ಮಡಿಕೇರಿ, ಅ. ೧೩: ಶ್ರೀಗಂಧ ಮರವನ್ನು ಅಕ್ರಮವಾಗಿ ಕಡಿದು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಉಪ ಅರಣ್ಯ ವಿಭಾಗ ಯಶಸ್ವಿಯಾಗಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ತೋಟವೊಂದರಲ್ಲಿದ್ದ ಗಂಧದ ಮರವನ್ನು ಕಡಿದು ನಾಟಗಳನ್ನು ಪರಿವರ್ತಿಸಿ ಸಾಗಾಟಕ್ಕೆ ಮುಂದಾಗುತ್ತಿದ್ದ ಕುಶಾಲನಗರ ತಾಲೂಕಿನ ರಂಗಸಮುದ್ರ ಗ್ರಾಮದ ಪಿ.ಆರ್. ಪ್ರಸಾದ್ ಬಂಧಿತ ಆರೋಪಿ.

ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ತಂಡ ಮರದ ನಾಟ ಸಹಿತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಭಾಷ ಮಾರ್ಗದರ್ಶನ, ಮಡಿಕೇರಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್, ಸಚಿನ್, ಅರಣ್ಯ ರಕ್ಷಕರಾದ ಸಂದೇಶ್, ಯತೀಶ್, ವಾಸುದೇವ್, ಸಿಬ್ಬಂದಿಗಳಾದ ಅಜಿತ್, ಮೋಹನ್, ಮಹೀರ್, ಅನಿಲ್, ನವೀನ್ ಭಾಗವಹಿಸಿದ್ದರು.