ನಾಪೋಕ್ಲು, ನ. ೧೪: ಗ್ರಾಮೀಣ ಪ್ರದೇಶದಲ್ಲಿ ಅಂತರ ಗ್ರಾಮ ಕ್ರೀಡಾಕೂಟವನ್ನು ಆಯೋಜಿಸುವುದರ ಮೂಲಕ ಪಾರಾಣೆ ಕ್ರೀಡಾಮಂಡಳಿ ಜನಾಂಗಗಳ ನಡುವೆ ಸಾಮರಸ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಪಾರಾಣೆ ಕ್ರೀಡಾ ಹಬ್ಬ- ೨೦೨೨ ಪ್ರಯುಕ್ತ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷವೂ ಉತ್ತಮ ರೀತಿಯಲ್ಲಿ ಕ್ರೀಡಾ ಹಬ್ಬವನ್ನು ಆಚರಿಸುವುದರ ಮೂಲಕ ಕ್ರೀಡಾ ಸ್ಪೂರ್ತಿ ಮೆರೆಯಬೇಕು ಎಂದರು.
ಹೈಕೋರ್ಟ್ ಹಿರಿಯ ವಕೀಲ, ಕರ್ನಾಟಕ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ ಕೊಡಗಿನವರು ಕ್ರೀಡೆಯಲ್ಲಿ ಪ್ರಸಿದ್ಧರು. ಕ್ರೀಡಾ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಕ್ರೀಡಾ ಪ್ರೇಮಿಗಳದ್ದಾಗಿದೆ. ಕೊಡಗಿನ ಸಂಸ್ಕೃತಿಯ ಭಾಗವಾದ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಮಕ್ಕಳಿಗೆ ಕ್ರೀಡೆಯಲ್ಲಿ ಅವಕಾಶ ನೀಡುವುದರ ಮೂಲಕ ಜಿಲ್ಲೆಯ ಹೆಚ್ಚಿನ ಕ್ರೀಡಾಪಟುಗಳು ರಾಷ್ಟç, ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ಈ ಸಂದರ್ಭ ೨೫,೦೦೦ ರೂ.ಗಳ ದತ್ತಿನಿಧಿಯನ್ನು ಕ್ರೀಡಾಮಂಡಳಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮುಂದೆಯೂ ನೀಡುವ ಭರವಸೆ ನೀಡಿದರು..
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಹಲವು ವರ್ಷಗಳಿಂದ ಜಿಲ್ಲೆಯ ಕ್ರೀಡಾಪಟುಗಳು ರಾಷ್ಟಿçÃಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಕೊಡಗಿನಲ್ಲಿ ವಿವಿಧ ಜನಾಂಗದ ಕ್ರೀಡಾಕೂಟಗಳು ನಡೆಯುತ್ತಿದ್ದು ಇನ್ನೂ ಹೆಚ್ಚಿನ ಕ್ರೀಡಾ ಬೆಳವಣಿಗೆ ಆಗಬೇಕಿದೆ ಎಂದರು.
ಇದಕ್ಕೂ ಮುನ್ನ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರಿಯಂಡಮ್ಮನ ಬೆಳ್ಯಮಯ್ಯ ತಾ.೧೧ರ ಶುಕ್ರವಾರ ಧ್ವಜಾರೋಹಣವನ್ನು ನೆರವೇರಿಸಿ ಅಂತರಗ್ರಾಮ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಪಿಡಿಓ ಸೆಬಾಸ್ಟಿನ್ ಪೆರೇರ ಕ್ರೀಡಾಕೂಟವನ್ನು ಉದ್ಘಾಟಿಸಿದ್ದರು. ಪಾರಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪನೆರವಂಡ ರಾಜಾ ಪೂವಯ್ಯ, ಪಾರಾಣೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮುಕ್ಕಾಟಿರ ರಜನಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎನ್.ಶಾಂತಿ ಉಪಸ್ಥಿತರಿದ್ದರು. ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಂಡ ಸಾಬಾ ದೇವಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ವಿಜೇತರು
ಅಂತರ ಗ್ರಾಮಗಳ ನಡುವೆ ವಿವಿಧ ಕ್ರೀಡಾಕೂಟಗಳು ಜರುಗಿತು. ಹಾಕಿ ಟೂರ್ನಿಯಲ್ಲಿ ಕಿರುಂದಾಡು ಗ್ರಾಮದ ತಂಡವು ಪ್ರಥಮ ಸ್ಥಾನ, ಬಾವಲಿ ಗ್ರಾಮದ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯದಲ್ಲಿ ಕಿರುಂದಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ಬಲಮುರಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಲಮುರಿ ತಂಡ ಪ್ರಥಮ ಸ್ಥಾನ, ಹಾಗೂ ಕೈಕಾಡು ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಟೆನ್ನಿಕಾಯಿಟ್ ಸ್ಪರ್ಧೆಯಲ್ಲಿ ಕೊಣಂಜಗೇರಿ ಪ್ರಥಮ ಸ್ಥಾನ, ಕಿರುಂದಾಡು ದ್ವಿತೀಯ ಸ್ಥಾನ ಗಳಿಸಿತು. ಥ್ರೋಬಾಲ್ ಸ್ಪರ್ಧೆಯಲ್ಲಿ ಬಲಮುರಿ ಪ್ರಥಮ ಸ್ಥಾನ, ಕೈಕಾಡು ದ್ವಿತೀಯ ಸ್ಥಾನ ಗಳಿಸಿತು. ಮಹಿಳಾ ವಿಭಾಗದಲ್ಲಿ ತಟ್ಟೆ ಎಸೆತದಲ್ಲಿ ಬಲಮುರಿಯ ಜಯಂತಿ ಪ್ರಥಮ ಸ್ಥಾನ, ಕಿರುಂದಾಡಿನ ರುಚಿತ ದ್ವಿತೀಯ ಸ್ಥಾನ, ಕೈಕಾಡಿನ ದಿವಿತ ತೃತೀಯ ಸ್ಥಾನ ಗಳಿಸಿದರು. ಲಕ್ಕಿಕಾರ್ನರ್ ಸ್ಪರ್ಧೆಯಲ್ಲಿ ಕಿರುಂದಾಡಿನ ಬೊಳ್ಳವ್ವ. ಬಲಮುರಿಯ ದೇವಕ್ಕಿ, ಕಿರುಂದಾಡಿನ ಬಳ್ಳಂಡ ಶಾಂತಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಗ್ರಾಮಾಂತರ ವೈಯಕ್ತಿಕ ಚಾಂಪಿಯನ್ ಆಗಿ ಕೈಕಾಡಿನ ಬೊಳ್ಳಂಡ ರೋಶನ್ ಹಾಗೂ ಕಿರುಂದಾಡಿನ ಸೋಮಯ್ಯ ಹೊರಹೊಮ್ಮಿದರು. ಮಹಿಳೆಯರ ವಿಭಾಗದಲ್ಲಿ ಬಲಮುರಿಯ ಜಯಂತಿ ಮಹಿಳೆಯರ ವೈಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದರು. ಗೇಮ್ಸ್ ವಿಭಾಗದಲ್ಲಿ ಕಿರುಂದಾಡು ಗ್ರಾಮ ಚಾಂಪಿಯನ್ ಆದರೆ ಸ್ಪೋರ್ಟ್ಸ್ ವಿಭಾಗದಲ್ಲಿ ಬಲಮುರಿ ಗ್ರಾಮ ಚಾಂಪಿಯನ್ ಆಯಿತು.ಕಿರುಂದಾಡು ಗ್ರಾಮವು ಗ್ರಾಮಾಂತರ ಸಮಗ್ರ ಚಾಂಪಿಯನ್ ಶಿಪ್ ಗಳಿಸಿತು. ಪುರುಷರ ವೈಯಕ್ತಿಕ ಚಾಂಪಿಯನ್ ಆಗಿ ಬೊಳ್ಳಂಡ ರೋಶನ್ ಮತ್ತು ಕುಂಬAಡ ಅಮನ್ ಸೋಮಣ್ಣ ಪಡೆದುಕೊಂಡರು.
ಬಹುಮಾನಗಳನ್ನು ದಿವಂಗತ ಶಿಕ್ಷಕ ಕುಂಡ್ಯೋಳAಡ ಪೂವಣ್ಣ ಅವರ ಜ್ಞಾಪಕಾರ್ಥ ಅವರ ಕುಟುಂಬ ನೀಡಿದ್ದು, ವಿಜೇತ ತಂಡಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ತೀರ್ಪುಗಾರರಾಗಿ ಟಿ.ಆರ್. ಮಂಜು, ಎಂ.ಜಿ.ದೇವಯ್ಯ, ಸಿ.ಕೆ. ತಿಮ್ಮಯ್ಯ, ಸುಮಿತ್ರ, ವಸಂತಿ, ದೇಚಮ್ಮ ಮತ್ತು ಮಂಜು ಚಿಣ್ಣಪ್ಪ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಆರ್.ಎಂ. ಎಸ್ರೈಲ್ವೆಪೋಸ್ಟಲ್ ಡಿಪಾರ್ಟ್ಮೆಂಟ್‌ನ ಕುಂಡ್ಯೋಳAಡ ಹೇಮಾ ಪೂವಣ್ಣ, ಏರ್ ಇಂಡಿಯಾ ಮಾಜಿ ಹಾಕಿ ಆಟಗಾರ್ತಿ ಬಾಕಿಲನ ವನಿತಾ ವಿಜಯಕುಮಾರ್, ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರಿಯಂಡಮ್ಮನ ಬೆಳ್ಯಮಯ್ಯ ,ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕಾದಿರ ಉಮೇಶ್ ಪಳಂಗಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪನೆರವಂಡ ರಾಜಾ ಪೂವಯ್ಯ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕ್ರೀಡಾ ಮಂಡಳಿಯ ದತ್ತಿ ನಿಧಿ ಅಧ್ಯಕ್ಷ ನಾಯಕಂಡ ದೀಪು ಚಂಗಪ್ಪ. ಉಪಾಧ್ಯಕ್ಷೆ ಬೊಳ್ಳಚೆಟ್ಟಿರ ಜಯಂತಿ, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
ಬಟ್ಟೀರ ಡಯನ ಸುಬ್ಬಯ್ಯ ಪ್ರಾರ್ಥಿಸಿದರು. ಮಾತಂಡ ಸೋಮಣ್ಣ ಸ್ವಾಗತಿಸಿ, ಮಂಜು ನಿರೂಪಿಸಿದರು. ಕ್ರೀಡಾ ಮಂಡಳಿಯ ಗೌರವ ಕಾರ್ಯದರ್ಶಿ ದೇವಜನ ಧನೇಶ್ ವಂದಿಸಿದರು. - ದುಗ್ಗಳ