ಸುAಟಿಕೊಪ್ಪ: ಸೋಮವಾರಪೇಟೆ ಹೋಬಳಿಯ ಮಾದಾಪುರ ವೃತ್ತದ ಪೌತಿ ಖಾತೆ ಆಂದೋಲನವನ್ನು ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕಂದಾಯ ಪರಿವೀಕ್ಷಕ ಪ್ರಹ್ಲಾದ್ ಸಮ್ಮುಖದಲ್ಲಿ ನಡೆಸಲಾಯಿತು.
ಕುಂಬೂರು, ಜಂಬೂರು, ಮೂವತೊಕ್ಲು, ಹಾಡಗೇರಿ, ಇಗ್ಗೋಡ್ಲು, ಕಾಂಡನಕೊಲ್ಲಿ, ಕಡಗದಾಳು, ಕೊಪ್ಪತ್ತೂರು ಭಾಗಗಳ ಗ್ರಾಮಸ್ಥರು ಈ ಸಂದರ್ಭ ಅರ್ಜಿಗಳನ್ನು ಸಲ್ಲಿಸಿದರು.
ಪೌತಿ ಖಾತೆ ಆಂದೋಲನ ಸಭೆಯನ್ನು ಉದ್ದೇಶಿಸಿ ಕಂದಾಯ ಪರಿವೀಕ್ಷಕ ಪ್ರಹ್ಲಾದ್ ಮಾತನಾಡಿ, ಬಡಜನರು, ಕೃಷಿಕರಿಗೆ ಅಧಿಕೃತ ದಾಖಲಾತಿಗಳನ್ನು ಸರಿದೂಗಿಸುವ ದಿಸೆಯಲ್ಲಿ ರಾಜ್ಯ ಸರಕಾರವು ಜಿಲ್ಲಾಡಳಿತದ ಮೂಲಕ ಪ್ರತಿ ಹೋಬಳಿ ಕೇಂದ್ರದ ಕಂದಾಯ ಇಲಾಖೆಯ ಮೂಲಕ ಅರ್ಜಿದಾರರ ದಾಖಲಾತಿUಳನ್ನು ಪಡೆದು ತಿದ್ದುಪಡಿ ಪರಿಶೀಲನೆಯನ್ನು ನಡೆಸಿ ಮೂಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭ ಗ್ರಾಮಸ್ಥರು, ಗ್ರಾಮ ಲೆಕ್ಕಿಗರಾದ ಚಂದನ ಹಾಜರಿದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮವು ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಉಪ ತಹಶೀಲ್ದಾರ ಕೆ.ಜಿ. ಮಧುಸೂದನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗ್ರಾಮದ ವ್ಯಾಪ್ತಿಯ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಆಯಾ ಗ್ರಾಮಗಳಲ್ಲಿ ಪೌತಿ ಖಾತೆಯ ಬದಲಾವಣೆ, ಪಟ್ಟೆದಾರಿಕೆ, ಜನತೆಯ ಪಹಣಿಯ ಬದಲಾವಣೆ ಸೇರಿದಂತೆ ವಿವಿಧ ತಿದ್ದುಪಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರುಗಳಿಂದ ಅರ್ಜಿಗಳನ್ನು ಪಡೆಯಲಾಯಿತು. ಗ್ರಾಮದ ೨೦ಕ್ಕೂ ಹೆಚ್ಚು ರೈತರ ಅರ್ಜಿಗಳನ್ನು ನಿಯಮಾನುಸಾರವಾಗಿ ಪರಿಶೀಲನೆ ನಡೆಸಿ ಯೋಜನೆ ಕ್ರಮವನ್ನು ಕೈಗೊಳ್ಳಲು ಪಡೆಯಲಾಯಿತು. ಅದರಂತೆ ಕಾರ್ಯಗತಗೊಳಿಸಲಾಗುವುದು ಎಂದು ಉಪ ತಹಶೀಲ್ದಾರ್ ಮಧುಸೂದನ್ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್, ಹೆಚ್.ಎಸ್. ರವಿ, ರತ್ನಮ್ಮ, ಚಂದ್ರು, ಕಂದಾಯ ನಿರೀಕ್ಷಿಕ ಸಂತೋಷ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಸೇರಿದಂತೆ ಕೂಡಿಗೆ, ಮಾದಲಾಪುರ, ಸೀಗೆಹೊಸೂರು, ಭುವನಗಿರಿ, ಹುದುಗೂರು ವ್ಯಾಪ್ತಿಯ ರೈತರು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ನಾಡ ಕಚೇರಿಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನದಂತೆ ದೊಡ್ಡಕೊಡ್ಲಿ ವೃತ್ತ ವ್ಯಾಪ್ತಿಯ ಗ್ರಾಮಗಳ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ನಡೆಯಿತು.
ಹೋಬಳಿಯ ದೊಡ್ಡಕೊಡ್ಲಿ ವೃತ್ತಕ್ಕೆ ಸಂಬAಧಿಸಿದ ಗ್ರಾಮಗಳಾದ ದೊಡ್ಡಕೊಡ್ಲಿ, ಕಲ್ಲಳ್ಳಿ, ನಂದಿಪುರ, ಕಿರಿಕೊಡ್ಲಿ, ಕೆರಗನಹಳ್ಳಿ, ಕೆಲಕೊಡ್ಲಿ, ಅರಕನಹಳ್ಳಿ, ಹಂಪಾಪುರ, ಕಸೂರು, ಹೊಸಳ್ಳಿ, ಶಾಂತಪುರ, ಊರುಗುತ್ತಿ, ಕ್ಯಾತೆ, ಈಚಲಪುರ, ಮಳ್ಳೇಪುರ, ನೀರುಗುಂದ, ಜನಾರ್ಧನಹಳ್ಳಿ, ಮಾವಿನಹಳ್ಳಿ, ಮನುಗನಹಳ್ಳಿ ಮತ್ತು ಮಾಗಡಹಳ್ಳಿ ಗ್ರಾಮಗಳ ಗ್ರಾಮಸ್ಥರು ಸಲ್ಲಿಸಿದ ಅರ್ಜಿಗಳನ್ನು ಉಪ ತಹಶೀಲ್ದಾರ್ ಪುರುಷೋತ್ತಮ ಸ್ವೀಕರಿಸಿದರು.