ಮಡಿಕೇರಿ, ನ. ೧೧ : ಕಾಫಿ ಉದ್ಯಮದಲ್ಲಿ ನವನವೀನ ತಾಂತ್ರಿಕತೆ ಬಳಸಿಕೊಂಡು ಅತ್ಯುತ್ತಮ ಗುಣಮಟ್ಟದ ಕಾಫಿ ಉತ್ಪಾದನೆಗೆ ‘ಮೇಕ್ ಇನ್’ ಇಂಡಿಯಾ ಯೋಜನೆಯ ಪ್ರಯೋಜನಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕೆAದು ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಎನ್. ರಮಾನಾಥನ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮಾನಾಥನ್, ವಿವಿಧ ಸಂಸ್ಥೆಗಳೊAದಿಗೆ ಒಡಂಬಡಿಕೆ ಮಾಡಿಕೊಂಡು ಕೃಷಿ ಮತ್ತು ತೋಟಗಾರಿಕಾ ಯಂತ್ರೋಪಕರಣ ಗಳನ್ನು ಭಾರತದ ಹವಾಗುಣಕ್ಕೆ ಸರಿಹೊಂದುವAತೆ ದೇಶೀಯ ವಾಗಿಯೇ ಆತ್ಮನಿರ್ಭರ್ ಯೋಜನೆ ಯಡಿ ಉತ್ಪಾದಿಸಲು ಸಾಧ್ಯವಾಗುವಂತೆ ಯೋಜನೆ ರೂಪಿಸಬೇಕಾಗಿದೆ. ಹೀಗಾದಾಗ ತೋಟ ಮತ್ತು ಕಾರ್ಮಿಕರ ನಿರ್ವಹಣೆಯ ಅಧಿಕ ವೆಚ್ಚದಿಂದ ಬೆಳೆಗಾರರು ಪಾರಾಗಲು ಸಾಧ್ಯವಾಗಲಿದೆ. ಅಂತೆಯೇ , ಕೃಷಿ ಮತ್ತು ತೋಟಗಾರಿಕಾ ಉಪಕರಣಗಳ ಮೇಲೆ ಈಗಿರುವ ವಾಣಿಜ್ಯ ತೆರಿಗೆಯ ಹೊರೆಯನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕೆAದು ಒತ್ತಾಯಿಸಿದರು.
ಸರ್ಕಾರಗಳು ಆಗಿಂದಾಗ್ಗೆ ಜಾರಿಗೆ ತರುತ್ತಿರುವ ಕೃಷಿ ಭೂಮಿ ಹಾಗೂ ಪರಿಸರ ಸಂಬAಧಿತ ಕಾಯಿದೆಗಳು ಬೆಳೆಗಾರರ ವಲಯದಲ್ಲಿ ಗೊಂದಲ ಮತ್ತು ಸಮಸ್ಯೆ ಸೃಷ್ಟಿಸುತ್ತಿದೆ. ಇಂಥ ಕೆಲವು ನಿಯಮಗಳಿಂದಾಗಿ ತೋಟಗಳ ಮೇಲೆ ಹೆಚ್ಚು ವೆಚ್ಚ ಮಾಡಲು ಬೆಳೆಗಾರರು ಹಿಂಜರಿಯುವAತಾಗಿದೆ ಎಂದೂ ರಮಾನಾಥನ್ ಹೇಳಿದರು. ಈ ನಿಟ್ಟಿನಲ್ಲಿ ಎಲ್ಲಾ ಕಾಲಕ್ಕೂ ಸಲ್ಲುವ ಸ್ಪಷ್ಟ ಕಾಯಿದೆಯ ಅಗತ್ಯವಿದೆ ಎಂದೂ ಅವರು ಹೇಳಿದರು.
ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿ ಮಂಡಳಿ ಸಹಯೋಗದೊಂದಿಗೆ ಉತ್ತಮ ಕಾಫಿಯನ್ನು ಒದಗಿಸಬೇಕು. ಎಲ್ಲಾ ಸರ್ಕಾರಿ, ಸರ್ಕಾರೇತರ ಕಚೇರಿ ಗಳಲ್ಲಿಯೂ ಉತ್ತಮ ಕಾಫಿಯುವ ಸೇವನೆಗೆ ದೊರಕುವಂತಾಗಬೇಕೆAದೂ ರಮಾನಾಥನ್ ಸಲಹೆ ನೀಡಿದರು.
ಮುಂಬರುವ ಛಳಿಗಾಲದ ಅಧಿವೇಶನದಲ್ಲಿ ಈಗಾಗಲೇ ಕರ್ನಾಟಕ ಬೆಳೆಗಾರರ ಸಂಘದಿAದ ನೀಡಿರುವ ಕಾಫಿ ಅಭಿವೃದ್ಧಿ ಸಂಬAಧಿತ ಕಾಯಿದೆಯ ಅಂಶಗಳನ್ನು ಮಂಡನೆ ಮಾಡಿ ಅನುಮೋದಿಸಿ ಜಾರಿಗೆ ತರುವ ಮೂಲಕ ಕಾಫಿ ಬೆಳೆಗಾರರ ನೆರವಿಗೆ ಸರ್ಕಾರ ಮುಂದಾಗುವ ಅಗತ್ಯವಿದೆ ಎಂದೂ ಅವರು ಆಗ್ರಹಿಸಿದರು. ಭಾರತೀಯ ಕಾಫಿ ಮಂಡಳಿಯು ಈಗಾಗಲೇ ವಿಶ್ವವ್ಯಾಪಿಯ ೩೦ ಕಾಫಿ ತಳಿಗಳನ್ನು ತರಿಸಿಕೊಂಡಿದೆ. ಈ ತಳಿಗಳನ್ನು ಶೀಘ್ರವೇ ಕಾಫಿ ಕೃಷಿ ಭೂಮಿಯಲ್ಲಿ ನೆಡಲು ಬಿಡುಗಡೆ ಗೊಳಿಸುವಂತೆಯೂ ರಮಾನಾಥನ್ ಒತ್ತಾಯಿಸಿದರು.
ರಾಜ್ಯದ ಕಾಫಿ ಜಿಲ್ಲೆಗಳಲ್ಲಿ ಬೆಳೆಗಾರರಿಗೆ ಅಗತ್ಯವಾಗಿರುವ ವಿದ್ಯುತ್, ರಸ್ತೆ, ಮೊಬೈಲ್, ಇಂಟರ್ ನೆಟ್ ಸೌಲಭ್ಯಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿದೆ. ಹಲವಾರು ವ್ಯವಸ್ಥೆಗಳನ್ನು ಸರ್ಕಾರ ಡಿಜಿಟಲೀಕರಣಗೊಳಿಸಿರುವ ಹಿನ್ನಲೆಯಲ್ಲಿ ಬೆಳೆಗಾರರ ಪ್ರಯೋಜನಕ್ಕಾಗಿ ಈ ಸೌಲಭ್ಯಗಳನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸುವಂತೆ ಅವರು ಸರ್ಕಾರಕ್ಕೆ ಸಲಹೆ ನೀಡಿದರು.
ದಕ್ಷಿಣ ಭಾರತ ಬೆಳೆಗಾರರ ಸಂಘದ (ಉಪಾಸಿ) ಅಧ್ಯಕ್ಷ ಜೆಫ್ರಿ ರೆಬೆಲ್ಲೋ ಮಾತನಾಡಿ, ಅತ್ಯಧಿಕ ಸಂಖ್ಯೆಯಲ್ಲಿ ವಿದೇಶಿ ಮೂಲದ ಕಾಫಿ ಸಂಸ್ಥೆಗಳು ಭಾರತದಲ್ಲಿ ಕಾಫಿ ಕೆಫೆಯನ್ನು ಪ್ರಾರಂಭಿಸುತ್ತಿರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಕಾಫಿ ಸಂಸ್ಕೃತಿಗೆ ಹೆಚ್ಚು ಒತ್ತು ನೀಡುವಂಥ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು. ಬೆಳೆಗಾರರಿಗೆ ಬಹಳ ಪ್ರಯೋಜನಕಾರಿಯಾಗಿದ್ದ ಹಲವಾರು ಯೋಜನೆಗಳನ್ನು ಕಾಫಿ ಮಂಡಳಿÀ ಪುನರ್ ಜಾರಿಗೊಳಿಸುವಂತೆಯೂ ಜೆಫ್ರಿ ರೆಬೆಲ್ಲೋ ಒತ್ತಾಯಿಸಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಕಾಫಿ ಬೆಳೆಗಾರರ ಹಿತಾಸಕ್ತಿ ಕಾಯುವಲ್ಲಿ ಎಲ್ಲಾ ಸಂಸ್ಥೆಗಳೂ ಒಗ್ಗೂಡಿ ಕಾರ್ಯ ನಿರ್ವಹಿಸುತ್ತಿವೆ. ಶೇ.೯೦ ರಷ್ಟಿರುವ ಸಣ್ಣ ಬೆಳೆಗಾರರ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಸಣ್ಣ ಬೆಳೆಗಾರರ ಹಿತವನ್ನು ಖಂಡಿತಾ ಕಡೆಗಾಣಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದ ವೃತ್ತಿಯಲ್ಲಿ ಸೂಕ್ತ ತಿಳುವಳಿಕೆ ಇಲ್ಲದ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾಧನೀಯ ಎಂದೂ ಬೋಸ್ ಮಂದಣ್ಣ ಹೇಳಿದರು. ಕಾಫಿ ಮಂಡಳಿಯಲ್ಲಿ ಹಲವಾರು ಅಧಿಕಾರಿಗಳು, ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದಿರುವ ಹಿನ್ನಲೆಯಲ್ಲಿ ಸಿಬ್ಬಂದಿಗಳ ಕೊರತೆಯೂ ಮಂಡಳಿಯನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದು ಬೋಸ್ ಮಂದಣ್ಣ ಹೇಳಿದರು.
‘ಉಪಾಸಿ’ ಕಾರ್ಯದರ್ಶಿ ಆರ್. ಸಂಜಿತ್, ಕರ್ನಾಟಕ ಬೆಳೆಗಾರರ ಸಂಘದ ಕಾರ್ಯದರ್ಶಿ ಡಿ. ಅನಿಲ್ ಸವೂರು, ಉಪಾಸಿ ಕಾಫಿ ಸಮಿತಿ ಅಧ್ಯಕ್ಷ ಅಜೋಯ್ ತಿಪ್ಪಯ್ಯ, ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.