ಮಡಿಕೇರಿ, ನ. ೯: ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ೨೦೨೨-೨೩ನೇ ಸಾಲಿಗೆ ರಾಷ್ಟಿçÃಯ ವಿದ್ಯಾರ್ಥಿ ವೇತನ ತಂತ್ರಾAಶ (ಎಸ್‌ಎಸ್‌ಪಿ)ದಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಮತ್ತು ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನ (ರಿನಿವಲ್ ಮತ್ತು ಫ್ರೆಶ್)ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ವೆಬ್‌ಸೈಟ್ hಣಣಠಿs://sಛಿhoಟಚಿಡಿshiಠಿ.gov.iಟಿ ನಲ್ಲಿ ಅರ್ಜಿ ಸಲ್ಲಿಸುವುದು. ರಾಷ್ಟಿçÃಯ ವಿದ್ಯಾರ್ಥಿ ವೇತನ ತಂತ್ರಾAಶದಲ್ಲಿ (ಎನ್‌ಎಸ್‌ಪಿ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕವನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ತಾ. ೧೫ ರವರೆಗೆ ಹಾಗೂ ಮೆಟ್ರಿಕ್ ನಂತರ ಮತ್ತು ಮೆರಿಟ್ ಆಧಾರಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತಾ. ೩೦ ರವರೆಗೆ ಅವಧಿ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ರಾಷ್ಟಿçÃಯ ವಿದ್ಯಾರ್ಥಿ ವೇತನ ತಂತ್ರಾAಶದಲ್ಲಿ (ಎನ್‌ಎಸ್‌ಪಿ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‌ಸೈಟ್ hಣಣಠಿs://ಜom. ಞಚಿಡಿಟಿಚಿಣಚಿಞಚಿ.gov.iಟಿ/ಞoಜಚಿgu/ಠಿubಟiಛಿ ಅಥವಾ ಸಹಾಯ ವಾಣಿ ಸಂಖ್ಯೆ ೮೨೭೭೭೯೯೯೯೦ಗೆ ಅಥವಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್‌ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಹಾಗೂ ಕಚೇರಿ ದೂ. ೦೮೨೭೨-೨೨೫೫೨೮, ಮಾಹಿತಿ ಕೇಂದ್ರ, ಮಡಿಕೇರಿ ೦೮೨೭೨-೨೨೦೨೧೪, ೯೮೪೪೪೦೮೧೪೭, ಮಾಹಿತಿ ಕೇಂದ್ರ, ಸೋಮವಾರಪೇಟೆ ೮೫೪೮೦೬೮೫೧೯, ಹಾಗೂ ಮಾಹಿತಿ ಕೇಂದ್ರ ಪೊನ್ನಂಪೇಟೆ ೯೯೦೦೭೩೧೦೩೭ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಿ.ಎಂ. ದಿವಾಕರ್ ತಿಳಿಸಿದ್ದಾರೆ.