ಮಡಿಕೇರಿ, ನ. ೭: ಏಳು ದಿನಗಳ ಅಶ್ವತ್ಥ್ ಅಯ್ಯಪ್ಪ, ಡಾ. ಅಖಿಲ್ ಕುಟ್ಟಪ್ಪ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಕರ್ನಾಟಕದ ಹದಿನಾರು ವರುಷದ ಕೆಳಗಿನ ಕ್ರಿಕೆಟ್ ತಂಡದಲ್ಲಿ ಆಡಿ, ಹೆಸರು ಮಾಡಿ ಅಕಾಲಿಕ ಮರಣಕ್ಕೆ ತುತ್ತಾದ ಅಶ್ವತ್ಥ್ ಅಯ್ಯಪ್ಪ ಮತ್ತು ಸಹೋದರ ಡಾ. ಅಖಿಲ್ ಕುಟ್ಟಪ್ಪ ನೆನಪಿನಲ್ಲಿ ಪೋಷಕರಾದ ರಘು ಮಾದಪ್ಪ ಮತ್ತು ಅನಿತಾ ಅವರು ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯದ ಸಹಯೋಗದೊಂದಿಗೆ ಎಂಟು ವರುಷಗಳಿಂದ ಅಂತರ ಶಾಲಾ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದ್ದಾರೆ.

ಪಂದ್ಯಾಟವನ್ನು ಲೆ.ಕ. ಬಿ.ಜಿ.ವಿ. ಕುಮಾರ್ ಉದ್ಘಾಟಿಸಿದರು. ವಿದ್ಯಾರ್ಥಿಗಳು ಓದು, ಕ್ರೀಡೆ ಮತ್ತು ಯಾವುದೇ ಉತ್ತಮ ಹವ್ಯಾಸಗಳನ್ನು ತುಂಬು ಆಸಕ್ತಿಯಿಂದ ಮಾಡಿದರೆ ಯಶಸ್ಸು ಸಾಧ್ಯ ಎಂದು ಕುಮಾರ್ ನುಡಿದರು. ಪ್ರತಿ ಹೆಜ್ಜೆಗೂ ಬೋಧಕರು, ತರಬೇತುದಾರರ ಅವಶ್ಯಕತೆ ಇದ್ದು, ಅವರ ನಿರ್ದೇಶನ ದಲ್ಲಿ ಮುಂದುವರಿ ಯಬೇಕು ಎಂದು ಕಿವಿಮಾತು ಹೇಳಿದರು.

ಅತಿಥಿ ಸ್ಥಾನದಿಂದ ಮಾತನಾಡಿದ ಮೂಡಾ ಅಧ್ಯಕ್ಷರಾಗಿದ್ದ ಮುನೀರ್ ಅಹ್ಮದ್, ಅಶ್ವತ್ಥ್ ಅಯ್ಯಪ್ಪ ಅವರು ಬರೆದಿದ್ದ ‘ಗಾಡ್ ಬೌಲ್ಸ್ ಎ ಗೂಗ್ಲಿ’ ಪುಸ್ತಕದ ಕುರಿತು ಪ್ರಸ್ತಾಪಿಸಿದರು. ಈ ಪುಸ್ತಕ ಕೇವಲ ಕ್ರಿಕೆಟ್‌ಗೆ ಮಾರ್ಗದರ್ಶನ ಆಗಿರದೆ ಅಧ್ಯಾತ್ಮ ವಿಚಾರಧಾರೆ ಯನ್ನೂ ಒಳಗೊಂಡಿದ್ದು, ಅವರ ಅಕಾಲಿಕ ಮರಣ ಸಾಹಿತ್ಯ ಲೋಕಕ್ಕೂ ನಷ್ಟ ಉಂಟು ಮಾಡಿದೆ ಎಂದರು. ಕ್ರಿಕೆಟ್ ಪಂದ್ಯಾಟದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಭಾಗವಹಿಸುವಂತಾಗಲಿ ಎಂದು ಬಯಸಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, ಸಾವು ಎಂಬುದು ಎಲ್ಲ ಜೀವಿಗಳಿಗೂ ಖಚಿತವಾಗಿದ್ದು, ಸತ್ತ ಬಳಿಕವೂ ಜನತೆಯ

(ಮೊದಲ ಪುಟದಿಂದ) ಹೃದಯಗಳಲ್ಲಿ ಜೀವಿಸುವ ಮಂದಿ ವಿರಳ ಎಂದರು. ಅಶ್ವತ್ಥ್ ಹಾಗೂ ಅಖಿಲ್ ಕಣ್ಣಿನಿಂದ ಮರೆ ಆದರೂ, ಹೃದಯಗಳಲ್ಲಿ ಸ್ಥಾನ ಪಡೆದಿರುವರು ಎಂದರು.

ರಘು ಮಾದಪ್ಪ ಅವರು ಮಕ್ಕಳ ಹೆಸರಿನಲ್ಲಿ ಪ್ರತಿ ವರ್ಷ ನಡೆಸುವ ಕ್ರಿಕೆಟ್ ಪಂದ್ಯಾಟದಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೂ ಏರಿದ್ದು, ಪಂದ್ಯಾಟ ದಿಂದ ಮೇಲೇರುವ ಗುರಿಯನ್ನು ಎಲ್ಲರೂ ಹೊಂದಬೇಕೆAದರು.

ಪ್ರಾAಶುಪಾಲೆ ಸುಮಿತ್ರ ಅವರು ಮಾತನಾಡಿ, ರಘು ಮಾದಪ್ಪ ಅವರು ಕೊಡಗು ವಿದ್ಯಾಲಯದ ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವರು ಎಂದು ಶ್ಲಾಘಿಸಿದರು. ವಿದ್ಯಾರ್ಥಿಗಳಿಗೆ ಒಂದು ಕ್ರೀಡೆ ಹಲವು ಪಾಠ ಕಲಿಸುತ್ತದೆ ಎಂದರು.

ದಿವ್ಯ ಸ್ವಾಗತಿಸಿದರು. ದೇಚಮ್ಮ ವಂದಿಸಿದರು. ನಮೃತಾ ನಿರೂಪಣೆ ಮಾಡಿದರು. ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅಧ್ಯಕ್ಷ ಕೆ.ಎಸ್. ದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ಪಂದ್ಯಾಟ ನಿರ್ವಾಹಕರುಗಳಾದ ಬೋಧಕ ದಾಮೋದರ್, ಎ.ಎಸ್.ಐ. ನಂದಾ, ಬಿ.ವಿ. ನಂದ, ಸುರೇಶ್, ಹರೀಶ್, ಶಾಲಾ ವ್ಯವಸ್ಥಾಪಕ ರವಿ ಹಾಗೂ ಇತರರು ಹಾಜರಿದ್ದರು.