ಗೋಣಿಕೊಪ್ಪ ವರದಿ, ನ. ೯: ಅಮ್ಮಕೊಡವ ಕಾವೇರಿ ಮಹಿಳಾ ಸಂಘದ ವಾರ್ಷಿಕ ಮಹಾಸಭೆ ಮತ್ತು ಕಾವೇರಿ ಚಂಗ್ರಾAದಿ ಪ್ರಯುಕ್ತದ ಕಾವೇರಿ ತೀರ್ಥ ಪೂಜಾ ಕಾರ್ಯಕ್ರಮ ಗೋಣಿಕೊಪ್ಪದಲ್ಲಿರುವ ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಮಹಿಳೆಯರು ಕಾವೇರಿ ಮಾತೆ ಪೂಜೆಯಲ್ಲಿ ಪಾಲ್ಗೊಂಡರು. ದೇವರ ಹಾಡು, ತೀರ್ಥ ವಿತರಣೆ ಮಾಡಲಾಯಿತು.
ಅಂರ‍್ರಾಷ್ಟಿçÃಯ ಯೋಗಾ ತರಬೇತುಗಾರ್ತಿ ಚೊಟ್ಟೋಳಿಯ ಮ್ಮಂಡ ಅಮೃತ ರಾಕೇಶ್ ಮಾತನಾಡಿ, ಅಮ್ಮಕೊಡವರು ಹೆಚ್ಚಾಗಿ ಕಾರ್ಯ ಕ್ರಮದ ಮೂಲಕ ತೊಡಗಿಕೊಳ್ಳುವು ದರಿಂದ ಸಂಘಟನೆ ಬಲಗೊಳ್ಳಲಿದೆ ಎಂದರು. ನಂತರ ಪದ್ಮಮುದ್ರ ಯೋಗಾಸನ ನಡೆಸಿಕೊಟ್ಟರು.
ಮಹಿಳೆಯರು ಸಮಾಜದಲ್ಲಿ ಹೆಣ್ಣಿನ ಜವಾಬ್ದಾರಿ ವಿಚಾರವಾಗಿ ಪುತ್ತಾಮನೆ ವಿದ್ಯಾ ಜಗದೀಶ್ ಮಾತನಾಡಿ, ಹೆಣ್ಣು ಮಗಳಾಗಿ ನಂತರ ತಾಯಿ ಸ್ಥಾನದ ಮೂಲಕ ಕುಟುಂಬ ನಿರ್ವಹಣೆ ಮಾಡುವಷ್ಟು ಶಕ್ತಿವಂತಳು. ಆದ್ದರಿಂದ ಹೆಣ್ಣು ಸಮಾಜದಲ್ಲಿ ಶಕ್ತಿರೂಪಿಣಿ ಎಂದು ಬಿಂಬಿಸಿಕೊAಡಿದ್ದಾಳೆ. ಪುರುಷರ ಸಹಾಯ ಪಡೆದುಕೊಂಡು ತಮ್ಮ ಕೌಶಲ್ಯ ಅರಿತು ಸಮಾಜಕ್ಕೆ ನೆರವಾಗುವ ಕಲೆ ರೂಪಿಸಿ ಕೊಳ್ಳಬೇಕು. ತಾಳ್ಮೆ ಮುಖ್ಯ ಎಂದರು.
ಪುತ್ತಾಮನೆ ಅನಿತಾ ಜೀವನ್ ಮಾತನಾಡಿ, ಕುಟುಂಬದ ಸಂಬAಧದಲ್ಲಿ ಮಹಿಳೆ ಪಾತ್ರ ಹೆಚ್ಚು. ಮಕ್ಕಳನ್ನು ಸಾಕುವ ವಿಧಾನದಂತೆ ಮಕ್ಕಳು ಕೂಡ ಬೆಳೆಯುತ್ತಾರೆ. ಹೀಗೆ ಸಮಾಜಕ್ಕೂ ಕೂಡ ಮಹಿಳೆಯ ಪಾತ್ರ ಮಹತ್ವದ್ದು ಎಂದರು. ಪುತ್ತಾಮನೆ ಪೂಜಾ ಶರಣು ಮಾತನಾಡಿ, ಕುಟುಂಬದಲ್ಲಿ ಸಂಬAಧಕ್ಕೆ ಹೆಚ್ಚು ಬೆಲೆ ನೀಡಬೇಕಿದೆ. ಹಿರಿಯರಿಗೆ ಗೌರವ ಕೊಟ್ಟು ಬದುಕುವುದು ಹೆಮ್ಮೆ ಎಂದು ಅರಿತುಕೊಳ್ಳಬೇಕಿದೆ ಎಂದರು.
ಪುತ್ತಾಮನೆ ವಿದ್ಯಾ ಜಗದೀಶ್ ಅವರಿಂದ ಕಾವೇರಿ ನೃತ್ಯ, ಸ್ವರಚಿತ ಹಾಡು, ನೃತ್ಯ ಮೂಡಿಬಂತು. ಅಚ್ಚಿಯಂಡ ಕಿಶೋರಿ, ಗೀತಾ ಸುಬ್ರಮಣಿ, ಬಾಚಮಂಡ ದಿವ್ಯಾ, ಹೆಮ್ಮಚ್ಚಿಮನೆ ಲಹರಿ, ಬಲ್ಯಂಡ ದೀಪ್ತಿ ಹಾಡಿದರು. ಬಾಚಮಂಡ ಶೈನಿ, ಬಲ್ಯಂಡ ಪ್ರತಿಕ್ಷಾ ನೃತ್ಯ ಮಾಡಿದರು. ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಯಿತು.
ಅಧ್ಯಕ್ಷೆ ಅಮ್ಮತ್ತಿರ ರೇವತಿ ಪರಮೇಶ್ವರ, ಕಾರ್ಯದರ್ಶಿ ಅಶ್ವಿನಿ ನಂದಾ, ಹಿರಿಯರಾದ ಗುಂಭೀರ ಶಾಂತಿ, ಪುತ್ತಾಮನೆ ರಾಧಾ, ಅಮ್ಮತ್ತೀರ ಯಮುನಾ ಇದ್ದರು.