ಸಿದ್ದಾಪುರ, ನ. ೧೪: ಅಮ್ಮತ್ತಿಯ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಹಾಸ್ಪಿಟಲ್ ನೂತನವಾಗಿ ನಿರ್ಮಾಣವಾದ ಡಯಾಲಿಸಿಸ್ ಘಟಕ ಹಾಗೂ ದಂತ ಚಿಕಿತ್ಸಾ ಘಟಕವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಟಾಟಾ ಸಂಸ್ಥೆ ಹಾಗೂ ರೂರಲ್ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆರ್.ಐ.ಹೆಚ್.ಪಿ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದು, ದಾನಿಗಳ ಸಹಾಯದಿಂದ ಇದೀಗ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ.
ವೀರಾಜಪೇಟೆಯ ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ನೂತನವಾಗಿ ನಿರ್ಮಾಣವಾದ ದಂತ ಚಿಕಿತ್ಸಾ ಘಟಕವನ್ನು ವೀರಾಜಪೇಟೆಯ ದಂತ ಮಹಾವಿದ್ಯಾಲಯದ ಡೀನ್ ಡಾ. ಸುನಿಲ್ ಮುದ್ದಯ್ಯ ಉದ್ಘಾಟಿಸಿ, ಮಾತನಾಡಿದರು. ಆರ್.ಐ.ಹೆಚ್.ಪಿ ಆಸ್ಪತ್ರೆ ೧೯೭೬ ನಿರ್ಮಾಣವಾಗಿದ್ದು, ಅಂದಿನ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಇತ್ತು ಇದೀಗ ಮೇಲ್ದರ್ಜೆಗೆ ಏರಿರುವುದು ಈ ಭಾಗದ ಜನರಿಗೆ ಮತ್ತಷ್ಟು ಉಪಯೋಗವಾಗಲಿದೆ ಎಂದರು.
ಡಯಾಲಿಸಿಸ್ ಘಟಕವನ್ನು ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚೆಗಿನ ದಿನಗಳಲ್ಲಿ ಜನರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು, ಗುಣಮಟ್ಟದ ಆಸ್ಪತ್ರೆಗಳ ಅಗತ್ಯವಿದೆ. ಗುಣಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದರು.
ರಿಬಿಲ್ಡ್ ಕೊಡಗು ಸಂಚಾಲಕ ಕೆ.ಎ. ಕುಶಾಲಪ್ಪ ಮಾತನಾಡಿ, ರೀಬಿಲ್ಡ್ ಕೊಡಗು ವತಿಯಿಂದ ಹಲವು ಭಾಗದಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಆಸ್ಪತ್ರೆಯ ಅಭಿವೃದ್ಧಿಗೆ ಸಹಕರಿಸಲಾಗುತ್ತಿದೆ ಎಂದರು.
ಆರ್.ಐ.ಹೆಚ್.ಪಿ. ಟ್ರಸ್ಟಿ ಹಾಗೂ ಟಾಟಾ ಸಂಸ್ಥೆಯ ನಿರ್ದೇಶಕ ಡಾ.ಪಿ.ಜಿ ಚಂಗಪ್ಪ ಮಾತನಾಡಿ, ಸ್ಥಳೀಯರು ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗೆ ತೆರಳಬೇಕಾಗಿತ್ತು. ಆರ್.ಐ.ಹೆಚ್.ಪಿ ಆಸ್ಪತ್ರೆಯಲ್ಲಿ ಇದೀಗ ನುರಿತ ವೈದ್ಯರು,ಸರ್ಜರಿಗೆ ಅಗತ್ಯವಿರುವ ಸಲಕರಣೆಗಳು ಲಭ್ಯವಿದೆ. ಕಡಿಮೆ ದರದಲ್ಲಿ ಐ.ಸಿ.ಯು ಸೇರಿದಂತೆ ಇತರೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ಆರ್.ಐ.ಹೆಚ್.ಪಿ ಟ್ರಸ್ಟಿ ಡಾ.ಎಂ.ಎA ಚಂಗಪ್ಪ ಮಾತನಾಡಿ, ಆಸ್ಪತ್ರೆಯಲ್ಲಿ ಸಿಟಿ ಸ್ಕಾö್ಯನಿಂಗ್ ಘಟಕ ಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿದೆ. ಅಮೇರಿಕಾದ ಕೊಡವ ಕೂಟ ಸಿಟಿ ಸ್ಕಾö್ಯನಿಂಗ್ ಘಟಕವನ್ನು ೧.೧೬ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಭರವಸೆಯನ್ನು ನೀಡಿದೆ ಎಂದರು.
ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿ ಡಾ.ಚಂದ್ರು ಮಾತನಾಡಿ, ಆಸ್ಪತ್ರೆ ೪೫ ಬೆಡ್‌ಗಳನ್ನು ಹೊಂದಿದ್ದು, ೭ ಮಂದಿ ತಜ್ಞರಿದ್ದಾರೆ ಎಂದರು.
ಹೈಕೋರ್ಟ್ ಹಿರಿಯ ವಕೀಲರಾದ ಪುಗ್ಗೇರ ದೇವಯ್ಯ ಮಾತನಾಡಿ, ಈ ಆಸ್ಪತ್ರೆಯಿಂದ ಗುಣಮಟ್ಟದ ಸೇವೆ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕAಬೀರAಡ ವಿದ್ಯಾ ಅಪ್ಪಯ್ಯ, ಎಂ.ಬಿ. ಗಣಪತಿ, ಮಾತನಾಡಿದರು. ಇದೇ ಸಂದರ್ಭ ಆಸ್ಪತ್ರೆಗೆ ಕೊಡಗು ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಟ್ರಸ್ಟಿಗಳಾದ ಎ.ಎಸ್. ಮುತ್ತಣ್ಣ, ಕೆ.ಪಿ ಉತ್ತಪ್ಪ, ಬೋಸ್ ಮಂದಣ್ಣ, ಸಿ.ಯು ಅಶೋಕ್, ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಶುಭಾ, ಡಾ. ಪಂಡಿತ್ ಇದ್ದರು. ಸಿಬ್ಬಂದಿ ಸುಮಿ ಪ್ರಾರ್ಥಿಸಿ, ಟ್ರಸ್ಟಿ ಎಂ.ಬಿ. ಗಣಪತಿ ಸ್ವಾಗತಿಸಿ, ಡಾ. ಶುಭ ನಿರೂಪಿಸಿ, ಡಾ. ಚಂದ್ರು ವಂದಿಸಿದರು.
-ವಾಸು