ಸೋಮವಾರಪೇಟೆ, ನ. ೭: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ತಾ. ೧೦ ರಂದು ಬೆಳಿಗ್ಗೆ ೧೧ ಗಂಟೆಯಿAದ ಅಪರಾಹ್ನ ೧ ಗಂಟೆಯವರೆಗೆ ವಿಎಸ್ಎಸ್ಎನ್ ಸಭಾಂಗಣ, ತೋಳೂರುಶೆಟ್ಟಳ್ಳಿಯಲ್ಲಿ ಪೌತಿ ಖಾತೆ ಆಂದೋಲನ ಆಯೋಜಿಸಲಾಗಿದೆ ಎಂದು ಕಂದಾಯ ನಿರೀಕ್ಷಕ ದಾಮೋದರ್ ತಿಳಿಸಿದ್ದಾರೆ. ತೋಳೂರುಶೆಟ್ಟಳ್ಳಿ ವೃತ್ತಕ್ಕೆ ಸಂಬAಧಪಟ್ಟ ಗ್ರಾಮಗಳಾದ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು ಮತ್ತು ಕೂತಿ ಗ್ರಾಮಗಳ ಪೌತಿ ಖಾತೆ ಬದಲಾವಣೆ ಆಂದೋಲನವನ್ನು ಹಮ್ಮಿಕೊಳ್ಳಲಾಗು ತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನಮೂನೆ-೧ರಲ್ಲಿ ಪೌತಿ / ವಾರಸಾ ಖಾತೆ ಮಾಡಿಕೊಡುವ ಕುರಿತು ಅರ್ಜಿ, ಖಾತಾದಾರರು ಮೃತರಾಗಿರುವ ಸರ್ವೆ ನಂಬರುಗಳ ಪಹಣಿ (ಆರ್.ಟಿ.ಸಿ) ಮೃತರ ಮರಣ ಸಮರ್ಥನ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗಿಯಾಗಬಹುದು ಎಂದು ದಾಮೋಧರ್ ತಿಳಿಸಿದ್ದಾರೆ.
ನಮೂನೆ-೧ರ ಅರ್ಜಿಯನ್ನು ಶಾಂತಳ್ಳಿ ನಾಡಕಛೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.