ಶನಿವಾರಸAತೆ, ನ. ೧೫: ಪಟ್ಟಣ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ದಾಖಲಾತಿಯಿಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ೬ ಮಂದಿ ಚಾಲಕರಿಗೆ ಸೋಮವಾರಪೇಟೆ ನ್ಯಾಯಾಲಯ ದಂಡ ವಿಧಿಸಿದೆ.

ಸಕಲೇಶಪುರ ತಾಲೂಕಿನ ಕೌಕೋಡಿ ಗ್ರಾಮದ ಎಸ್ಟೇಟ್ ಚಾಲಕ ಮಂಕು ಮದ್ಯ ಸೇವಿಸಿ ಶನಿವಾರಸಂತೆ ಯಲ್ಲಿ ಕಾರನ್ನು ಅಡ್ಡಾದಿಡ್ಡಿ ಚಾಲಿಸಿದ್ದು ದಾಖಲಾತಿಯಿಲ್ಲದ ಕಾರಣ ರೂ. ೨೦ ಸಾವಿರ, ಒಂಕರವಳ್ಳಿ ಗ್ರಾಮದ ಪುಟ್ಟರಾಜು ಮದ್ಯ ಸೇವಿಸಿ, ದಾಖಲಾತಿಯಿಲ್ಲದೆ ಬೈಕ್ ಚಾಲಿಸಿದ್ದಕ್ಕೆ ರೂ. ೧೦,೫೦೦, ಕೆ.ಆರ್.ಪೇಟೆ ತಾಲೂಕಿನ ಭೂತನಕೆರೆಯ ಸಂತೋಷ್ ಹೆಲ್ಮೆಟ್, ದಾಖಲಾತಿಯಿಲ್ಲದೇ ೪ ಜನರೊಂದಿಗೆ ಬೈಕ್ ಸವಾರಿ ಮಾಡಿದ್ದಕ್ಕೆ ರೂ. ೧೧ ಸಾವಿರ, ಶನಿವಾರಸಂತೆ ಸಮೀಪದ ಕಾಜೂರು ಗ್ರಾಮದ ಕಿಶೋರ್ ಮದ್ಯ ಸೇವನೆ ಮಾಡಿ ಬೈಕ್ ಚಾಲಿಸಿದ್ದಕ್ಕೆ ರೂ. ೧೦ ಸಾವಿರ ಹಾಗೂ ಶನಿವಾರಸಂತೆಯ ಚೇತನ್ ಹೆಲ್ಮೆಟ್ ಧರಿಸದೆ ಪಟ್ಟಣದಲ್ಲಿ ಬೈಕ್ ಚಾಲಿಸಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ರೂ. ೨ ಸಾವಿರ ದಂಡ ವಿಧಿಸಿದೆ.