ಮಡಿಕೇರಿ, ನ. ೯: ತಾವೂರು ಗ್ರಾಮದ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಕೋಳಿಬೈಲು ವೆಂಕಟೇಶ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಐಯ್ಯಣಿರಾ ದಿನೇಶ್ ಹಾಗೂ ಖಜಾಂಚಿಯಾಗಿ ಹೊಸಗದ್ದೆ ವೆಂಕಟರಮಣ ನೇಮಕಗೊಂಡಿದ್ದಾರೆ. ಗೌಡ್ ದಾರೆ ಯದುಕುಮಾರ್ ಕಾರ್ಯದರ್ಶಿಯಾಗಿ ಹಾಗೂ ಕುದುಕುಳಿ ಅಶ್ವಥ್ ಅವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.