ವೀರಾಜಪೇಟೆ, ನ. ೭: ಪಟ್ಟಣದ ಕೊಡಗು ಡಿಸ್ಟಿçಕ್ಟ್ ಬಿಲ್ಡಿಂಗ್ ವಕರ‍್ಸ್ ಯೂನಿಯನ್‌ನ ೧೮ನೇ ವರ್ಷದ ವಾರ್ಷಿಕ ಮಹಾಸಭೆ ತಾ.೯ ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಬಿ ವರ್ಗಿಸ್ ತಿಳಿಸಿದ್ದಾರೆ.
ಅಂದು ನಡೆಯಲಿರುವ ಸಭೆಗೆ ಕೊಡಗು ಜಿಲ್ಲೆಯ ಕಾರ್ಮಿಕ ಅಧಿಕಾರಿ ಅನಿಲ್ ಬಗಟ್ಟಿ ವೀರಾಜಪೇಟೆಯ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ. ಮಾದಪ್ಪ, ಸಂಘದ ಕಾನೂನು ಸಲಹೆಗಾರರ ಟಿ.ಪಿ ಕೃಷ್ಣ, ಪುರಸಭೆ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ವೀರಾಜಪೇಟೆ ತಾಲೂಕು ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಜಿ ಸುಮೇಶ್, ಸಂಘದ ಕಾರ್ಯದರ್ಶಿ ಪಿ.ಕೆ ಪವಿತ್ರನ್, ಖಜಾಂಚಿ ಮುರುಗೇಶ್, ಹಾಗೂ ನವೀನ್ ಎಸ್. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.