ಮಡಿಕೇರಿ, ನ. ೧೫: ಕಾಫಿ ತೋಟಗಳ ನಡುವೆ, ಮುಂಜಾನೆಯ ಮಂಜು ಆವೃತ ವಾತಾವರಣದಲ್ಲಿ ಪಕ್ಷಿಗಳ ಚಿಲಿಪಿಲಿಯ ಕಲರವದಲ್ಲಿ ಪ್ರಕೃತಿಯೊಂದಿಗೆ ಒಡಗೂಡುವ ಭಾವನೆಯು ಇತರ ವಸ್ತು ಸೃಷ್ಟಿತ ತಾತ್ಕಾಲಿಕ ಭಾವನೆಗಳಿಗಿಂತ ಶ್ರೇಷ್ಠವಾದದು ಎಂಬ ಪರಿಕಲ್ಪನೆಯಲ್ಲಿ ಪ್ರಕೃತಿಯೊಂದಿಗೆ ಒಡಗೂಡಿ ಅದರ ರಕ್ಷಣೆಗೆ ಪ್ರೇರಿತವಾಗಬೇಕೆಂಬ ಪ್ರಯತ್ನ ‘ಕೂರ್ಗ್ ವೆಲ್‌ನೆಸ್ ಫೌಂಡೇಶನ್’ ಆಯೋಜಿತ ಬರಿಗಾಲು ಮ್ಯಾರಥಾನ್ ಮೂಲಕ ವರ್ಷಂಪ್ರತಿ ಆಗುತ್ತಿದೆ. ಅದೇ ರೀತಿ ಈ ಬಾರಿಯೂ ಮ್ಯಾರಥಾನ್‌ನ ೬ನೇ ಆವೃತ್ತಿಗೆ ಪಾಲಿಬೆಟ್ಟದ ಟಾಟಾ ಕಾಫಿ ಸ್ಪೋರ್ಟ್ಸ್ ಮೈದಾನದಲ್ಲಿ ಡಿಸೆಂಬರ್ ೧೧ ರಂದು ಚಾಲನೆ ದೊರಕಲಿದೆ. ಕಳೆದ ವರ್ಷ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ೩೭೫ ಮಂದಿ, ೨೫ ಮಕ್ಕಳು ಹಾಗೂ ೧೦೦ ಮಂದಿ ಸ್ಥಳೀಯ ತೋಟದ ಕಾರ್ಮಿಕರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದರು. ಬರಿಗಾಲು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರು hಣಣಠಿs://ಥಿouಣooಛಿಚಿಟಿಡಿuಟಿ.ಛಿom/ಡಿಚಿಛಿes/ಣhe-bಚಿಡಿeಜಿooಣ-mಚಿಡಿಚಿಣhoಟಿ-೨೦೨೨/ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಂದು ಬೆಳಿಗ್ಗೆ ೫ ಗಂಟೆಗೆ ಮ್ಯಾರಥಾನ್‌ಗೆ ಚಾಲನೆ ದೊರಕಲಿದೆ.

ಮ್ಯಾರಥಾನ್ ಅನ್ನು ೫ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ‘ಫುಲ್ ಮ್ಯಾರಥಾನ್’(೪೨ ಕಿ.ಮೀ), ‘ಹಾಫ್ ಮ್ಯಾರಥಾನ್’(೨೧ ಕಿ.ಮೀ), ೧೦ ಕಿ.ಮೀ, ೫ ಕಿ.ಮೀ ಹಾಗೂ ೧.೫ ಕಿ.ಮೀ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಪಾÀಲ್ಗೊಳ್ಳಬಹುದಾಗಿದೆ.

ಪರಿಸರ ಕಾಳಜಿ - ತೆಂಗಿನಕಾಯಿ ಚಿಪ್ಪಿನಲ್ಲಿ ನೀರು

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್‌ನ ಅವೈಜ್ಞಾನಿಕ ವಿಲೇವಾರಿಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಓಟಗಾರರಿಗೆ ಪರಿಸರಕ್ಕೆ ಮಾರಕವಲ್ಲದ ತೆಂಗಿನ ಚಿಪ್ಪಿನಿಂದಲೇ ನೀರು ನೀಡಲಾಗುತ್ತದೆ. ಇದರೊಂದಿಗೆ ಸ್ಪರ್ಧಾ ವಿಜೇತರಿಗೂ ತೆಂಗಿನ ಚಿಪ್ಪನ್ನು ಹಗ್ಗಕ್ಕೆ ಸೇರಿಸಿ ಪದಕದ ರೂಪದಲ್ಲಿ ಪ್ರತಿ ವರ್ಷ ನೀಡುತ್ತಾ ಬರಲಾಗುತ್ತಿದೆ.