ವೀರಾಜಪೇಟೆ, ನ. ೧೩: ವೀರಾಜಪೇಟೆ ತಾಲೂಕು ಹಾಗೂ ಜಿಲ್ಲಾಮಟ್ಟದ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೊಂಡ ಗುಂಡಿಗಳಾಗಿ ವಾಹನಗಳು ಸಂಚಾರ ಮಾಡುವುದೇ ಸಮಸ್ಯೆಯಾಗಿದ್ದು. ಸರ್ಕಾರ, ಲೋಕೋಪಯೋಗಿ ಇಲಾಖೆ ಇನ್ನು ಎರಡು ವಾರದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿದ್ದರೆ ಜೆಡಿಎಸ್ ಪಕ್ಷದ ತಾಲೂಕು ಸಮಿತಿಯಿಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಆಗ್ರಹಿಸಿ ಜಾತ್ಯತೀತ ಜನತಾದಳದ ರಾಜ್ಯ ವಕ್ತಾರ-ಕಾರ್ಯದರ್ಶಿ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವೈ.ಎಸ್. ಸಿದ್ದೆಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಮೇರಿಯಂಡ ಸಂಕೇತ್ ಪೂವಯ್ಯ, ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬೇರೆ ದೇಶಕ್ಕಿಂತ ಹೆಚ್ಚು ವಾಹನ ತೆರಿಗೆಯನ್ನು ನಮ್ಮ ದೇಶದಲ್ಲಿ ಕೊಡುತ್ತಿದೆ. ಸರಕಾರ ಅಧಿಕಾರಿಗಳು ಅಂಕಿ-ಅAಶ ನೀಡುತ್ತಾರೆ ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ, ಈ ಮನವಿಯನ್ನು ಶಾಸಕರ ಗಮನಕ್ಕೆ ತಂದು ಸರಕಾರಕ್ಕೆ ಕೂಡಲೇ ತಲುಪಿಸುವಂತೆ ಹೇಳಿದರು.

ಜೆಡಿಎಸ್ ತಾಲೂಕು ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಇಲಾಖೆಗೆ ಸೇರಿದ ಪಟ್ಟಣಕ್ಕೆ ಒಳಗೊಂಡAತೆ ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಿಲ್ಲ. ದ್ವಿಚಕ್ರ ವಾಹನ ಚಾಲಕರು ಜೀವಕೈಯಲ್ಲಿಡಿದು ಸಂಚರಿಸುವAತಾಗಿದೆ. ಆದ್ದರಿಂದ ಇನ್ನು ಎರಡು ವಾರದಲ್ಲಿ ರಸ್ತೆ ಅಭಿವೃದ್ಧಿಗೊಳಿಸುವಂತಾಗಬೇಕು. ಇಲ್ಲವಾದಲ್ಲಿ ಪಕ್ಷದ ವತಿಯಿಂದ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಮನವಿ ಸಲ್ಲಿಸುವ ಸಂದರ್ಭ ಜೆಡಿಎಸ್ ಪಕ್ಷದ ಮುಖಂಡರಾದ ಪಂದ್ಯAಡ ರವಿ ಮಾದಪ್ಪ, ಆರ್.ಕೆ. ಸಕ್ಲೇನ್, ಅಪ್ಪಂಡೆರವAಡ ಸನ್ನು ಕುಶಾಲಪ್ಪ, ಟಿ.ಆರ್. ಹರ್ಷ, ಸಾಧಲಿ, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಮಜೀದ್, ಜುಬೈದ ನಬುವತ್, ಪಾಣತ್ತಲೆ ಸತ್ಯ ಮತ್ತಿತರರು ಹಾಜರಿದ್ದರು.