ಮಡಿಕೇರಿ, ನ. ೧೩: ಮಡಿಕೇರಿ ವಿಧಾನಸಭಾ ಕ್ಷೇತ್ರದ ಮೂರ್ನಾಡು ವಲಯ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮತ್ತು ವಲಯ ಕಾರ್ಯಕರ್ತರ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಹಿರಿಯ ಮುಖಂಡರು, ಅಭಿವೃದ್ಧಿ ವಿಚಾರದಲ್ಲಿ ಶಾಸಕರುಗಳ ವೈಫಲ್ಯ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ವರದಾನ ವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸ ಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚಂದ್ರಮೌಳಿ, ಯುವ ಮುಖಂಡ ಡಾ. ಮಂಥರ್ ಗೌಡ, ಕೆಪಿಸಿಸಿ ವಕ್ತಾರ ಟಿ.ಪಿ. ರಮೇಶ್, ಜಿ.ಪಂ ಮಾಜಿ ಅಧ್ಯಕ್ಷರುಗಳಾದ ದೀರ್ಘಕೇಶಿ ಶಿವಣ್ಣ, ಪಾಪು ಸಣ್ಣಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷÀ ತೆನ್ನಿರ ಮೈನಾ, ಡಿಸಿಸಿ ಕಾರ್ಯದರ್ಶಿ ಮಂದ್ರಿರ ಮೋಹನ್ ದಾಸ್, ಕೆಪಿಸಿಸಿ ವಿಭಾಗೀಯ ಸಂಚಾಲಕ ಐಚೆಟ್ಟಿರ ಚಿಣ್ಣಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೇಶವ ಹಾಗೂ ಚೆರಿಯಮನೆ ಭಾರ್ಗವ ಮಾತನಾಡಿ ಚುನಾವಣೆಯನ್ನು ಎದುರಿಸಲು ಈಗಿನಿಂದಲೇ ಕಾರ್ಯ ಪ್ರವೃತ್ತರಾಗು ವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನೆರವಿನ ಹಸ್ತ ಚಾಚುತ್ತಿರುವ ಡಾ. ಮಂಥರ್ ಗೌಡ ಅವರನ್ನು ಮಡಿಕೇರಿ ಬ್ಲಾಕ್ ಮಹಿಳಾ ಘಟಕದ ವತಿಯಿಂದ ಸನ್ಮಾನಿಸ ಲಾಯಿತು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಡಿಸಿಸಿ ಸದಸ್ಯರಾದ ಮುಂಡAಡ ಭಾಗೇಶ್, ಕೆ.ಯು. ಅಬ್ದುಲ್ ರಜಾಕ್, ಪ್ರಕಾಶ್ ಆಚಾರ್ಯ, ಖಾಲಿದ್ ಹಾಕತ್ತೂರು, ಉಪಾಧ್ಯಕ್ಷರಾದ ಧನಂಜಯ, ಪ್ರಭುರೈ, ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಸಂಘಟನಾ ಕಾರ್ಯದರ್ಶಿ ರವಿಗೌಡ, ಮರಗೋಡು ವಲಯಾಧ್ಯಕ್ಷ ವಿವೇಕಾ ನಂದ, ಹೊದ್ದೂರು ವಲಯಾಧ್ಯಕ್ಷÀ ಇಬ್ರಾಹಿಂ, ಸ್ಥಳೀಯ ಪ್ರಮುಖರಾದ ಮೊಹಮ್ಮದ್ ಆಲಿ, ಖಾದರ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಹಾಗೂ ವಲಯಾಧ್ಯಕ್ಷ ಕೇಶವ ಅವರ ನೇತೃತ್ವದಲ್ಲಿ ಇತರ ಪಕ್ಷಗಳ ಕಾರ್ಯಕರ್ತರಾದ ಟಿ.ಎಸ್. ರಮ್ಯ, ಕೆ. ಬಾಬು, ಸಾದಿಕ್, ಬೇಬಿ, ಹೆಚ್.ಟಿ. ಶಶಿ, ದೇವಜನ ಗಣಪತಿ, ಎ.ಜೆ. ಕಾವೇರಪ್ಪ, ಕಾವ್ಯ, ರಾಜ, ಎನ್.ಎಂ. ರಜಾಕ್, ಟಿ.ಎನ್. ಶ್ರೀನಿವಾಸ್, ಟಿ.ಎಂ. ದಿನೇಶ್, ಹೆಚ್.ಎಲ್. ಕಮಲ, ಹೆಚ್.ಎ. ಸೋಮಪ್ಪ, ಕೆ.ಹೆಚ್. ಸುಬೇರ್, ಸತೀಶ್, ಸುಬ್ರಮಣಿ, ಸುನೀಲ್, ರವಿ, ಸೋಮಯ್ಯ, ಸುಂದರ, ಅಯ್ಯಪ್ಪ, ಉಂಬಾಯಿ, ಮೊಯ್ದು, ರಾಕೇಶ್, ಸುಲ್ತಾನ್, ಕುಂಞ ಅಹಮದ್, ಲೋಕೇಶ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಮಂದಿ ಇದೇ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೇಶವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಿವು ವಂದಿಸಿದರು. ಸಾದಿಕ್ ಹಾಗೂ ಮೀನಾಕ್ಷಿ ಕೇಶವ ಕಾರ್ಯಕ್ರಮ ನಿರೂಪಿಸಿದರು.