ಸೋಮವಾರಪೇಟೆ, ನ. ೧೫: ತಾಲೂಕಿನ ಶಾಂತಳ್ಳಿ ಹೋಬಳಿಯ ಕುಂದಳ್ಳಿ ವೃತ್ತಕ್ಕೆ ಸಂಬAಧಪಟ್ಟ ಗ್ರಾಮಗಳಾದ ಬೆಟ್ಟದಳ್ಳಿ, ಕುಂದಳ್ಳಿ ಗ್ರಾಮಕ್ಕೆ ಸಂಬAಧಿಸಿದAತೆ ತಾ. ೧೭ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಬೆಟ್ಟದಳ್ಳಿ ಗ್ರಾ.ಪಂ. ಸಭಾಂಗಣದಲ್ಲಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪ ತಹಶೀಲ್ದಾರ್ ತುಕ್ರಪ್ಪ ಮೇರ ತಿಳಿಸಿದ್ದಾರೆ. ನಮೂನೆ - ೧ರಲ್ಲಿ ಪೌತಿ / ವಾರಸಾ ಖಾತೆ ಮಾಡಿಕೊಡುವ ಕುರಿತು ಅರ್ಜಿ, ಖಾತಾದಾರರು ಮೃತರಾಗಿರುವ ಸರ್ವೆ ನಂಬರುಗಳ ಪಹಣಿ (ಆರ್.ಟಿ.ಸಿ) ಮೃತರ ಮರಣ ಸಮರ್ಥನ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗಿಯಾಗ ಬಹುದು ಎಂದು ತಿಳಿಸಿದ್ದಾರೆ.