್ ಸಅದ್ ತಂಙಳ್ ಧ್ವಜಾರೋಹಣ ನೆರವೇರಿ ಸುವರು. ೧೦.೩೦ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಯ್ಯಿದ್ ಅಬ್ದುಲ್ ಅಜೀಜ್ ತಂಙಳ್ ಮಲೇಶಿಯಾ, ಸಯ್ಯಿದ್ ಅಬ್ದುಲ್ ತಂಙಳ್ ಎಮ್ಮೆಮಾಡು, ಸಯ್ಯಿದ್ ಕೋಯಮ್ಮ ತಂಙಳ್ ಕೊಂಡAಗೇರಿ, ಸಯ್ಯಿದ್ ಮಹ್ದಿ ತಂಙಳ್ ಚೋಕಂಡಳ್ಳಿ, ಸಯ್ಯಿದ್ ತ್ವಾಹಾ ತಂಙಳ್ ಕಾಸರಗೋಡು, ಅಬ್ದುಲ್ ಮಜೀದ್ ಉಸ್ತಾದ್ ಕೊಂಡAಗೇರಿ ಮತ್ತಿತರರು ಉಪಸ್ಥಿತರಿರುವರೆಂದು ತಿಳಿಸಿದರು.

೧೧ ಗಂಟೆಗೆ ‘ಮಕ್ತಬತುಲ್ ಗಝ್ಹಾಲಿ’ ಎಂಬ ನೂತನ ಗ್ರಂಥಾಲ ಯದ ಉದ್ಘಾಟನೆ ನಡೆಯಲಿದ್ದು, ಅಸ್ಸಯ್ಯಿದ್ ಶಾಫಿ ಬಾ ಅಲವಿ ತಂಙಳ್ ಅಲ್ ಮದೀನತುಲ್ ಮುನವ್ವರ ನೇತೃತ್ವ ನೀಡಲಿದ್ದಾರೆ. ಮಧ್ಯಾಹ್ನ ೧ಗಂಟೆಗೆ ಮದ್ಹುಸ್ವಾಲೀಹೀನ್ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ನಂತರ ಸಂಜೆ ೬.೩೦ ಗಂಟೆಗೆ ಬಹ್ರುಲ್ ಉಲೂಂ ಉಸ್ತಾದುಲ್ ಅಸಾತೀದ್ ಶೈಖುನಾ ಓ.ಕೆ. ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ ಅವರ ಸಂಸ್ಮರಣಾರ್ಥ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ನಡೆಯಲಿದ್ದು, ಮರ್ಕಝಸ್ಸಫತಿಸ್ಸುನ್ನಿಯ್ಯಾದ ಅಧ್ಯಕ್ಷ ಅಸ್ಸಯ್ಯಿದ್ ಆಲಿ ಬಾಫಖಿ ತಂಙಳ್ ಕೊಯ್ಲಾಂಡಿ ಹಾಗೂ ಅಸ್ಸಯ್ಯಿದ್ ಶರಫುದ್ದಿನ್ ಜಮಲುಲ್ಲೆöÊಲಿ ತಂಙಳ್ ಲೋಕಾರ್ಪಣೆ ಮಾಡಲಿದ್ದಾರೆ. ರಾಶಿದ್ ಅನ್ವಾರಿ ಅಲ್ ಅಹ್ಸನಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.

ತಾ. ೧೮ ರಂದು ಪೈಗಂಬರ್ ಮುಹಮ್ಮದ್(ಸ) ಅವರ ಪ್ರಕೀರ್ತ ನೆಯ ಸಮಾರೋಪ ಸಮಾರಂಭ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದರೂಸಿ ಕಿಲ್ಲೂರ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಅಸ್ಸಯ್ಯಿದ್ ಸಮೀಹ್ ಅನ್ವಾರಿ ಅಲ್ ಅಹ್ಸನಿ ಉದ್ಘಾಟಿಸಲಿದ್ದಾರೆ. ಖಮರುದ್ದೀನ್ ಅನ್ವಾರಿ ಅಸ್ಸಖಾಫಿ ಮತ್ತು ಸಂಗಡಿಗರು ಆಲಾಪನೆ ನಡಸಲಿ ದ್ದಾರೆ. ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ವಳಪಟ್ಣಂ ಪ್ರಾರ್ಥನಾ ನೇತೃತ್ವ ನೀಡಲಿದ್ದಾರೆ. ವಾರ್ಷಿಕ ಸಾಂಸ್ಕೃತಿಕ ಕಲಾಮೇಳ ‘ಹೈಮನ’ ತಾ. ೧೯ ರಂದು ಬೆಳಿಗ್ಗೆಯಿಂದ ೨೦ರಂದು ಸಂಜೆವರೆಗೆ ನಡೆಯಲಿದ್ದು, ಐದು ವಿಭಾಗಗಳಲ್ಲಿನ ೧೩೧ ಸ್ಪರ್ಧೆಗಳಲ್ಲಿ ೧೧೧ ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ ೪ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯಿದ್ ಇಲ್ಯಾಸ್ ತಂಙಳ್ ಅಸ್ಸಖಾಫಿ ಅಲ್ ಹೈದರೂಸಿ ಎಮ್ಮೆಮಾಡು ಆಶೀರ್ವಚನ ನೀಡಲಿದ್ದಾರೆ. ೬.೩೦ಕ್ಕೆ ಅಸ್ಮಾಉಲ್ ಹುಸ್ನಾ ಪ್ರಾರ್ಥನಾ ಸಂಗಮ ನಡೆಯಲಿದ್ದು, ಅಸ್ಸಯ್ಯಿದ್ ಶಾಫಿ ಬಾಅಲವಿ ತಂಙಳ್ ಅಲ್ ಮದೀನತುಲ್ ಮುನವ್ವರ, ಅಸ್ಸಯ್ಯಿದ್ ಸೀದಿ ಕೋಯ ತಂಙಳ್ ಬಲಮುರಿ, ಅಸ್ಸಯ್ಯಿದ್ ತಂಙಳ್ ಚಿಟ್ಟಡೆ, ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಸೇರಿದಂತೆ ಸಾಮಾಜಿಕ, ಸಾಂಘಿಕ ನೇತಾರರು ಬಾಗವಹಿಸಲಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಸಜೀರ್ ಗುಂಡಿಕೆರೆ, ಪ್ರಧಾನ ಕಾರ್ಯದರ್ಶಿ ನೌಫಲ್ ಮಟ್ಟಂ, ಖಜಾಂಚಿ ಮುಹಮ್ಮದ್ ಮುಸ್ತಫಾ ಕೊಂಡAಗೇರಿ, ಹಫೀಳ್ ಮಾಲ್ದಾರೆ ಇದ್ದರು.