ಕೂಡಿಗೆ, ನ. ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಬ್ಯಾಡಗೊಟ್ಟ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಿಗೆ ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಕಾಡಾನೆಗಳ ಹಿಂಡು ಹಾರಂಗಿ ನದಿಯನ್ನು ದಾಟಿ ಮಾದಲಾಪುರ ಗ್ರಾಮದ ಮೂಲಕ ಬಂದು ಕಟಾವಿಗೆ ಬಂದ ಭತ್ತದ ಗದ್ದೆಗಳನ್ನು ತುಳಿದು, ತಿಂದು ಬಾರಿ ನಷ್ಟ ಪಡೆಸಿವೆ.

ಈ ವ್ಯಾಪ್ತಿಯ ತಾಯಪ್ಪ, ಜನಾರ್ದನ, ರಾಜಶೇಖರ ಎಂಬವರ ಜಮೀನಿಗೆ ದಾಳಿ ಮಾಡಿ ಬಾರಿ ನಷ್ಟಪಡಿಸಿವೆ. ಸ್ಥಳಕ್ಕೆ ಕಣಿವೆಯ ಹೆಬ್ಬಾಲೆ ವಿಭಾಗದ ಉಪವಲಯ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.