ಮಡಿಕೇರಿ, ನ. ೧೧: ಕುಶಾಲನಗರದ ಇಗ್ಗುತಪ್ಪ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್‌ನ ವಾರ್ಷಿಕ ಮಹಾಸಭೆ ಹಾಗೂ ಕ್ಲಬ್ ಡೇ ಕಾರ್ಯಕ್ರಮ ಸಂಘದ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ೨೦೨೨-೨೪ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ಸೋಮೆಯಂಡ ಜಗ್ಗ ಪೂವಯ್ಯ, ಉಪಾಧ್ಯಕ್ಷರಾಗಿ ಮೂವೇರ ಗಣೇಶ್, ಕಾರ್ಯದರ್ಶಿಯಾಗಿ ಮೇವಡ ಮಧು ಮಾದಯ್ಯ, ಸಹಕಾರ್ಯದರ್ಶಿಯಾಗಿ ಮಂಡೇಪAಡ ಚಿಮ್ಮ ಉತ್ತಪ್ಪ, ಖಜಾಂಚಿಯಾಗಿ ಪುಚ್ಚಿಮಾಡ ಜ್ಯೋತಿ ಮಂದಣ್ಣ, ಕ್ರೀಡಾ ಕಾರ್ಯದರ್ಶಿಯಾಗಿ ಮಾಳೇಟಿರ ಪೂಣಚ್ಚ, ನಿರ್ದೇಶಕರುಗಳಾಗಿ ಕರ್ನಂಡ ಅರುಣ್ ಮೊಣ್ಣಪ್ಪ, ಮಣವಟ್ಟಿರ ಸಂತೋಷ್, ಚೌರೀರ ಸುಧೀಶ್, ಅಪ್ಪಚೆಟ್ಟೋಳಂಡ ಅಜಿತ್ ಅಚ್ಚಯ್ಯ, ಪಾಲಚಂಡ ಸುರೇಶ್ ಮಾದಪ್ಪ, ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಮೈಂದಪAಡ ಜಗದೀಶ್, ಚಂದಪAಡ ಕಾವ್ಯ ಸುರೇಶ್, ಚೋವಂಡ ಅನಿತಾ ಅಯ್ಯಪ್ಪ ಅವರುಗಳನ್ನು ನೇಮಕ ಮಾಡಲಾಯಿತು.

ಮಹಾಸಭೆಯ ನಂತರ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಚೋವಂಡ ಅನಿತಾ ಪ್ರಾರ್ಥಿಸಿದರೆ, ವಾಂಚಿರ ಮನು ನಂಜುAಡ ಸ್ವಾಗತಿಸಿದರು. ಮೇವಡ ಮಧು ಮಾದಯ್ಯ ವರದಿ ವಾಚಿಸಿದರೆ, ಮೂವೇರ ಗಣೇಶ್ ಲೆಕ್ಕಪತ್ರ ಮಂಡಿಸಿದರು. ಸೋಮೆಯಂಡ ಜಗ್ಗ ಪೂವಯ್ಯ ವಂದಿಸಿದರು.