ಮಡಿಕೇರಿ, ನ. ೯: ವಿವಿಧ ಕಾರಣಕ್ಕೆ ಛಿದ್ರಗೊಂಡಿದ್ದ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಡಿಸೆಂಬರ್ ೬ ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ನಡೆಯ ಲಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ತಿಳಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖ ಜೆ.ಎ. ಪಾಲಾಕ್ಷ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ‘ದಲಿತ ಸಾಂಸ್ಕೃತಿಕ ಪ್ರತಿರೋಧ’ ಎಂಬ ಘೋಷ ವಾಕ್ಯದಲ್ಲಿ ಏಕ್ಯತಾ ಸಮಾವೇಶ ನಡೆಯಲಿದೆ. ಒಂದೆ ಧ್ಯೇಯ ವಾಕ್ಯದಲ್ಲಿ ದಲಿತ ಸಂಘಟನೆ ಗಳು ವಿವಿಧ ಬಣಗಳಾಗಿ ಕೆಲಸ ಮಾಡುತ್ತಿವೆ. ಇವೆಲ್ಲವನ್ನೂ ಒಂದೆ ವೇದಿಕೆಗೆ ತರುವ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿನ ಪ್ರಮುಖ ೬ ವಿವಿಧ ಬಣಗಳು ಈ ಮೂಲಕ ಒಂದಾಗಲಿವೆ. ನ್ಯಾಯಕ್ಕಾಗಿ ಹಾಗೂ ಹಕ್ಕಿಗಾಗಿ ಹೋರಾಟ ನಡೆಸಲಿ ದ್ದೇವೆ ಎಂದು ತಿಳಿಸಿದರು.
ಹೆಚ್.ಎಲ್. ದಿವಾಕರ್ ಮಾತನಾಡಿ, ನಾವು ಒಂದಾಗುತ್ತಿ ರುವುದರಿಂದ ರಾಜಕೀಯ ಹಾಗೂ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಮತದಾನ ದಲ್ಲಿ ನಿರ್ಣಾಯಕ ಪಾತ್ರವಹಿಸಿರುವ ದಲಿತ ಸಮುದಾಯಗಳು ರಾಜಕೀ ಯದಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ರಾಜಪ್ಪ, ಎಂ.ಎಸ್. ವೀರೇಂದ್ರ, ಹೆಚ್.ಎಸ್. ಪರಶುರಾಮ್, ಕೃಷ್ಣಪ್ಪ ಹಾಜರಿದ್ದರು.