ವೀರಾಜಪೇಟೆ, ನ. ೭: ಸಮಾಜದ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವಂತಹ ಕಾರ್ಯ ಕ್ರೀಡಾ ಚಟುವಟಿಕೆಗಳಿಂದ ಮಾತ್ರ ಸಾಧ್ಯ, ಮಲಯಾಳಿ ಬಾಂಧವರು ತಮ್ಮದೆ ಆದ ಸಂಸ್ಕೃತಿ, ಆಚಾರ - ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓಣಂ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಹಿಂದೂ ಮಲಯಾಳಿ ಸಂಘದ ವತಿಯಿಂದ ಅಮ್ಮತ್ತಿ ಒಂಟಿಯAಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿ ಸರಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು
(ಮೊದಲ ಪುಟದಿಂದ) ಮಲಯಾಳಿ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವುದರ ಮುಖಾಂತರ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು. ಎಲ್ಲರನ್ನು ಸಮಾನ ವಾಗಿ ಕಾಣುವಂತಹ ಸಮಾಜದ ಏಳಿಗೆಗೆ ಒಗ್ಗಟ್ಟಿನಿಂದ ಮುಂದೆಯು ಉತ್ತಮ ಕಾರ್ಯಕ್ರಮಗಳು ನಡೆಯು ವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಕೀಲ ವಿ.ಕೆ. ದೇವಲಿಂಗಯ್ಯ ಮಾತನಾಡಿ, ಮಲಯಾಳಿ ಬಾಂಧವರು ಕ್ರೀಡಾ ಸ್ಪರ್ಧೆ ಮೂಲಕ ಎಲ್ಲರನ್ನು ಒಂದುಗೂಡಿಸುವAತಹ ಉತ್ತಮ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ಕೆಲವು ಕಡು ಬಡಕುಟುಂಬಗಳಾದರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಉತ್ತಮ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತಾಗಲಿ. ಎಂದರಲ್ಲದೆ ಮುಂದಿನ ದಿನದಲ್ಲಿ ಎಲ್ಲಾ ಜನಾಂಗದ ಬಾಂಧವರು ಸೇರಿ ಈ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಸಿ. ಪುಷ್ಕರನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಎನ್.ಡಿ.ಪಿ. ಕೊಡಗು ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ, ಸಂಘಟನೆ ಮೂಲಕ ಸಮಾಜದ ಅಭಿವೃದ್ಧಿ ಕಡೆಗೆ ಗಮನ ಹರಿಸುವುದರೊಂದಿಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಹಿಂದೂ ಮಲಯಾಳಿ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಂ. ವಿಜಯನ್, ಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ಕೆ. ಬಾಬು, ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ವಿ. ಗಣೇಶ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಮಾಜದ ಗೌರವಾಧ್ಯಕ್ಷ ಕೆ.ಎಸ್.ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಪಿ.ಎ.ಮಂಜುನಾಥ್, ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ರಾಬಿನ್ ಚಿಣ್ಣಪ್ಪ, ಸಂಘದ ಉಪಾಧ್ಯಕ್ಷ ಪಿ.ಕೆ. ಭಾಸ್ಕರನ್, ಪ್ರಧಾನ ಕಾರ್ಯದರ್ಶಿ ಸಿ.ಕೆ. ನಂದಕುಮಾರ್, ಖಜಾಂಚಿ ಟಿ.ಎಂ.ಸುನಿಲ್ ಗ್ರಾ,ಪಂ,ಸದಸ್ಯೆ ರಜನಿ ಕುಟ್ಟಪ್ಪ, ಸೂರಜ್, ಎಂ.ಎA. ಶಶಿಧರನ್ ಸನಾಲ್ ಸುಜೀತ್ ಉಪಸ್ಥಿತರಿದ್ದರು.
ಚಾಮುಂಡಿ ಪೈಸಾರಿಯಿಂದ ಶಾಲಾ ಆವರಣದವರೆಗೆ ಚಂಡೆಮೇಳದೊAದಿಗೆ ಮಹಾಬಲಿಯ ಮೆರವಣಿಗೆ ನಡೆಯಿತು. ಬೆಳಿಗ್ಗೆ ಶಾಲಾ ಸಭಾಂಗಣದಲ್ಲಿ ಪೂಕಳಂ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಸರೋಜಿನಿ ನೆರವೇರಿಸಿದರು. ನಂತರ ಕ್ರೀಡಾ ಸ್ಪರ್ಧೆಗೆ ನಿವೃತ್ತ ಸೈನಿಕರಾದ ಟಿ.ಕೆ. ಶ್ರೀನಿವಾಸ್ ಚಾಲನೆ ನೀಡಿದರು.
ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಓಣಂ ಆಚರಣೆ ಪ್ರಯುಕ್ತ ಪರಂಜ್ಯೋತಿ ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಬಿಪಿ ಹಾಗೂ ಮಧುಮೇಹ ತಪಾಸಣೆ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿ ವಿ.ಕೆ. ಶುಶಾ ಮೋಹನ್, ಸಂಘದ ಸದಸ್ಯ ಕೃಷ್ಣ ಅವರ ಪುತ್ರಿ ವಕೀಲೆ ಶ್ರೀಶ್ಮಾ, ನಿವೃತ್ತ ಸೈನಿಕರುಗಳಾದ ಟಿ.ಕೆ.ಶ್ರೀನಿವಾಸ್ (ಸತ್ಯನ್) ಹಾಗೂ ಬಾಲಕೃಷ್ಣ ಪಣಿಕರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ೨೦೨೧-೨೨ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಧ್ಯಾಹ್ನ ಓಣಂ ಸದ್ಯ ನಡೆಯಿತು.