ವೀರಾಜಪೇಟೆ, ನ. ೧೩: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ೨೦೦೭ರ ಯೋಜನೆಯಡಿಯಲ್ಲಿ ನೋಂದಣೆ ಪಡೆದ ಕಾರ್ಮಿಕರು ಸರಕಾರದ ಸೌಲಭ್ಯ ಗಳನ್ನು ಪಡೆದುಕೊಳ್ಳಲು ಮುಂದಾಗ ಬೇಕು ಎಂದು ವೀರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ. ಮಾದಪ್ಪ ಹೇಳಿದರು. ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕೊಡಗು ಡಿಸ್ಟಿçಕ್ಟ್ ಬಿಲ್ಡಿಂಗ್ ವಕರ್ಸ್ ಯೂನಿಯನ್ ಸಂಘಟನೆಯ ೧೮ನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ೨೦೨೨ರ ಸಾಲಿನ ಪ್ರಕಾರ ನೋಂದಣೆ ಪಡೆದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯುವ ಸೌಲಭ್ಯ ಎಲ್.ಕೆ.ಜಿ.ಯಿಂದ ಮುಂದಿನ ಉನ್ನತ ಶಿಕ್ಷಣದವರೆಗೆ ಇದೆ.
ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು ಎಂದ ಮಾದಪ್ಪ ಅವರು, ಕಾರ್ಮಿಕರ ಇಬ್ಬರು ಮಕ್ಕಳ ವಿವಾಹಕ್ಕೆ ರೂ. ೬೦ ಸಾವಿರ ಸಹಾಯಧನ ನಂತರ ಮಗುವಿನ ಜನನಕ್ಕೆ ರೂ. ೫೦ ಸಾವಿರ ಮತ್ತು ಅಪಘಾತದಿಂದ ಮೃತಪಟ್ಟವರಿಗೆ ರೂ. ೫ ಲಕ್ಷ ಸಾಧಾರಣ ಮರಣಕ್ಕೆ ರೂ. ೭೫ ಸಾವಿರದಿಂದ ರೂ. ೨ ಲಕ್ಷದವರೆಗೆ ವೈದ್ಯಕೀಯ ಸಹಾಯ ದೊರಕುತ್ತದೆ. ೬೦ ವರ್ಷ ಮೇಲ್ಪಟ್ಟ ವಯಸ್ಕರಿಗೆ ಪಿಂಚಣಿ ರೂ. ೨ ಸಾವಿರ ನೀಡ ಲಾಗುತ್ತಿದ್ದು, ಇದು ಬಡ ಕಾರ್ಮಿಕರಿಗೆ ತಲುಪುವಂತಾಗಲಿ ಎಂದರು.
ಬಿಲ್ಡಿAಗ್ ವಕರ್ಸ್ ಯೂನಿಯನ್ ಸಂಘಟನೆಯ ಕಾನೂನು ಸಲಹೆಗಾರ ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ಸಂಘಟನೆಯೊAದಿಗೆ ಕಾರ್ಮಿಕರು ಹೊಂದಾಣಿಕೆಯಿAದ ಸಮಸ್ಯೆಗಳು ಬಾರದಂತೆ ನಡೆದುಕೊಳ್ಳುವು ದರೊಂದಿಗೆ ಸಂಘಟನೆ ಮೂಲಕ ಕಾರ್ಮಿಕರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತಾಗಬೇಕು ಎಂದರು. ಮಡಿಕೇರಿ ಕಾರ್ಮಿಕ ಇಲಾಖೆಯ ಸಹಾಯಕ ಅಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆ ಮೂಲಕ ಸರಕಾರ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಖಾತೆಗೆ ರೂ. ೫ ಸಾವಿರ ಹಾಗೂ ಎರಡನೇ ಸಂದರ್ಭ ರೂ. ೩ ಸಾವಿರವನ್ನು ಧನ ಸಹಾಯ ಹಾಗೂ ಕಾರ್ಪೆಟಿಂಗ್, ಗಾರೆ ಕೆಲಸಗಾರರು, ಪ್ಲಂಬಿAಗ್, ಎಲೆಕ್ಟಿçಷಿಯನ್, ಬಾರ್ಬೆಂಡಿಗ್, ಪೆಂಟಿAಗ್ ಕೆಲಸ ಮಾಡುವ ಕಾರ್ಮಿಕರಿಗೂ ಆಹಾರ ಕಿಟ್ಗಳನ್ನು ವಿತರಿಸಲಾಗಿದೆ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಜಿ. ವರ್ಗಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೮ ವರ್ಷಗಳಿಂದ ಯಾವುದೇ ಸಮಸ್ಯೆಗಳಿಲ್ಲದೆ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದು ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಟ್ಟಂತ ಸರಕಾರದ ಕಾರ್ಮಿಕ ಇಲಾಖೆ ಮುಂದೆಯೂ ಸಹಕಾರ ನೀಡುವಂತಾಗಲಿ. ಕಾರ್ಮಿಕರು ತಮ್ಮ ಗುರುತಿನ ಚೀಟಿಯನ್ನು ನವೀಕರಣ ಗೊಳಿಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಹೇಳಿದರು. ವೀರಾಜಪೇಟೆ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಪಿ.ಜಿ. ಸುಮೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಪವಿತ್ರನ್, ಖಜಾಂಚಿ ಪಿ.ಆರ್. ಮುರುಗೇಶ್, ಎಂ.ಕೆ. ಬಾಬು, ಕಾರ್ಮಿಕ ಇಲಾಖೆಯ ಸಹಾಯಕ ಅಧಿಕಾರಿ ಎಸ್. ನವೀನ್ ಉಪಸ್ಥಿತರಿದ್ದರು. ಸಂಘದ ಅಂತೋಣಿ ಮ್ಯಾಥ್ಯು ಸ್ವಾಗತಿಸಿ, ನಿರೂಪಿಸಿದರು. ಸಭೆಯಲ್ಲಿ ಈ-ಶ್ರಮ್ ಕಾರ್ಡ್, ಬಸ್ಪಾಸ್ ಮತ್ತು ಕಾರ್ಮಿಕ ಗುರುತಿನ ಚೀಟಿಯನ್ನು ಅತಿಥಿಗಳು ವಿತರಿಸಿದರು.