ಮಡಿಕೇರಿ, ನ. ೭ : ತಾ. ೮ ರಂದು (ಇಂದು) ‘ಖಗ್ರಾಸ ಚಂದ್ರಗ್ರಹಣ’ವು ಶ್ರೀಕೃಷ್ಣ ಶಾಸ್ತçಸಿದ್ಧ ಪಂಚಾAಗದAತೆ ಗ್ರಹಣ ಸ್ಪರ್ಶವು ಮಧ್ಯಾಹ್ನ ೨.೩೯ ರಿಂದ ಪ್ರಾರಂಭಗೊAಡು ಸಂಜೆ ೬.೧೯ ಗಂಟೆಗೆ ಗ್ರಹಣ ಮೋಕ್ಷವಾಗುತ್ತದೆ. ಗ್ರಹಣದ ಕಾರಣ ಸಂಜೆ ೭.೩೦ ರ ನಂತರ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಯಾವುದೇ ಸೇವೆಗಳಿರುವುದಿಲ್ಲ.
‘ಕಾರ್ತಿಕ ಹುಣ್ಣಿಮೆ’ಯ ಪ್ರಯುಕ್ತ ದೇವಾಲಯದ ರೂಢಿ ಸಂಪ್ರದಾಯದAತೆ ಸಂಜೆ ೭.೩೦ ಗಂಟೆಗೆ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ದಟ್ಟೋತ್ಸವ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
‘ತೆಪ್ಪೋತ್ಸವ’ ಮಾಡಲಿಚ್ಛಿಸುವ ಭಕ್ತಾದಿಗಳು ಕಾಯ್ದಿರಿಸಿದ ದಿನಗಳನ್ನು ಹೊರತುಪಡಿಸಿ ತಾ. ೯ ರಿಂದ ೨೯ ರವರೆಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದ್ದು, ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗೆ ಅಣ್ಣಪ್ಪ ಜೆ.ಆರ್ ಮೊ.ಸಂ. ೯೯೦೨೨೯೦೩೦೨ ಹಾಗೂ ಭರತ್ ಜಿ.ಎನ್. ಮೊ.ಸಂ. ೯೫೩೫೭೭೯೬೬೯ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.