ಮಡಿಕೇರಿ, ನ. ೧೫: ಕರ್ನಾಟಕ ಸರ್ಕಾರವು ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಭರ್ತಿಗೆ ಸಿದ್ಧತೆ ನಡೆಸುತ್ತಿರುವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ೫೦ ದಿನಗಳ ತರಬೇತಿ ನೀಡಲು ನಿರ್ಧರಿಸಿದೆ.
ಆಸಕ್ತರು ತಾ. ೧೯ ರೊಳಗೆ ಬೆಳಗ್ಗೆ ೧೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ಕಚೇರಿ ದಿನಗಳಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ೦೮೨೧-೨೫೧೫೯೪೪ ದೂರವಾಣಿ ಸಂಖ್ಯೆಯನ್ನು ತರಬೇತಿಗೆ ಸೇರ ಬಯಸುವ ಅಭ್ಯರ್ಥಿಗಳು ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವರಾದ ಡಾ.ಎ.ಖಾದರ್ ಪಾಷ ಅವರು ತಿಳಿಸಿದ್ದಾರೆ.