ಮಡಿಕೇರಿ, ನ. ೧೩: ನಿರುದ್ಯೋಗಿ ವಿದ್ಯಾವಂತ ಗ್ರಾಮೀಣ ಯುವಕ ಯುವತಿಯರಿಗೆ ಪಶುಪಾಲನೆಯಲ್ಲಿ ಸ್ವಯಂ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೈತ್ರಿ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ೩ ತಿಂಗಳ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

೧೦ನೇ ತರಗತಿ ಉತ್ತೀರ್ಣರಾಗಿದ್ದು, ೧೮ ರಿಂದ ೩೮ ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ತಾ. ೨೦ ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡುವುದು, ಲಸಿಕೆ ಹಾಕುವುದು, ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ, ಜಾನುವಾರು ವಿಮೆ, ಜಾನುವಾರುಗಳ ಆಹಾರ ಸಮತೋಲನೆ, ಹಾಲು ಇಳುವರಿ ದಾಖಲಿಸುವುದು, ರಾಷ್ಟಿçÃಯ ಡಾಟಾಬೇಸ್ ಮಾಹಿತಿ ನಮೂದಿಸುವುದು ಹಾಗೂ ಇತರೆ ಇಲಾಖಾ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡಲಾಗುವುದು.

ತರಬೇತಿಯ ಅವಧಿಯಲ್ಲಿ ಮಾಹೆಯಾನ ರೂ. ೧,೫೦೦ ಸ್ಟೆöÊಪೆಂಟ್ ನೀಡಲಾಗುವುದು. ತರಬೇತಿಯ ನಂತರ ಇಲಾಖೆಯು ನಿಗದಿಪಡಿಸಿದ ಸ್ಥಳಗಳಲ್ಲಿ ಇಲಾಖೆಯ ದೈನಂದಿನ ಕೆಲಸ ಕಾರ್ಯಗಳಿಗೆ ನಿಯೋಜಿಸಲಾಗುವುದು. ಮೊದಲ ವರ್ಷದ ಅವಧಿಗೆ ಮಾಹೆಯಾನ ೧,೫೦೦ ಟೇಪರಿಂಗ್ ಅನುದಾನ ನೀಡಲಾಗುವುದು. ನಂತರ ಕೈಗೊಂಡ ಪ್ರತಿ ಕೃತಕ ಗರ್ಭಧಾರಣೆಗೆ ರೂ.೫೦ ಹಾಗೂ ಜನಿಸಿದ ಪ್ರತಿ ಕರುವಿಗೆ ರೂ. ೫೦ ರಂತೆ ಪ್ರೋತ್ಸಾಹ ಧನ ನೀಡಲಾಗುವುದು. ಹಾಗೂ ಇಲಾಖೆಯ ಲಸಿಕೆ ಹಾಕುವ ಹಾಗೂ ಇತರೆ ಇಲಾಖಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸರ್ಕಾರದಿಂದ ನಿಗದಿಪಡಿಸಿದ ಗೌರವಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯಾಧಿಕಾರಿಗಳನ್ನು ಅಥವಾ ಉಪ ನಿರ್ದೇಶಕರು ಪಶುಪಾಲನಾ ಇಲಾಖೆ ಮಡಿಕೇರಿ ಇವರ ದೂ. ೯೬೮೬೨೧೭೯೧೫ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ್ ಭಟ್ ತಿಳಿಸಿದ್ದಾರೆ.