ಕ್ರಮಕ್ಕೆ ಆಗ್ರಹ
ವೀರಾಜಪೇಟೆ, ನ. ೯: ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಅಲಭ್ಯತೆ ಇದ್ದು ಕೃಷಿಕರು, ಕೂಲಿ ಕಾರ್ಮಿಕರು ಬವಣೆ ಪಡುವಂತಾಗಿದೆ. ಇರುವ ವೈದ್ಯರು ಕೇವಲ ೩ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಪರಿತಪಿಸುವಂತಾಗಿದೆ.
ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ನಾಲ್ಕೇರಿ, ಕಡಂಗಮರೂರು, ಅರಮೇರಿ, ಮೈತಾಡಿ, ಬೆಳ್ಳುಮಾಡು, ಕಡಂಗ ಗ್ರಾಮಸ್ಥರು ಈ ಆರೋಗ್ಯ ಕೇಂದ್ರವನ್ನು ಅವಲಂಬಿತರಾಗಿದ್ದಾರೆ. ಬಹುತೇಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವುದರಿAದ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೈಕಾಲುಗಳಿಗೆ ಕತ್ತಿ ತಗುಲಿ ಪ್ರಥಮ ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದರೆ ಪ್ರಥಮ ಚಿಕಿತ್ಸೆಗೆ ವೈದ್ಯರು ಇರುವುದಿಲ್ಲ. ವೈದ್ಯರು ೧೧ ಗಂಟೆಗೆ ಬಂದು ೩ ಗಂಟೆಗೆ ತೆರಳುತ್ತಾರೆ. ನಂತರ ಬಂದAತೆ ರೋಗಿಗಳ ಪಾಡು ಕೇಳುವವರಿಲ್ಲ. ಶುಶ್ರೂಷಕಿಯರು ವೈದ್ಯರ ಸಲಹೆ ಇಲ್ಲದೆ ಟಿ.ಟಿ. ಅಥವಾ ನೋವು ನಿವಾರಕ ಚುಚ್ಚುಮದ್ದು ನೀಡುವುದಿಲ್ಲ. ಕೂಡಲೇ ಸಂಬAಧಪಟ್ಟ ಇಲಾಖಾಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್ ಆಗ್ರಹಿಸಿದ್ದಾರೆ.
ಸರ್ಕಾರದ ಕಾನೂನು ಹಾಗೂ ನಿಯಮದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಪೂರ್ವಾಹ್ನ ೯ ರಿಂದ ಅಪರಾಹ್ನ ೧ ವರೆಗೆ, ೧.೪೫ ರಿಂದ ಸಂಜೆ ೫ ಗಂಟೆಯವರೆಗೆ ಕಾರ್ಯನಿರ್ವಹಿಸಬೇಕು. ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಶುಶ್ರೂಷಕಿಯರ ನಡುವೆ ಅನ್ಯೋನ್ಯತೆಯ ಕೊರತೆ ಇದೆ. ಈ ವಿಚಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೂ ಬಂದಿದೆ. ಅವರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ‘ಶಕ್ತಿ’ಗೆ ತಿಳಿಸಿದ್ದಾರೆ.