ಸೋಮವಾರಪೇಟೆ, ನ. ೧೫: ಕೊಡಗಿನ ಎರಡೂ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಹೈ ವೋಲ್ಟೇಜ್ ಚುನಾವಣಾ ಪೈಪೋಟಿ ಸ್ಪಷ್ಟವಾಗಿದ್ದು, ಕಾಂಗ್ರೆಸ್‌ನಲ್ಲಿ ಟಿಕೇಟ್‌ಗಾಗಿಯೂ ಪೈಪೋಟಿ ತೀವ್ರಗೊಂಡಿದೆ. ಹಲವಷ್ಟು ನಾಯಕರು ಈಗಾಗಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ‘ಪರಿಚಯ’ವನ್ನು ವಿಸ್ತರಿಸುವ ಕಾರ್ಯ ಮಾಡುತ್ತಿದ್ದಾರೆ.

ಈ ನಡುವೆ ಕಾಂಗ್ರೆಸ್‌ನಿAದ ಸ್ಪರ್ಧಿಸಲು ಇಚ್ಚಿಸುವ ಆಕಾಂಕ್ಷಿಗಳಿಗೆ ನೀಡಲಾಗಿದ್ದ ಹೊಸ ‘ಟಾಸ್ಕ್’ ಅನ್ವಯ ಮಡಿಕೇರಿ ವಿಧಾನ ಸಭಾ ಕ್ಷೇತ್ರದಿಂದ ಈವರೆಗೆ ೬ ಮಂದಿ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಮೂವರು ಟಿಕೇಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಈ ಬಾರಿ ಎಂಎಲ್‌ಎ ಸ್ಥಾನಕ್ಕೆ ಕಾಂಗ್ರೆಸ್‌ನಿAದ ಟಿಕೇಟ್ ಬಯಸುವ ಪ್ರತಿಯೋರ್ವರೂ ಕೆಪಿಸಿಸಿಯ ಕಚೇರಿ ಕಟ್ಟಡ ನಿರ್ಮಾಣ ನಿಧಿಗೆ ರೂ. ೨ ಲಕ್ಷಗಳ ದೇಣಿಗೆ ಪಾವತಿಸ ಬೇಕಿದ್ದು,

(ಮೊದಲ ಪುಟದಿಂದ) ಅದರಂತೆ ಮಾಜಿ ಸಚಿವ ಬಿ.ಎ. ಜೀವಿಜಯ, ಉದ್ಯಮಿ ಹಾಗೂ ದಾನಿ ಹರಪಳ್ಳಿ ರವೀಂದ್ರ, ಮುಖಂಡರಾದ ಡಾ. ಮಂಥರ್ ಗೌಡ, ಹೆಚ್.ಎಸ್. ಚಂದ್ರಮೌಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ಅವರುಗಳು ರೂ. ೨ ಲಕ್ಷ ರೂಪಾಯಿ ಪಾವತಿಸಿ ಮಡಿಕೇರಿ ಕ್ಷೇತ್ರಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಸಿದ್ದಾರೆ.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ವಿಧಾನ ಪರಿಷತ್ ಸದಸ್ಯೆಯಾಗಿ ಸೇವೆ ಸಲ್ಲಿಸಿ ಅನುಭವವಿರುವ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ-ಸಮಾಜಸೇವೆಯ ಮೂಲಕವೂ ಗಮನ ಸೆಳೆದಿರುವ ಕೆ.ಎಸ್. ಪೊನ್ನಣ್ಣ, ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರುಗಳು ಆಕಾಂಕ್ಷಿಗಳಾಗಿ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿ ವಿನಯ್ ಕಾರ್ತಿಕ್, ಕಚೇರಿ ಕಾರ್ಯದರ್ಶಿ ಎಲ್. ನಾರಾಯಣ ಅವರ ಮೂಲಕ ಟಿಕೇಟ್‌ಗಾಗಿ ಅರ್ಜಿ ಸಲ್ಲಿಸಿರುವ ಪ್ರಮುಖರು, ಟಿಕೇಟ್‌ಗಾಗಿ ತಮ್ಮ ಮುಖಂಡರ ಬೆನ್ನುಬಿದ್ದಿದ್ದಾರೆ.

ಟಿಕೇಟ್‌ಗಾಗಿ ಅರ್ಜಿ ಸ್ವೀಕರಿಸುವ ಅವಧಿಯನ್ನು ತಾ. ೧೫ಕ್ಕೆ ಅಂತಿಮವೆAದು ನಿಗದಿಗೊಳಿಸಲಾಗಿತ್ತಾದರೂ, ಹಲವಷ್ಟು ಮುಖಂಡರು ಪಕ್ಷ ಸಂಘಟನೆಯ ಪ್ರವಾಸದಲ್ಲಿರುವ ಹಿನ್ನೆಲೆ ಅವಧಿಯನ್ನು ವಿಸ್ತರಿಸುವ ಬಗ್ಗೆಯೂ ಕೆಪಿಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಕೊಡಗಿನ ೨ ವಿಧಾನ ಸಭಾ ಕ್ಷೇತ್ರಕ್ಕೆ ಒಟ್ಟು ೯ ಮಂದಿ ಟಿಕೇಟ್ ಆಕಾಂಕ್ಷಿಗಳಾಗಿದ್ದು, ಅವಧಿಯನ್ನು ವಿಸ್ತರಿಸಿದರೆ ಇದರ ಪಟ್ಟಿ ಇನ್ನಷ್ಟು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.