ಗೋಣಿಕೊಪ್ಪಲು, ನ. ೧೪: ಗೋಣಿಕೊಪ್ಪಲು ನಗರ ಒಳಗೊಂಡAತೆ ಕೊಡಗು ಜಿಲ್ಲೆಯ ಪೊನಂ್ನಪೇಟೆ, ಹುದಿಕೇರಿ ಹಾಗೂ ಮಡಿಕೇರಿ ನಗರದಿಂದ ಈವರೆಗೆ ಸುಮಾರು ೨೫ಕ್ಕೂ ಅಧಿಕ ಭಿಕ್ಷುಕರು ಹಾಗೂ ನಿರಾಶ್ರಿತರನ್ನು ಸುಂಟಿಕೊಪ್ಪ ವಿಕಾಸ ಸೇವಾ ಟೃಸ್ಟ್, ಮೈಸೂರಿನ ಶಾರದಾ ಟೃಸ್ಟ್, ಮೈಸೂರು ಜ್ಯೋತಿ ನಗರ ಸರ್ಕಾರಿ ನಿರಾಶ್ರಿತರ ಕೇಂದ್ರ, ಶರಣ್ಯ ಟೃಸ್ಟ್ ಸಾನಿಧ್ಯ ವೃದ್ಧಾಶ್ರಮ ಮೈಸೂರು ಹಾಗೂ ಬೆಂಗಳೂರಿನ ದೊಡ್ಡ ಗುಬ್ಬಿ ಅಟೋರಾಜ ನಿರಾಶ್ರಿತರ ಕೇಂದ್ರಗಳಿಗೆ ದಾಖಲು ಮಾಡಲಾಗಿದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆಯ ಕೊಡಗು ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ತಿಳಿಸಿದ್ದಾರೆ.
ವಿವಿಧ ಸಂಘ ಸಂಸ್ಥೆಗಳು, ಪೌರ ಕಾರ್ಮಿಕರು, ಸ್ವಯಂ ಸೇವಕರು, ವೈದ್ಯರು, ಹಿತೈಷಿಗಳ ಸಹಕಾರದೊಂದಿಗೆ ಕೊಡಗಿನಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಪಣತೊಟ್ಟಿರುವದಾಗಿ ಹೇಳಿದ ಅವರು, ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಸಾಗಾಟಗೊಳಿಸಿದರೂ ಮತ್ತಷ್ಟು ಹೊಸ ಭಿಕ್ಷುಕರು ಪ್ರತ್ಯಕ್ಷವಾಗುತ್ತಿರುವದು ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಕಾರವೂ ಅಗತ್ಯವಿದೆ. ಭಿಕ್ಷುಕರಿಗೆ ಹಣ ನೀಡದೆ ಹಸಿದ ಹೊಟ್ಟೆಗೆ ಆಹಾರ ಕೊಡುವ ಅಭಿಯಾನ ಎಲ್ಲೆಡೆ ಆರಂಭವಾಗಬೇಕು. ಹೊರ ಜಿಲ್ಲೆಯಿಂದಲೂ ಕೊಡಗಿಗೆ ಬಂದು ಸಂಜೆ ವಾಪಾಸ್ಸಾಗುವ ‘ಹೈಟೆಕ್’ ಭಿಕ್ಷುಕರೂ ಇಲ್ಲಿ ಸಿಗುತ್ತಾರೆ. ಇಂತಹವರ ವಿರುದ್ಧ ಪೊಲೀಸರು ಕ್ರಮ ಜರುಗಿಸುವ ಅಗತ್ಯವಿದೆ ಎಂದರು.
ಇದೀಗ ಭಿಕ್ಷುಕರನ್ನು ಕರೆದೊಯ್ಯುತ್ತಿರುವ ಹಿನ್ನೆಲೆ ದಿನವೂ ಭಿಕ್ಷುಕರ ಇರುವಿಕೆ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡುತ್ತಿರುವದಾಗಿಯೂ, ಗೋಣಿಕೊಪ್ಪಲು ಗ್ರಾ.ಪಂ. ನೌಕರ ನೌಶಾದ್, ವರ್ತಕರಾದ ಬಿ.ರಾಜ, ಪ್ರವೀಣ್ ಪೂಜಾರಿ ಒಳಗೊಂಡAತೆ ಹಲವರು ಸಹಕಾರ ನೀಡುತ್ತಿರುವದಾಗಿ ಹೇಳಿದರು. ವಿವಿಧ ಗ್ರಾ.ಪಂ.ಅನುಮತಿ ಪತ್ರ ಹೊಂದಿಕೊAಡು ಕಾನೂನು ಬದ್ಧವಾಗಿ ಭಿಕ್ಷುಕರನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ೭೩೪೯೦೬೨೭೯೧ ಮೊಬೈಲ್ ಸಂಖ್ಯೆಗೆ ಕರೆಮಾಡಬಹುದು ಎಂದು ಕುಸುಮಾವತಿ ತಿಳಿಸಿದ್ದಾರೆ.