ಮಡಿಕೇರಿ, ನ. ೧೫: ಬಾಲ ವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರ, ಚೆಂಬು ಗ್ರಾಮದಲ್ಲಿ ಕ್ರೀಡೋತ್ಸವವು ಭಾನುವಾರ ಆನೆಹಳ್ಳದಲ್ಲಿ ನಡೆಯಿತು.

ಚೆಂಬು ಗ್ರಾಮ ಪಂಚಾಯಿತಿಯ ಸದಸ್ಯ ಗಿರೀಶ್ ಹೊಸೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗೀತಾ ಶಿವರಾಮ ಕಾಚೇಲು, ದಿನೇಶ್ ಎಸ್.ಎನ್ ಸಣ್ಣಮನೆ, ಪೊಡಿಯ ಕೆ.ಎಸ್, ಚಂದ್ರಶೇಖರ ಕಾಚೇಲು, ಸೋಮಣ್ಣ ಕೆ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರ ಇದರ ಅಧ್ಯಕ್ಷರಾದ ವನಿತಾ ವಿಜಯ ಇವರು ವಹಿಸಿದ್ದರು.

ಅಂಗನವಾಡಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಹಾಗೆಯೇ ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಸ್ತೆ ಓಟ, ಹಗ್ಗ ಜಗ್ಗಾಟ, ಮೊಸರು ಕುಡಿಕೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೀಲಾ ಅಶೋಕ, ರೇಣುಕಾ ಜಯರಾಮ, ಶೇಷಪ್ಪ, ಮಕ್ಕಳ ದಿನಾಚರಣೆಯ ಗೌರವಾರ್ಥ ಪುಟಾಣಿ ನಿಧಿಶ್ರೀ ವೇದಿಕೆಯಲ್ಲಿದ್ದರು. ಕ್ರೀಡೋತ್ಸವ ಸಮಿತಿಯ ಅಧ್ಯಕ್ಷರಾದ ಅಶ್ವಿನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ೩೨ ವರ್ಷಗಳ ಕಾಲ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಆನೆಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸರೋಜಿನಿ ಕೆ. ಅವರನ್ನು ಸನ್ಮಾನಿಸಲಾಯಿತು.

ಸರೋಜಿನಿ ಅವರು ಸ್ವಾಗತಿಸಿದರು. ಕೃಷ್ಣಪ್ಪ ಆನೆಹಳ್ಳ ಅವರು ವಂದಿಸಿದರು, ಅರುಣ್ ಆನ್ಯಾಳ ನಿರೂಪಿಸಿದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದ ನಂತರ ಕಾರ್ಯಕ್ರಮ ಸಂಪನ್ನಗೊAಡಿತು.