*ಗೋಣಿಕೊಪ್ಪ, ನ. ೯: ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಮೈದಾನದ ತುಂಬಾ ಗಿಡಗಂಟಿಗಳು ಬೆಳೆದು ನಿಂತು ಮಕ್ಕಳ ಕ್ರೀಡಾಚಟುವಟಿಕೆಗೆ ಯೋಗ್ಯವಿಲ್ಲದಂತಾಗಿದೆ. ಪ್ರೌಢಶಾಲೆಯಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯ ದವರು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಪಠ್ಯ ಚಟುವಟಿಕೆಯೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಮಕ್ಕಳು ಭಾಗಿಯಾಗಬೇಕೆಂಬ ಉದ್ದೇಶದಿಂದ ಮೈದಾನ ನಿರ್ಮಾಣವಾಗಿದೆ. ಆದರೆ ಇದೀಗ ಗಿಡಗಂಟಿಗಳಿAದ ಆವೃತ್ತವಾಗಿರುವ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಕಷ್ಟ ಸಾಧ್ಯವಾಗಿದೆ. ಈ ಹಿಂದೆ ಈ ಮೈದಾನದಲ್ಲಿ ಸಾರ್ವಜನಿಕರಿಗೂ ಆಟವಾಡಲು ಮುಕ್ತ ಅವಕಾಶವಿತ್ತು. ಆದರೆ, ಇದೀಗ ಕೆಲವು ನಿಯಮಗಳನ್ನು ಶಾಲೆಯ ಆಡಳಿತ ಮಂಡಳಿ ತಂದಿರುವುದರಿAದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ ಮತ್ತು ಇತರ ಸಂಘ-ಸAಸ್ಥೆಗಳು ಕೂಡ ಇಲ್ಲಿ ಕ್ರೀಡಾ ಉತ್ಸವ ನಡೆಸಲು ಅನುಮತಿ ಇಲ್ಲ. ಹೀಗಾಗಿ ಮೈದಾನ ಪಾಳು ಬೀಳುತ್ತಿದೆ. ಇದರಿಂದ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂದಿರುವ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.