ಕುಶಾಲನಗರ, ನ.೧೪: ನಾಗರಿಕತೆ ಹೆಸರಿನಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಅವನತಿಯ ಅಂಚಿಗೆ ಹೋಗು ತ್ತಿರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ದಕ್ಷಿಣ ಭಾರತದ ಸಾಧು ಸಂತರು ಆತಂಕ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಪೂಂಪ್‌ಹಾರ್ ಬಳಿ ನಡೆದ ಕಾವೇರಿ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸಾಧು ಸಂತರು ಒಕ್ಕೊರಲಿನ ನಿರ್ಣಯ ಕೈಗೊಂಡಿದ್ದು, ನದಿ ಜಲ ಮೂಲಗಳ ರಕ್ಷಣೆ ಹಾಗೂ ನೀರಿನ ಸದ್ಬಳಕೆ ಆಗುವಂತೆ ಸರ್ಕಾರಗಳು ಯೋಜನೆ ರೂಪಿಸಬೇಕೆಂದು ಆಗ್ರಹಿಸಿದ್ದಾರೆ.
ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಅಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ಅಣ್ಣೆöÊ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ತಲಕಾವೇರಿಯಿಂದ ಅಕ್ಟೋಬರ್ ೨೧ ರಂದು ಚಾಲನೆಗೊಂಡ ೧೨ ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ನವೆಂಬರ್ ೧೩ರಂದು ತಮಿಳುನಾಡಿನ ಪೂಂಪ್‌ಹಾರ್‌ನಲ್ಲಿ ಸಮಾಪ್ತಿ ಗೊಂಡಿದ್ದು, ಈ ಸಂದರ್ಭ ಯಾತ್ರಾ ತಂಡ ಮೂಲ ಕಾವೇರಿಯಿಂದ ೧೨ ಕಳಶಗಳಲ್ಲಿ ಒಯ್ದಿದ್ದ ಪವಿತ್ರ ತೀರ್ಥ ವನ್ನು ನದಿ ಸಮುದ್ರ ಸಂಗಮದಲ್ಲಿ ವಿಶೇಷ ಪೂಜಾ ವಿಧಿ ವಿಧಾನ ಗಳೊಂದಿಗೆ ವಿಸರ್ಜಿಸಲಾಯಿತು.