*ಗೋಣಿಕೊಪ್ಪ, ನ. ೧೫: ಕುಂದಾ ಬಸವೇಶ್ವರ ಬಡಾವಣೆಯ ಬುಡಕಟ್ಟು ಸಮುದಾಯದವರ ಮನೆ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕ ಕೆ.ಜಿ. ಮೊದಲ ಹಂತದಲ್ಲಿ ಒಂದು ಮನೆಗೆ ಮೂರುವರೆ ಲಕ್ಷ ಅನುದಾನದಂತೆ ೭೦ ಮನೆಗಳು ನಿರ್ಮಾಣವಾಗಲಿದೆ.

ಈ ಸಂದರ್ಭ ಮಾತನಾಡಿದ ಶಾಸಕರು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದಾಗ ಸಮಾಜದಲ್ಲಿ ಉತ್ತಮ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದರ ಜೊತೆಗೆ ಸರಕಾರದ ಹಲವಾರು ಯೋಜನೆಗಳ ಫಲಾನುಭವಿಗಳಾಗಲು ಸಾಧ್ಯವಾಗುತ್ತದೆ ಎಂದರು.

ಹಾತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಮ್ಮಟಿರ ದರ್ಶನ್ ನಂಜಪ್ಪ, ಸದಸ್ಯರುಗಳಾದ ಕೆ.ಎಂ. ಶ್ವೇತಾ, ಪಿ.ಜಿ. ಸುಮಿತ್ರ, ತಾಲೂಕು ಪರಿಶಿಷ್ಟ ವರ್ಗ ಇಲಾಖೆಯ ಅಧಿಕಾರಿ ಗುರುಶಾಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಝ್ಮ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ಗಪುö್ಪ ಹಾಗೂ ಫಲಾನುಭವಿಗಳು ಗುತ್ತಿಗೆದಾರರು ಹಾಜರಿದ್ದರು.