ಮಡಿಕೇರಿ,ನ.೭: ಅಲ್ಲಾರಂಡ ರಂಗಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ತಾ.೮ರಂದು(ಇAದು) ಕೊಡಗಿನ ಪ್ರಥಮ ಬೇಟೆ ಸಾಹಿತಿ ಬಿ.ಡಿ.ಸುಬ್ಬಯ್ಯ (ಕಾಕೆಮಾನಿ) ಸ್ಮರಣಾರ್ಥ ಬೇಟೆ ಸಾಹಿತ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಡಿಕೇರಿ ಕೊಡವ ಸಮಾಜದ ಕಾಕೆಮಾನಿ ವೇದಿಕೆಯಲ್ಲಿ ಬೆಳಿಗ್ಗೆ ೧೦.೩೦ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಬೆಂಗಳೂರು ನಗರ ಕಸಾಪ ಮಾಜಿ ಅಧ್ಯಕ್ಷ, ರಂಗಭೂಮಿ ಕಲಾವಿದ ತಿಮ್ಮೇಶ್ ಉದ್ಘಾಟಿಸುವರು. ವೇದಿಕೆ ಹಾಗೂ ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೇಟೆ ಪುಸ್ತಕವನ್ನು ಹಾಸನದ ಸಾಹಿತಿ ಹಾಡ್ಲಳ್ಳಿ ನಾಗರಾಜ್ ಬಿಡುಗಡೆಗೊಳಿಸುವರು. ಸಾಹಿತಿ ಕೆ.ಆರ್.ವಿದ್ಯಾಧರ ಬೇಟೆ ಸಾಹಿತ್ಯದ ಬಗ್ಗೆ ವಿಚಾರ ಮಂಡನೆ ಮಾಡುವರು. ಮುಖ್ಯ ಅತಿಥಿಗಳಾಗಿ ಕಾಕೆಮಾನಿ ಅವರ ಪುತ್ರ ಬಾಚಮಾಡ ಎಸ್. ವಸಂತ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ಕೊನೆಯದಾಗಿ ಹುಲಿ ಮದುವೆ ಮಾಡಿಸಿಕೊಂಡ ಕಲ್ಲುಮಾಡಂಡ ಜಿಮ್ಮಿ ಮಾದಯ್ಯ, ಕೊಡಗಿನ ಬೇಟೆ ಸಾಹಿತಿ ಬಿ.ಆರ್. ಜೋಯಪ್ಪ, ದೇವಡ ಕಾಡ್ ಸಿನಿಮಾ ನಿರ್ಮಾಪಕ ಅವಿನಾಶ್ ಶೆಟ್ಟಿ ಅವರುಗಳನ್ನು ಅಭಿನಂದಿಸಲಾಗುವದು. ನಂತರ ಕವಿಗೋಷ್ಠಿ ನಡೆಯಲಿದೆ.