ಮಡಿಕೇರಿ, ನ. ೮: ಕೊಡಗು ಗೌಡ ನಿವೃತ್ತ ನೌಕರರ ಸಂಘ ಹಾಗೂ ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ವೃತ್ತಿಪರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ತರಬೇತು ದಾರರಾಗಿ ಆಗಮಿಸಿದ್ದ ಪುತ್ತೂರಿನ ವೃತ್ತಿಪರ ಶಿಕ್ಷಣ ತರಬೇತುದಾರ ಡಾ. ಬಜಂಗಳ ರಾಜೇಶ್, ಐಎಎಸ್, ಐಪಿಎಸ್, ಕಂಪ್ಯೂಟರ್, ವೈದ್ಯಕೀಯ ಸೇರಿದಂತೆ ಇತರ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು. ಹುದ್ದೆ ಪಡೆದುಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿ ಹೇಳಿದರು.

ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್, ಜಿಲ್ಲೆಯಲ್ಲಿರುವ ವಿವಿಧ ಉದ್ಯೋಗ ವಿನಿಮಯ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ವಿದ್ಯಾರ್ಥಿಗಳು ಮತ್ತು ಪೋಷಕರು ಕೇಂದ್ರದ ಸಂಪರ್ಕವಿರಿಸಿಕೊAಡು ಉದ್ಯೋಗ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.

ಉಪನ್ಯಾಸಕಿ ಪುದಿಯನೆರವನ ಮಂಜುಳಾ ಇಂತಹ ಕಾರ್ಯಕ್ರಮ ಗಳಿಂದ ವಿದ್ಯಾರ್ಥಿಗಳು ಸಾರ್ಥಕತೆ ಪಡೆದುಕೊಳ್ಳಬಹುದೆಂದು ಹೇಳಿದರು. ಉಪ ಪ್ರಾಂಶುಪಾಲ ರಾಜ ಸುಂದರA ವಿದ್ಯಾರ್ಥಿಗಳು ಶ್ರಮವಹಿಸಿ ಓದಿ ಉತ್ತಮ ಅಂಕಗಳನ್ನು ಪಡೆದು ಉನ್ನತ ಹುದ್ದೆಗೇರುವಂತೆ ಸಲಹೆ ಮಾಡಿದರು. ಹತ್ತನೇ ಮತ್ತು ಪಿಯುಸಿಯ ಸುಮಾರು ೨೫೦ ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.