ಮಡಿಕೇರಿ, ನ. ೭: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ರಾಜ್ಯ ಸಹ ಸಂಚಾಲಕಿಯಾಗಿ ಚೇತನಾ ದತ್ತಾತ್ರೆಯ ಅವರನ್ನು ನೇಮಕ ಮಾಡಲಾಗಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಅಶೋಕ ಹರ‍್ನಹಳ್ಳಿ ಅವರು ಇತ್ತೀಚೆಗೆ ಬೆಂಗಳೂರಿನ ಗಾಯತ್ರಿ ಸಭಾಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಇವರನ್ನು ರಾಜ್ಯ ಸಹ ಸಂಚಾಲಕಿಯನ್ನಾಗಿ ನೇಮಿಸಿ ನೇಮಕಾತಿಯ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು.
ಚೇತನಾ ಅವರು ಕೊಡಗಿನ ಪೊನ್ನಂಪೇಟೆಯ ದಿ. ರಘುರಾಮ ಸರಳಾಯ ಹಾಗೂ ಸುಪ್ರಭಾ ರಘುರಾಮ್ ಅವರ ಪುತ್ರಿಯಾಗಿದ್ದು, ಪ್ರಸ್ತುತ ಸುರತ್ಕಲ್‌ನಲ್ಲಿ ನೆಲೆಸಿದ್ದು, ಜೆಸಿಐ ವಲಯದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.