ಗೋಣಿಕೊಪ್ಪ, ನ. ೯: ಕನ್ನಡ ರಾಜ್ಯೋತ್ಸವ ಅಂಗವಾಗಿ ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಕನ್ನಡ ಚಿತ್ತಾರ’ ಕಾರ್ಯಕ್ರಮವನ್ನು ತಾ. ೧೩ ರಂದು ಗೋಣಿಕೊಪ್ಪ ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ೯.೩೦ ಗಂಟೆಯಿAದ ಸ್ಪರ್ಧೆ ಆರಂಭಗೊಳ್ಳಲಿದೆ.

ಕನ್ನಡ ನಾಡು, ನುಡಿ, ಭಾವ-ಬದುಕು ಬಿಂಬಿಸುವ ಚಿತ್ರ ರಚನೆ ಮಾಡಬೇಕಿದ್ದು, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ೩-೫ ನೇ ತರಗತಿ ಮತ್ತು ೬ ರಿಂದ ೮ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ೧ ಗಂಟೆ ಅವಧಿಯಲ್ಲಿ ಚಿತ್ರ ಬಿಡಿಸಬೇಕಿದೆ.

ಪ್ರಮಾಣಪತ್ರದೊಂದಿಗೆ ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿ ನಾಣ್ಯ, ಎರಡು ವಿಭಾಗಕ್ಕೆ ಪ್ರತ್ಯೇಕ ಆಕರ್ಷಕ ಬಹುಮಾನ ನೀಡಲಾಗುತ್ತದೆ.

ತಾ. ೧೨ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಿದ್ದು, ಹೆಚ್ಚಿನ ಮಾಹಿತಿಗೆ ೮೪೯೪೯೩೭೯೧೬ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.