ಚೆಟ್ಟಳ್ಳಿ, ನ. ೮: ಎಡಪಾಲ ದೇಶ ಪ್ರೇಮಿ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ತಾ. ೧೩ ರಂದು ಎಡಪಾಲ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ತಾ. ೧೧ ರೊಳಗೆ ತಂಡವನ್ನು ನೋಂದಣಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಮೊದಲು ನೋಂದಾಯಿಸಿಕೊAಡ ೧೬ ತಂಡಗಳಿಗೆ ಮಾತ್ರ ಅವಕಾಶ ಇರಲಿದೆ. ಪ್ರಥಮ ಬಹುಮಾನ ರೂ. ೧೨,೦೦೦ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೮,೦೦೦ ಹಾಗೂ ಆಕರ್ಷಕ ಟ್ರೋಫಿ, ಅಲ್ಲದೇ ವೈಯಕ್ತಿಕ ಬಹುಮಾನಗಳು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ೭೯೭೫೪೪೮೩೩೬, ೭೬೭೬೧೮೪೩೦೮ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದೆ.