ಮಡಿಕೇರಿ, ನ.೧೫: ಜಿಲ್ಲೆಯಲ್ಲಿ ಕೃಷಿ ಗಣತಿ ಕೈಗೊಳ್ಳುವ ಸಂಬAಧ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಇತ್ತೀಚೆಗೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಿ.ನಾರಾಯಣ ಅವರು, ೫ ವರ್ಷಕ್ಕೊಮ್ಮೆ ಕೃಷಿ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ತಾಲೂಕು ಮಟ್ಟದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕೃಷಿ ಗಣತಿಯನ್ನು ಗ್ರಾಮ ಲೆಕ್ಕಿಗರು ಕೈಗೊಳ್ಳಲಿದ್ದು, ಕಂದಾಯ ನಿರೀಕ್ಷಕರು ಮೇಲ್ವಿಚಾರಣೆ ನಡೆಸಲಿದ್ದಾರೆ. ಸಾಗುವಳಿ ಹಿಡುವಳಿಯ ಸಂಖ್ಯೆ ಮತ್ತು ವಿಸ್ತೀರ್ಣ, ಭೂ ಬಳಕೆ, ಬೆಳೆ ವಿಧಾನ, ಇನ್‌ಫುಟ್ ಬಳಕೆಯ ವಿಧಾನ ಮತ್ತಿತರ ಆಧಾರದ ಮೇಲೆ ಕೃಷಿ ಕ್ಷೇತ್ರದ ರಚನೆ ಮತ್ತು ಗುಣಲಕ್ಷಣ ವಿವರಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದರು.
ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲೂಕು, ಗ್ರಾಮ ಮಟ್ಟದ ದತ್ತಾಂಶ ಒದಗಿಸಲಾಗುತ್ತದೆ. ಭವಿಷ್ಯದ ಕೃಷಿ ಸಮೀಕ್ಷೆಯನ್ನು ಕೈಗೊಳ್ಳಲು ಸಾಗುವಳಿ ಹಿಡುವಳಿಯ ಅಂಕಿ ಅಂಶಗಳ ಚೌಕಟ್ಟನ್ನು ಒದಗಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಮೊದಲ ಹಂತದಲ್ಲಿ ಮಾಲೀಕತ್ವ, ಹಿಡುವಳಿದಾರರ ಸಂಖ್ಯೆ ಮತ್ತು ಹಿಡುವಳಿಯ ಪ್ರದೇಶದ ವಿಸ್ತೀರ್ಣದ ದತ್ತಾಂಶ, ಸಣ್ಣ, ಅತೀ ಸಣ್ಣ, ಅರೆ ಮಧ್ಯಮ, ಮಧ್ಯಮ, ದೊಡ್ಡ ಹಿಡುವಳಿಯ ವರ್ಗಾಂತರ, ಸಾಮಾಜಿಕ ಗುಂಪುಗಳು, ಹಿಡುವಳಿಯ ಪ್ರಕಾರ, ಗೇಣಿ ವಿವರ, ಮಾಲೀಕತ್ವ, ಭೋಗ್ಯಕ್ಕೆ ಇತರೆ ರೀತಿಯಲ್ಲಿ ಸಾಗುವಳಿ ಮಾಡಿದ ಭೂಪ್ರದೇಶ, ಎರಡನೇ ಹಂತದಲ್ಲಿ ಭೂ ಕಬಳಿಕೆ, ನೀರಾವರಿ, ನೀರಾವರಿ ಸ್ಥಿತಿ, ಬೆಳೆ ಮಾದರಿಯ ವಿವರವಾದ ಮಾಹಿತಿ, ಹಾಗೆಯೇ ಮೂರನೇ ಹಂತದಲ್ಲಿ ಗೊಬ್ಬರ, ರಸಗೊಬ್ಬರ, ಕೀಟನಾಶಕಗಳ ಬಳಕೆ, ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳು, ಸಾಂಸ್ಥಿಕ ಸಾಲ, ಮಣ್ಣಿನ ಆರೋಗ್ಯ ಕಾರ್ಡ್, ಮತ್ತು ಸುಧಾರಿತ ಬೀಜಗಳು, ವಯಸ್ಸು-ಶಿಕ್ಷಣ-ಕುಟುಂಬದ ಗಾತ್ರ ಸಂಕ್ಷಿಪ್ತ ಮಾಹಿತಿ ಕೃಷಿ ಗಣತಿಯಲ್ಲಿ ಒಳಗೊಂಡಿದೆ ಎಂದು ಅವರು ತಿಳಿಸಿದರು. ಕೃಷಿ ಗಣತಿ ಮತ್ತು ಸಮೀಕ್ಷೆಯನ್ನು ಗ್ರಾಮಗಳ ಅಪ್ಲಿಕೇಶನ್ ಸಾಫ್ಟ್ವೇರ್‌ನಲ್ಲಿ ಈ ಮೊದಲೇ ಭರ್ತಿಯಾದ ಗಣಕೀಕೃತ ಭೂ ದಾಖಲೆಗಳ ದತ್ತಾಂಶ ಬಳಕೆ ಮೂಲಕ ಕೃಷಿ ಗಣತಿ ಪ್ರಕ್ರಿಯೆ ಮಾಡಲಾಗುತ್ತದೆ.
ದತ್ತಾಂಶ ಸಂಗ್ರಹಣೆಯಲ್ಲಿ ಅಂತರ್ ನಿರ್ಮಿತ ಮೌಲೀಕರಣ ಪರಿಶೀಲನೆಯೊಂದಿಗೆ ಟ್ಯಾಬ್‌ಗಳು, ಸ್ಮಾರ್ಟ್ ಫೋನ್‌ಗಳ ಬಳಕೆ, ವೆಬ್ ಪೋರ್ಟಲ್ ಮತ್ತು ಡ್ಯಾಶ್ ಬೋರ್ಡ್ ಮೂಲಕ ಮೇಲ್ವಿಚಾರಣೆ, ಮಾಲೀಕರು ಮತ್ತು ಹಿಡುವಳಿದಾರರ ಘಟಕವಾರು ಮಾಹಿತಿಯನ್ನು ಡಿಜಿಟಲೈಸ್ ಮಾಡಲಾಗುತ್ತದೆ. ಗ್ರಾಮ ಮಟ್ಟದಲ್ಲಿ ಡೇಟಾದ ಸಂಸ್ಕರಣೆ ಅಂದಾಜು ಮಾಡುವುದು, ಬಳಕೆದಾರರು ವ್ಯಾಖ್ಯಾನಿಸಿದ ಡೇಟಾ ಪ್ರಸರಣ ಕೋಷ್ಟಕ ರಚನೆ ಮತ್ತು ಪ್ರಸರಣ ಡ್ಯಾಶ್ ಬೋರ್ಡ್ ಮತ್ತಿತರ ಅಂಶಗಳನ್ನು ಕೃಷಿ ಗಣತಿ ಪ್ರಕ್ರಿಯೆಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ದತ್ತಾಂಶ ಸಂಗ್ರಹಣೆ ಸಂದರ್ಭದಲ್ಲಿ ಎಕರೆ, ಹೆಕ್ಟೇರ್, ಗುಂಟಾ ವಿವಿಧ ಪ್ರದೇಶಗಳ ವಿಸ್ತೀರ್ಣ ಘಟಕಗಳನ್ನು ಪರಿಗಣಿಸುವುದು, ಮಾಸ್ಟರ್‌ಗಳೊಂದಿಗೆ ಕೃಷಿ ಗಣತಿ ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳ ನಡುವೆ ಮ್ಯಾಪಿಂಗ್ ಮಾಡುವುದು, ಕೆಲಸವನ್ನು ಕಾರ್ಯಗತಗೊಳಿಸಲು ಸಿಸ್ಟಂ ಅಡ್ಮಿನಿಸ್ಟೆçÃಟರ್, ಜಿಲ್ಲಾ, ಬ್ಲಾಕ್ ಆಫಿಸರ್, ಸೂಪರ್ ವೈಸರ್ ಮತ್ತು ಗಣತಿದಾರರಂತಹ ಆರು ರೀತಿಯ ಮೇಲ್ವಿಚಾರಣೆ ನಡೆಸುವುದು. ಡೇಟಾ ಸಂಗ್ರಹಣೆ ಅವಧಿಯು ಆಗಸ್ಟ್ ೨೨ ರಿಂದ ಡಿಸೆಂಬರ್ ೨೨ರವರೆಗೆ ನಡೆಯಲಿದೆ.
ಕೃಷಿ ಗಣತಿಯನ್ನು ಸರ್ಕಾರದ ನಿರ್ದೇಶನದಂತೆ ಕೈಗೊಳ್ಳಬೇಕು. ಕೃಷಿ ಗಣತಿ ಸಂಬAಧ ವಿವಿಧ ಇಲಾಖೆಗಳ ಸಹಕಾರ ಪಡೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರು ನಿರ್ದೇಶನ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.