ಕೊಡಗು ಹಾಕಿ ಆಟದ ತವರೂರು, ಕೊಡವರೆಂದರೆ ಹಾಕಿ ಆಟದಲ್ಲಿ ಪ್ರವೀಣರು ಎನ್ನುವ ಪ್ರತೀತಿಯಿದೆ. ಇದಕ್ಕೆ ಪೂರಕವೋ ಎಂಬAತೆ ಪ್ರತಿ ಕೊಡವ ಕುಟುಂಬದಲ್ಲಿ ಒಂದೆರಡು ಹಾಕಿ ಸ್ಟಿಕ್‌ಗಳು ಇದ್ದೇ ಇರುತ್ತವೆ.

ಇದಕ್ಕೆ ಕಾರಣ: ಭಾರತದ ರಾಷ್ಟಿçÃಯ ಕ್ರೀಡೆ ಹಾಕಿ. ಭಾರತದ ಅಂತರ್‌ರಾಷ್ಟಿçÃಯ ಮಟ್ಟದ ಹಾಕಿ ತಂಡಕ್ಕೆ ಸಿಖ್ ಮತ್ತು ಕೊಡಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಳ್ಳುತ್ತಿದ್ದರು. ಆದ್ದರಿಂದ ಆಯ್ಕೆದಾರರ ಮತ್ತು ತರಬೇತುದಾರರ ಅನಿಸಿಕೆ ಪ್ರಕಾರ ಭಾರತದಲ್ಲಿ ಮುಖ್ಯವಾಗಿ ಎರಡು ಸ್ಥಳಗಳಲ್ಲಿ ಹಾಕಿ ಆಟದ ನರ್ಸರಿಗಳಿವೆ. ಒಂದು ಪಂಜಾಬ್‌ನಲ್ಲಿ, ಮತ್ತೊಂದು ಕೊಡಗಿನಲ್ಲಿ. ಇವುಗಳು ಹೇಗೆ ನರ್ಸರಿ ಗಳಾದವೆಂದು ತಿಳಿಯೋಣ.

ಸ್ವಾತಂತ್ರö್ಯಪೂರ್ವದಲ್ಲಿ ಸಿಯಾಲ್‌ಕೋಟ್‌ನಲ್ಲಿದ್ದ ಮುಸ್ಲಿಮ್ ಜನಾಂಗ ಮತ್ತು ಪಂಜಾಬ್‌ನಲ್ಲಿರುವ ಸಿಖ್ ಜನಾಂಗದವರಲ್ಲಿ ಬಹಳಷ್ಟು ಕುಟುಂಬ ಗಳು ಹಾಕಿ ಸ್ಟಿಕ್ ಮತ್ತು ಹಾಕಿ ಬಾಲ್‌ಗಳನ್ನು ತಯಾರು ಮಾಡುವುದನ್ನು ತಮ್ಮ ಒಂದು ಕುಲ ಕಸುಬು (ಗುಡಿ ಕೈಗಾರಿಕೆ) ಯನ್ನಾಗಿ ಮಾಡಿಕೊಂಡಿದ್ದ ರೆಂದು ದಾಖಲೆಗಳು ತಿಳಿಸುತ್ತವೆ. ಗಂಡಸರು ಮಲ್‌ರ‍್ರಿ ಮರದ ರೆಂಬೆ ಕಡಿದು ಕುದಿಯುವ ನೀರಿನಲ್ಲಿ ಮುಳುಗಿಸಿಕೊಂಡು ಸ್ಟೀಮ್ ಬೆಂಡಿAಗ್ ಕಲೆಯ ಪ್ರಕಾರ ಸ್ಟಿಕ್ಕನ್ನು ಬೇಕಾದ ಆಕಾರಕ್ಕೆ ಬಗ್ಗಿಸಿ ನಂತರ ಒಣಗಿಸುತ್ತಿದ್ದರು. ಹೆಂಗಸರು ಚಿಕ್ಕ ಕಾರ್ಕ್ ಉಂಡೆಯ ಸುತ್ತ ಉಣ್ಣೆಯ ದಾರವನ್ನು ಸುತ್ತುತ್ತಾ ಅಲ್ಲಲ್ಲಿ ನಡುನಡುವೆ ಕಾರ್ಕ್ ಫ್ಲೇಕ್ಸ್ಗಳನ್ನು ಇಡುತ್ತಾ ಉಣ್ಣೆಯ ದಾರವನ್ನು ಸುತ್ತುತ್ತಾ ನಿಗದಿತ ತೂಕಕ್ಕೆ ಮತ್ತು ನಿಗದಿತ ಗಾತ್ರಕ್ಕೆ ಬಂದಾಗ ಚರ್ಮದ ಅರ್ಧಗೋಲಾಕಾರದ ಹೊದಿಕೆ ಹಾಕಿ ಗಟ್ಟಿಯಾದ ‘ಟ್ವೆöÊನ್’ ದಾರದಿಂದ ಕೈಯಿಂದಲೇ ಹೊಲಿದು ಹಾಕಿ ಚೆಂಡನ್ನು ತಯಾರಿಸುತ್ತಿದ್ದರು. ಆ ಸಮಯದಲ್ಲಿ ತಯಾರಿಸಿದ ಸ್ಟಿಕ್ ಮತ್ತು ಬಾಲ್‌ನ ಗುಣಮಟ್ಟ ಎಷ್ಟಿತ್ತೆಂದರೆ ಬಹಳಷ್ಟು ರಾಷ್ಟಿçÃಯ ಮತ್ತು ಅಂತರ್‌ರಾಷ್ಟಿçÃಯ ಹಾಕಿ ಪಂದ್ಯಾಟಗಳಿಗೆ ಅಲ್ಲಿಯ ಸ್ಟಿಕ್ ಮತ್ತು ಬಾಲ್‌ಗಳಿಗೆ ಹೆಚ್ಚು-ಹೆಚ್ಚು ಬೇಡಿಕೆಗಳು ಇರುತ್ತಿದ್ದವು ಎಂದು ದಾಖಲೆಗಳು ತಿಳಿಸಿವೆ.

ಈ ಹಾಕಿ ಸ್ಟಿಕ್ ಮತ್ತು ಹಾಕಿ ಬಾಲ್ ತಯಾರಕರ ಮಕ್ಕಳು ಮತ್ತು ಅವರ ಸ್ನೇಹಿತರು ಒಂದೊAದು ಸ್ಟಿಕ್‌ಗಳನ್ನು ತೆಗೆದುಕೊಂಡು ಬಾಲ್‌ಗಳನ್ನು ಆಚೀಚೆ ತಟ್ಟುತ್ತಾ ಆಡುತ್ತಿದ್ದರು. ಹೀಗೆ ಅವರ ಮನೆಯಲ್ಲಿಯೇ ಹಾಕಿ ಆಟದ ಪರಿಸರ ಮತ್ತು ವಾತಾವರಣ ಇದ್ದುದ್ದರಿಂದ ಮತ್ತು ಪ್ರತಿದಿನ ಆಡುತ್ತಿದ್ದುದ್ದರಿಂದ ಆಟದ ಮೇಲೆ ಅವರಿಗೆ ಅಸ್ಥೆ ಮತ್ತು ಕೈಚಳಕ ಹಾಗೂ ನೈಪುಣ್ಯತೆ ಬೇಗನೆ ಕರಗತವಾಗುತ್ತಿದ್ದು, ಮುಂದೆ ಮುಸ್ಲಿಮ್ ಮತ್ತು ಸಿಖ್ ಜನಾಂಗದ ಯುವಕರು ಅತ್ಯಂತ ಪರಿಣಿತ ಆಟಗಾರರಾಗಿ ಹೊರ ಹೊಮ್ಮುತ್ತಿದ್ದರು. ಈ ರೀತಿ ಪಂಜಾಬ್‌ನಲ್ಲಿ ಸೂಕ್ತ ಪರಿಸರ ಹಾಗೂ ವಾತಾವರಣ ಹಾಕಿ ಆಟದ ನೈಪುಣ್ಯತೆಗೆ ಪ್ರಶಸ್ತ ಹಾಗೂ ಪೂರಕವಾಗಿದ್ದರೆ ಕೊಡಗಿನ ತರುಣರಲ್ಲಿ ಹಾಕಿಯ ಬಗ್ಗೆ ಆಸಕ್ತಿ ಮತ್ತು ನೈಪುಣ್ಯತೆ ಹೇಗೆ ಮೈಗೂಡಿಸಬಹುದೆಂಬುದನ್ನು ಗಮನಿಸೋಣ.

ಕೊಡವರು ಆದಿ ಕಾಲದಿಂದಲೇ ಕಾಡುಮೇಡುಗಳಲ್ಲಿ ವಾಸಿಸುತ್ತಿದ್ದು, ಜೀವನೋಪಾಯಕ್ಕೆ ಬೇಟೆಗಾರರಾಗಿ ಗೆಡ್ಡೆ-ಗೆಣಸು ಅಗೆಯುವವರಾಗಿ, ಹಣ್ಣು-ಹಂಪಲುಗಳನ್ನು ಆರಿಸುವವರಾಗಿ ನಂತರ ಕೃಷಿ ಪ್ರಧಾನ ಜೀವನ ಸಾಗಿಸುತ್ತಿದ್ದರು. ಅವರು ಮೈಮುರಿದು ದುಡಿದಿದ್ದುದ್ದರಿಂದ ಎತ್ತರದಲ್ಲೂ, ಗಾತ್ರದಲ್ಲೂ, ಶಾರೀರಿಕವಾಗಿ ಬೆಳೆದು ಶಕ್ತಿಯಲ್ಲಿ ಗಟ್ಟಿಮುಟ್ಟಾಗಿದ್ದು, ಧೈರ್ಯವಂತರು ಮುನ್ನುಗ್ಗುವ ಪ್ರವೃತ್ತಿಯವರಾಗಿದ್ದರು. ಅಂತೆಯೇ ನೈಸರ್ಗಿಕ ಪರಿಸರದಲ್ಲಿ ಓಡಾಡುವ, ಹಾರಾಡುವ ಮತ್ತು ಕೋಲಿನಿಂದ ವಸ್ತುಗಳನ್ನು ತಟ್ಟುವಂತಹ ಸ್ವಾಭಾವಿಕ ನೈಪುಣ್ಯತೆಯಿಂದ ಕೂಡಿರುತ್ತಿದ್ದರು. ಅಭ್ಯಾಸ ಬಲದಿಂದ ತರುಣರು ಸಾಮಾನ್ಯವಾಗಿ ಸೀಬೆಕಾಯಿ ಮರದ ಕೊಕ್ಕೆಯಾಕಾರದ ‘ಸ್ಟಿಕ್’ ಅನ್ನು ಕಡಿದು ಅದೇ ಮರದ ಉರುಟಾದ ಚೆಂಡನ್ನು ತಯಾರಿಸುತ್ತಿದ್ದರು. ‘‘ಮಕ್ಕಳು ಹರಿತವಾದ ಕತ್ತಿಯನ್ನು ಹಿಡಿದುಕೊಂಡು ಬೆಳಿಗ್ಗೆ ಕಾಡಿಗೆ ಹೋದರೆ ಸಾಯಂಕಾಲ ಹಿಂದಿರುಗುವಾಗ ಮೊಂಡಾದ ಕತ್ತಿ, ಸ್ಟಿಕ್ ಮತ್ತು ಬಾಲ್‌ಗಳೊಂದಿಗೆ ಬರುತ್ತಿದ್ದರು. ಎಂದು ಹಿರಿಯರು ಲಘುವಾಗಿ ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಉಪಕರಣಗಳ ತಯಾರಿಯಲ್ಲಿ ತಲ್ಲೀನರಾಗಿರುತ್ತಿದ್ದರು. ಪ್ರತೀ ಸಾಯಂಕಾಲ ಮತ್ತು ಬಿಡುವು ಸಮಯಗಳಲ್ಲಿ ಮಕ್ಕಳು ಸಮೀಪದ ಬೇಲ್, ಬಾಣೆಗಳಲ್ಲಿ ಕತ್ತಲಾಗುವವರೆಗೆ ಆಡುತ್ತಿದ್ದರು.

ಇಂತಹ ಪರಿಸರದಲ್ಲಿ ಆಟಗಾರರ ಉತ್ಸಾಹ ಮತ್ತು ಅಭಿರುಚಿಯ ಜೊತೆಗೆ, ಕ್ರೀಡಾ ಮನೋಭಾವವಿರುವ ಪೋಷಕರ, ಹಿರಿಯರ ಮತ್ತು ಸಾರ್ವಜನಿಕರ ಉತ್ತೇಜನ ಮತ್ತು ಒತ್ತಾಸೆಯಿಂದ ಕೊಡಗಿನ ಯುವಕರಲ್ಲಿ ಹಾಕಿತ್ವದ ಬೀಜಗಳು ಬಿತ್ತಲ್ಪಟ್ಟು ತರುಣರು ಚಿಕ್ಕವರಿರುವಾಗಲೇ ಮೊಳಕೆ ಒಡೆದು, ಗಿಡವಾಗಿ ನಂತರ ಮರವಾಗಿ ಬೆಳಯುತ್ತಾ ಹಾಕಿ ಆಟದ ಬಗ್ಗೆ ಒಲವು, ಆಸಕ್ತಿ ಮತ್ತು ನೈಪುಣ್ಯತೆಯು ಮಕ್ಕಳಲ್ಲಿ ರಕ್ತಗತವಾಯಿತೆಂದು ಅನುಭವಸ್ಥರು ತಿಳಿಸಿರುವರು.

ಕೊಡಗಿನ ಶಾಲೆಗಳಲ್ಲಿ ಆ ಕಾಲದಿಂದಲೇ ವಿಸ್ತಾರವಾದ ಆಟದ ಮೈದಾನ ಗಳಿದ್ದು, ಆ ಶಾಲೆಗಳಲ್ಲಿ ಹಾಕಿ ಸ್ಟಿಕ್‌ಗಳು ಮತ್ತು ಬಾಲ್‌ಗಳು ಖಡ್ಡಾಯ ವಾಗಿರುತ್ತಿದ್ದವು. ಪ್ರತಿಯೊಬ್ಬ ಉಪಾಧ್ಯಾಯರು ಕೂಡ ಉತ್ತಮ ಹಾಕಿ ಆಟಗಾರರಾಗಿದ್ದು ಮಕ್ಕಳ ಜೊತೆಯಲ್ಲಿ ಅವರೂ ಕೂಡ ಆಡುತ್ತಾ ಅವರಿಗೆ ಟೀಚರ್, ಟ್ರೆöÊನರ್ ಮತ್ತು ಕೋಚ್‌ಗಳಾಗಿ ಹಾಕಿ ಆಡಲು ಹುರಿದುಂಬಿಸುತ್ತಿ ದ್ದರು. ಇದರಿಂದ ಮಕ್ಕಳ ಹಾಕಿ ಆಟದ ಬೆಳವಣಿಗೆಗೆ ಫಲವತ್ತಾದ ಪರಿಸರ ವಾಯಿತು. ಹಾಕಿ ಆಟದ ಸೂಕ್ಷö್ಮ ನೈಪುಣ್ಯತೆ ಮಕ್ಕಳಲ್ಲಿ ಬೇರೂರಿತು. ಮಕ್ಕಳಲ್ಲಿ ಸ್ಪರ್ಧಾಭಾವನೆ ಬೆಳೆಸಲು ಆಗಿಂದಾಗ್ಗೆ ಅಂತರ್ ಶಾಲಾ (Iಟಿಣಡಿಚಿ-sಛಿhooಟ) ಮತ್ತು ಅಂತರ್‌ಶಾಲಾ ಮ್ಯಾಚ್‌ಗಳನ್ನು ಆಡಿಸಿ ಅವರ ನ್ಯೂನ್ಯತೆಗಳನ್ನು ಸರಿಪಡಿಸುತ್ತಿದ್ದರು. ಟೀಚರ್ ತಮ್ಮ ತಮ್ಮಲ್ಲೇ Souಣh ಛಿooಡಿg ಖಿeಚಿಛಿheಡಿs ಣeಚಿm ಮತ್ತು ಓoಡಿಣh ಛಿooಡಿg ಖಿeಚಿಛಿheಡಿs ಣeಚಿm ರಚಿಸಿ ಇವುಗಳನ್ನು ಒಗ್ಗೂಡಿದ ಛಿooಡಿg ಖಿeಚಿಛಿheಡಿs ಖಿeಚಿm ಮಾಡಿಟ್ಟಿದ್ದರು. ಮಕ್ಕಳಿಗಾಗಿ ನೋಡಿ ಕಲಿಯಲು ಆಗಿಂದಾಗ್ಗೆ ಪಂದ್ಯಾಟಗಳನ್ನು ಆಡುತ್ತಿದ್ದರು.

ಇದಕ್ಕೆ ಒತ್ತಾಸೆ ಎಂಬAತೆ ಆಗಿನ ಆಧುನಿಕ ಶೈಲಿಯ ಹಾಕಿ ಆಟವನ್ನು ಭಾರತಕ್ಕೆ ಬಂದ ಬ್ರಿಟೀಷ್ ಸೈನಿಕರಿಂದ ಭಾರತೀಯರಿಗೆ ಕಲಿಯಲು ಅವಕಾಶವಾಯಿತು. ಆ ಸಮಯದಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳು ಮಾತ್ರ ಹಾಕಿ ಆಡುತ್ತಿದ್ದರು. ಭಾರತೀಯ ಸೈನಿಕರಿಗೆ ಫುಟ್ಬಾಲ್ ಆಡಲು ಅವಕಾಶ ಕೊಡುತ್ತಿದ್ದರು. ವರ್ಷ ಕಳೆಂದತೆ ಭಾರತೀಯ ಸೈನಿಕರು ಅಧಿಕಾರಿಗಳಾದಾಗ ಭಾರತೀಯ ಸೈನಿಕರಿಗೆ ಹಾಕಿ ಆಡಲು ಅವಕಾಶ ಕಲ್ಪಿಸಿದರು. ಕೊಡಗಿನ ಸೈನಿಕರಲ್ಲಿ ಹಾಕಿ ಆಟ ರಕ್ತಗತವಾಗಿದ್ದುದ್ದರಿಂದ ಅವರು ಆಟದ ಎಲ್ಲಾ ವಿಭಾಗಗಳಲ್ಲಿಯೂ ಮಿಂಚುತ್ತಿದ್ದರು. ಬ್ರಿಟೀಷ್ ಹಾಕಿ ಟೀಮ್ ಆ ಸಮಯದಲ್ಲಿ ಭಾರತದ ಹಾಕಿ ಟೀಮ್ ಜೊತೆಯಲ್ಲಿ ಆಡಲು ಅವಕಾಶವನ್ನೇ ಕೊಡುತ್ತಿರಲಿಲ್ಲ. ಬ್ರಿಟೀಷ್ ಹಾಕಿ ಆಟಗಾರರ ಪ್ರಕಾರ ಅವರ ಅಡಿಯಾಳಾದ ಭಾರತದ ಹಾಕಿ ಟೀಮ್‌ಗೆ ಸೋಲುವುದನ್ನು ಊಹಿಸಲೂ, ಸಹಿಸಲೂ ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದರು. ಆದ್ದರಿಂದಲೇ ೧೯೨೮ರ ಆಮ್ಸ್ಟರ್‌ಡಾಮ್ ಒಲಂಪಿಕ್ಸ್ನಲ್ಲಿ ‘ಇಂಡಿಯಾ ಟೀಮ್’ ಎನ್ನುವ ಬದಲು ‘ಬ್ರಿಟೀಷ್ ಇಂಡಿಯಾ ಟೀಮ್ ಎಂದು ಹಾಕಿ ಆಟಕ್ಕೆ ಎಂಟ್ರಿ ಕಳುಹಿಸಿದ್ದರು.

ಕೆಲವು ಬ್ರಿಟೀಷ್ ಪ್ರಜೆಗಳು (ಐವರ್ ಬುಲ್ ಮತ್ತಿತರರು) ಕೊಡಗಿನ ಪಾಲಿಬೆಟ್ಟದ ಸುತ್ತಮುತ್ತ ಕಾಫಿ ಎಸ್ಟೇಟ್‌ಗಳನ್ನು ಪ್ರಾರಂಭಿಸಿದರು. ಆ ಎಸ್ಟೇಟ್‌ಗಳ ಗುಂಪು ಕನ್ಸಾಲಿಡೇಟೆಡ್ ಕಾಫಿ ಎಸ್ಟೇಟ್ಸ್ ಎಂದು ಹೆಸರಿಸಲ್ಪಟ್ಟಿವೆ. ಈ ಬ್ರಿಟೀಷ್ ಪ್ಲಾಂರ‍್ಸ್ ತಮ್ಮ ಬಿಡುವಿನ ಸಮಯಗಳಲ್ಲಿ ಮನೋಲ್ಲಾಸಕ್ಕಾಗಿ ಗಾಲ್ಫ್ ಮತ್ತು ಹಾಕಿ ಆಟವನ್ನು ಆಡುತ್ತಿದ್ದರು. ಕ್ರಮೇಣ ಕೊಡಗಿನ ಟೀರ‍್ಸ್ ಟೀಮ್ ಜೊತೆ ಸ್ನೇಹಭಾವದ ಹಾಕಿ ಪಂದ್ಯಾಟಗಳನ್ನು ಆಡುತ್ತಿದ್ದರು. ಉದಾಹರಣೆಗೆ ಮಡಿಕೇರಿಯ ಜಿಮ್‌ಖಾನಾ ಹಾಕಿ ಮೈದಾನದಲ್ಲಿ ಯುರೋಪಿಯನ್ ಪ್ಲಾಂರ‍್ಸ್ ಹಾಕಿ ಟೀಮ್ ಮತ್ತು ಕೂರ್ಗ್ ಟೀರ‍್ಸ್ ಹಾಕಿ ಟೀಮ್ ನಡುವೆ ನಡೆದ ಹಾಕಿ ಪಂದ್ಯಾಟದಲ್ಲಿ ಕೂರ್ಗ್ ಟೀರ‍್ಸ್ ಟೀಮ್ ೨-೧ ಗೋಲ್‌ಗಳ ಅಂತರದಲ್ಲಿ ಗೆದ್ದಿದ್ದರು ಎಂದು ದಾಖಲೆಗಳು ತಿಳಿಸಿವೆ. ಆ ಕಾಲದಲ್ಲಿ ಕೊಡಗಿನ ಹಾಕಿ ಆಟದ ಏಳ್ಗೆಗೆ ಈ ಕಾಫಿ ಪ್ಲಾಂರ‍್ಸ್ಗಳು ವೈಜ್ಞಾನಿಕ ಸಲಹೆ ಆಟದ ವೈಖರಿ ಬಗ್ಗೆ ಸಲಹೆ, ಸೂಚನೆ, ಮಾರ್ಗದರ್ಶನ ಕೊಟ್ಟದ್ದು ಅತ್ಯಂತ ಫಲಕಾರಿಯಾಯಿತು. ಸಾಧಾರಣ ೭೦ ವರ್ಷಗಳ ಹಿಂದೆಯೂ ಕೂಡ ಕೊಡಗಿನ ಟೀರ‍್ಸ್ ಟೀಮ್ ಅತ್ಯಂತ ಬಲಶಾಲಿ ಮತ್ತು ಕೌಶಲ್ಯಭರಿತ ಆಟಗಾರರಿಂದ ಕೂಡಿತ್ತು. ಅಂತಹವರಲ್ಲಿ ಕೆಲವರು ಈಗಲೂ ಸ್ಮರಣೀಯರು. ಬಾಚರಣಿಯಂಡ ನಾಣಯ್ಯ, ನಾಯಡ ನಂಜಪ್ಪ, ಪಾಲೇಕಂಡ ಚಾಪ, ಕೋಣೇರಿರ ಅಯ್ಯಪ್ಪ, ಬಲ್ಲಟಿಕಾಳಂಡ ಸೋಮಯ್ಯ, ಸಿ. ಯಂ. ಸೋಮಪ್ಪ, ಮನೆಯಪಂಡ ಕರುಂಬಯ್ಯ, ಪುಗ್ಗೇರ ಗಣಪತಿ (ಇವರು ತೆಳ್ಳಗಿನ ತೊಡೆ ಎತ್ತರದ ಗೋಲ್ ಕೀಪರ್ ಪೇಡ್ ಮಾತ್ರ ಧರಿಸಿ ಹೆಸರಾಂತ ಗೋಲ್ ಕೀಪರ್ ಆಗಿದ್ದರು.) ಪಟ್ಟಡ ಸೋಮಯ್ಯ (ಇವರು ಹಾಕಿ ಆಟಗಾರರನ್ನು ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಮೈಸೂರಲ್ಲಿ ಹಾಕಿ ಆಟ ನೋಡಲು ಕರೆದುಕೊಂಡು ಹೋದ ಹಾಕಿ ಆರಾಧಕರು ಎಂದು ಅನುಭವಸ್ಥರು ತಿಳಿಸಿರುವರು) ಇನ್ನೊಬ್ಬ ಹಾಕಿ ಆಟಗಾರ ಆಗಿನ ಫಸ್ಟ್ ಫರಮ್ ವಿದ್ಯಾರ್ಥಿ ಅಮ್ಮಣಕುಟ್ಟಂಡ ಎ. ಅಯ್ಯಪ್ಪ ಆ ಹಂತದಲ್ಲಿಯೇ ಹೈಸ್ಕೂಲಿನ ‘ಎ’ ಟೀಮಿಗೆ ಆಡವಷ್ಟು ಪರಿಣಿತರಾಗಿದ್ದರು. (ಇವರವಿಚಾರದಲ್ಲಿ ನಾವು ಂ-A.A-A ಟೀಮ್ ಆಟಗಾರ ಎಂದು ಹೆಮ್ಮೆ ಪಡುತ್ತಿದ್ದೆವು.) ಇಂತಹ ಗುಣಾತ್ಮಕ ಮಹಾನ್ ಆಟಗಾರರಿಗೆ ಆಗ ಪ್ರಸ್ತುತ ಮಟ್ಟದ ವೈಜ್ಞಾನಿಕ ತರಬೇತಿ, ಆಧುನಿಕ ಹಾಕಿ ಆಟದ ಉಪಕರಣಗಳು, ಅಂತರ್ ಮತ್ತು ಅಂತರ್‌ರಾಷ್ಟಿçÃಯ ಆಟಗಳ ಅನುಭವ ಸಿಕ್ಕುವಂತಿದ್ದಿದ್ದರೆ ಕೊಡಗಿನ ಬಹಳಷ್ಟು ಟೀಚರ್- ಆಟಗಾರರು ಒಲಂಪಿಯನ್ಸ್ ಆಗಿರುತ್ತಿದ್ದರೊ ಏನೋ ! ಎಂದು ಕೊಡಗಿನ ಹಿರಿಯರು ತಮ್ಮ ಅನಿಸಿಕೆಯನ್ನು ಹಂಚಿಕೊAಡಿದ್ದಾರೆ.

ಜೊತೆಗೆ ಹಾಕಿಯ ಬಗ್ಗೆ ಒಲವಿದ್ದ ಅನೇಕ ಕೊಡವ ಕುಟುಂಬಗಳು ತಮ್ಮ ತಮ್ಮ ಕುಟುಂಬಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಒಂದು ವರ್ಷಕ್ಕೆ ಸೀಮಿತ ಕಪ್‌ಗಳನ್ನು ಇಟ್ಟು ಅಂತರ್ ಶಾಲಾ ಪಂದ್ಯಾಟಗಳನ್ನು ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದರು. ವೀರಾಜಪೇಟೆ ಹೈಸ್ಕೂಲ್‌ನಲ್ಲಿ ಇಂತಹ ಅನೇಕ ಟೂರ್ನಮೆಂಟ್ಸ್ ನಡೆಯುತ್ತಿದ್ದವು. ಅವುಗಳಲ್ಲಿ ಚೇನಂಡ ಕೇಸ್ಲೆಟ್ ಬಹು ಆಕರ್ಷಣೀಯವಾಗಿತ್ತು. ಹಾಗೆಯೇ ಇನ್ನೊಬ್ಬರು ನೆಲ್ಲಮಕ್ಕಡ ಡಾ|| ಉತ್ತಪ್ಪ ಅವರು ನೆಲ್ಲಮಕ್ಕಡ ಕಪ್ ಈ ಪಂದ್ಯಾಟದ ವಿಶೇಷತೆ ಅಂದರೆ ವಿನ್ರ‍್ಸ್ ಮತ್ತು ರನ್ರ‍್ಸ್ ಅಪ್ ತಂಡಗಳ ಎಲ್ಲಾ ಆಟಗಾರರಿಗೆ ಮಿನಿಯೇಚರ್ ಕೊಡವರ ಪೀಚೆಕತ್ತಿಗಳನ್ನು ಬಹುಮಾನವಾಗಿ ಕೊಟ್ಟಿರುವರು. ಇಂತಹ ಅತ್ಯಂತ ಪ್ರಸಕ್ತವಾದ ಕೊಡಗಿನ ಬೆಂಬಲದ ಪರಿಸರದಲ್ಲಿ ಕೊಡವರಲ್ಲಿ ಹಾಕಿ ಆಟ ರಕ್ತಗತವಾದದ್ದು ಬಹಳ ಸಹಜ ಸ್ವಾಭಾವಿಕವೇ ಸರಿ. ಕೊಡಗಿನಲ್ಲಿ ಹಾಕಿ ಆಟಕ್ಕೆ ಕ್ರೀಡಾಭಿಮಾನಿ ಸಾರ್ವಜನಿಕರ ಒತ್ತಾಸೆ ಮತ್ತು ಬೆಂಬಲ ಎಷ್ಟಿತ್ತೆಂದರೆ ವೀರಾಜಪೇಟೆ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದ ಹಾಕಿ ಫೈನಲ್ಸ್ನ್ನು ವೀಕ್ಷಿಸಲು ಮಧ್ಯಾಹ್ನದ ಮೇಲೆ ಎಲ್ಲಾ ಸರಕಾರಿ ಕಚೇರಿಗಳಿಗೆ ಮತ್ತು ಶಾಲೆಗಳಿಗೆ ರಜೆ ಕೊಡುತ್ತಿದ್ದರು. (ಆಗ ಕೊಡಗು ‘ಅ-Sಣಚಿಣe’ ಆಗಿದ್ದು ಅheಜಿ ಅommissioಟಿeಡಿ ಆಡಳಿತಕ್ಕೆ ಒಳಪಟ್ಟಿತ್ತು. ಹಾಗೆಯೇ ಬಹಳಷ್ಟು ಅಂಗಡಿಗಳು ಮುಚ್ಚಿರುತ್ತಿದ್ದವು. ಹಾಕಿ ಆಟದ ಮೈದಾನದ ನಾಲ್ಕು ಕಡೆ ಗೆರೆಯ ಸುತ್ತಲೂ ಮೂರು ಪಂಕ್ತಿಯಾಗಿ ವಿದ್ಯಾರ್ಥಿಗಳು ವೀಕ್ಷಕರು ನಿಂತು ಎರಡೂ ಕಡೆಯ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

ಇದಕ್ಕೂ ಒತ್ತಾಸೆಯಾಗಿ ನಂತರದ ದಿನಗಳಲ್ಲಿ ಮಡಿಕೇರಿಯಲ್ಲಿ ಕ್ರೀಡಾ ಪ್ರೋತ್ಸಾಹಕ ಸಹೋದರರಾದ ಸಿ. ವಿ. ಶಂಕರ್ ಸದಾಶಿವರಾವ್ ರವರು ಹಾಕಿ ತರಬೇತಿ ಶಿಬಿರ ಪ್ರತಿ ವರ್ಷ ನಡೆಸುತ್ತಿದ್ದು ಆಟಗಾರರ ಗುಣಮಟ್ಟ ಏರಿಸಲು ಹಾಕಿಯಲ್ಲಿ ದಿಗ್ಗಜರಾದ ವಿಜಾರ್ಡ್ ಒಲಂಪಿಯನ್ ಧ್ಯಾನ್‌ಚಂದ್, ಕೆ. ಡಿ. ಸಿ. ಸಿಂಗ್ (ಬಾಬು) ಇಂಟರ್ ನ್ಯಾಷನಲ್ ಕೋಚ್ ಮತ್ತು ಅಂಪೈರ್ ವಿ. ವಿ. ನಾಯ್ಡು (ವೆಂಕಿ) ಪೀಟರ್, ಮೆಕ್ ಬ್ರೆöÊಡ್‌ರಂತಹ ಮಹಾತಜ್ಞರು ಕೊಡಗಿನ ಯುವ ಆಟಗಾರರಿಗೆ ಭದ್ರ ಅಡಿಪಾಯ ಹಾಕಿದರು. ಇದರ ಫಲವಾಗಿ ಬಹಳಷ್ಟು ಕೊಡಗಿನ ಹಾಕಿ ಆಟಗಾರರು ಒಲಿಂಪಿಕ್ಸ್ ವರ್ಲ್ಡ್ ಕಪ್, ಏಷಿಯನ್ ಗೇಮ್ಸ್ ಚಾಂಪಿಯನ್ಸ್ ಟ್ರೋಫಿ ಮುಂತಾದ ಅಂತರ್‌ರಾಷ್ಟಿçÃಯ ಪಂದ್ಯಾಟಗಳಲ್ಲಿ ಮಿಂಚಿದರು. ಹಾಗೆಯೇ ಅಂತರ್‌ರಾಷ್ಟಿçÃಯ ಮಟ್ಟದಲ್ಲಿ ಕೋಚ್ ಮತ್ತು ಅಂಪೈರ್‌ಗಳಾದರು. ಕೊಡಗಿನ ಹಾಕಿ ಆಟದ ತಜ್ಞರು ಪಿ.ಹೆಚ್.ಡಿ. ಪದವಿಗಳಿಸಿ ಪಿ.ಹೆಚ್.ಡಿ. ಪದವಿಯ ಗೈಡ್‌ಗಳಾಗಿ, ಪ್ರಿ ಒಲಂಪಿಕ್ಸ್ ಸೈಂಟಿಫಿಕ್ ಸೆಸನ್ಸ್ನಲ್ಲಿ ಸಿಯೋಲ್ ಒಲಂಪಿಕ್ಸ್ನಲ್ಲಿ ರೀಸರ್ಚ್ ಪೇಪರ್ ಗಳನ್ನು ಮಂಡಿಸಿರುವರು. ಹಾಗೆಯೇ ಹಾಕಿಯಲ್ಲಿ ಪದ್ಮಶ್ರೀ ಮತ್ತು ಅರ್ಜುನ ಆವಾರ್ಡ್ಗಳಿಸಿದ ಹಾಕಿ ದಿಗ್ಗಜರಿರುವರು ಹೀಗೆ ಆಟದ ಎಲ್ಲಾ ವಿಭಾಗಗಳಲ್ಲೂ ಮಹಾಸಾಧನೆ ಮಡುವ ವಿಫುಲ ಅವಕಾಶವಿರುವುದು.

ಪ್ರಸ್ತುತ : ಇದಕ್ಕೆಲ್ಲಾ ಒತ್ತಾಸೆ ಎಂಬAತೆ ಕೊಡವರ ಅಂತರ ಕುಟುಂಬ ಗಳ ಹಾಕಿ ಹಬ್ಬಕ್ಕೆ ಹುಟ್ಟು ಹಾಕಲಾಯಿತು. ೧೯೯೭ರಲ್ಲಿ ಪಾಂಡAಡ ಕುಟುಂಬದ ಕುಟ್ಟಪ್ಪ ಮತ್ತು ಅವರ ಸಹೋದರ ಕಾಶಿ, ತಮ್ಮ ತಂದೆಯವರ ಜ್ಞಾಪಕಾರ್ಥವಾಗಿ ಒಕ್ಕಡೊಕ್ಕಡ ಹಾಕಿ ನಮ್ಮೆ ‘ಪಾಂಡAಡ ಕಪ್ ಪಂದ್ಯಾಟವನ್ನು ಕರಡ ಶಾಲಾ ಮೈದಾನದಲ್ಲಿ ಪ್ರಾರಂಭಿಸಿದರು. ನಂತರ ನಿಗದಿತ ಒಂದೊAದು ಕುಟುಂಬವು ನಿಗದಿತ ಆಯಾಯ ವರ್ಷದಲ್ಲಿ ಆ ಕುಟುಂಬದ ಅನುಕೂಲದ ಮೇರೆ ನಿಗದಿತ ಸ್ಥಳದಲ್ಲಿ ಹಾಕಿ ಹಬ್ಬವನ್ನು ಆಚರಿಸಿದವು. ಉದ್ಘಾಟನಾ ಸಮಾರಂಭವು ಹಬ್ಬದ ಕಳೆಕಟ್ಟಲು ಹೆಚ್ಚು ಹೆಚ್ಚು ಆಡಂಭರ ಭರಿತವಾದವು. ಕುಟುಂಬದ ಪುರುಷರು ಕುಪ್ಪಿಯಚಾಲೆ, ಮಂಡೆತುಣಿ, ಧರಿಸಿದರೆ ಸ್ತಿçÃಯರು ಒಂದೇ ಬಣ್ಣದ ಒಂದೇ ನಮೂನೆಯ ಸೀರೆ, ಒಂದೇ ಬಣ್ಣದ ಉದ್ದ ತೋಳಿನ ಜಾಕೆಟ್ ಮತ್ತು ತಲೆಗೆ ಒಂದೇ ಬಣ್ಣದ ವಸ್ತçಧರಿಸಿ ಕೊಂಬು, ಕೊಟ್ಟ್, ವಾಲಗದೊಡನೆ ಬರುವ ಮೆರವಣಿಗೆ ಹಬ್ಬದ ವಾತಾವರಣದಂತೆ ಕಂಗೊಳಿಸಿರುತ್ತಿತ್ತು.

೧೯೯೭ರಿAದ ೨೦೧೬ರ ವರೆಗಿನ ಇಪ್ಪತ್ತು ವರ್ಷಗಳಲ್ಲಿ ೨೦ ಕುಟುಂಬಗಳು ಈ ಹಾಕಿ ಹಬ್ಬವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಆಡಂಭರವಾಗಿ ನಡೆಸುತ್ತಾ ಬಂದಿರುವರು. ಇದರ ಫಲವಾಗಿ ೧೯೯೭ರಲ್ಲಿ ಪಾಂಡAಡ ಕುಟುಂಬಸ್ಥರು ಸುಮಾರು ಒಂದೂವರೆ ಲಕ್ಷದಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಿದರೆ ೨೦೧೬ರಲ್ಲಿ ಕುಲ್ಲೇಟಿರ ಕುಟುಂಬದವರ ವೆಚ್ಚ ೧ ಕೋಟಿಗೂ ಮೀರಿತ್ತು ಎನ್ನಲಾಗಿದೆ. ೨೦೨೩ರಲ್ಲಿ ಹಾಕಿ ಹಬ್ಬ ನಡೆಸಲು ನಿರ್ಧರಿಸಿರುವ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಅಂದಾಜು ಒಂದೂವರೆ ಕೋಟಿ ಖರ್ಚಿನ ನಿರೀಕ್ಷೆ ಯಲ್ಲಿರುವರು. (ಮುಂದುವರಿಯುವುದು)

-ಕಲ್ಯಾಟAಡ ಡಾ|| ಚಿಣ್ಣಪ್ಪ

ಕುಂಜಿಲ ಕಕ್ಕಬೆ,

ಮೊ : ೯೫೩೫೦೬೮೭೬೬