ಮೂರ್ನಾಡು, ನ. ೩: ಇಲ್ಲಿನ ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಹುತಾತ್ಮ ಯೋಧರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಯಿತು.
೨೦೧೬ ರಲ್ಲಿ ಹುತಾತ್ಮರಾದ ಯೋಧ ಕೆ.ಎಸ್. ರಾಜೇಶ್ ಸ್ಮರಣಾರ್ಥವಾಗಿ ನಿರ್ಮಿಸಿದ ಸಮಾಧಿಯ ಸುತ್ತಮುತ್ತಲ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು ಹಾಗೂ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಹೆಚ್.ಡಿ. ದಿನೇಶ್ ಹಾಗೂ ಸದಸ್ಯರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಶಿಕ್ಷಕಿ ಚೈತ್ರಾ ಹಾಗೂ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.ಶನಿವಾರಸAತೆ: ಶನಿವಾರಸಂತೆ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಶಿಕ್ಷಕಿ ಚೈತ್ರಾ ಹಾಗೂ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.ಮಡಿಕೇರಿ: ವೀರನಾಡು ರಕ್ಷಣಾ ವೇದಿಕೆ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದಲ್ಲಿ ಆಚರಿಸಲಾಯಿತು.
ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಉದ್ಯಮಿ ಎಂ.ವಿ. ಲೋಕೇಶ್ ಧ್ವಜಾರೋಹಣ ನೆರವೇರಿಸಿ, ಕನ್ನಡ ಭಾಷೆ ವಿಶ್ವದಾದ್ಯಂತ ಪಸರಿಸುವಂತಾಗಲಿ ಎಂದು ಶುಭಕೋರಿದರು.
ವೇದಿಕೆಯ ಗೌರವಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಮೂರು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಗೌರವಿಸುವಂತಾಗಬೇಕು ಮತ್ತು ಇತರರಿಗೂ ಕಲಿಸುವಂತಾಗಬೇಕು ಎಂದರು.
ವೇದಿಕೆಯ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಮಾತನಾಡಿ, ಕೊಡಗಿನಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಅಳವಡಿಸಿದ ಫಲಕಗಳಲ್ಲಿ ಕನ್ನಡವನ್ನು ದಪ್ಪ ಅಕ್ಷರಗಳಲ್ಲಿ ಬಳಸುವಂತಾಗಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸುವುದಾಗಿ ತಿಳಿಸಿದ ಅವರು, ತಿಂಗಳ ಕೊನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ವೇದಿಕೆಯ ನಗರಾಧ್ಯಕ್ಷ ಪ್ರದೀಪ್ ಕರ್ಕೆರ, ಜಿಲ್ಲಾ ಕಾರ್ಯದರ್ಶಿ ಹಿದಾಯತ್‌ವುಲ್ಲ, ಜಾದುಗಾರ ವಿಕ್ರಮ್ ಶೆಟ್ಟಿ, ಪ್ರಮುಖರಾದ ಟಿ.ಪಿ. ರಾಜೇಂದ್ರ, ಟಿ.ಎಲ್. ಅಶೋಕ್, ಜಗದೀಶ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ರಫೀಕ್, ಕಾರ್ಯದರ್ಶಿ ನಾಗರಾಜ್, ಮೋಣು ಮತ್ತಿರರು ಉಪಸ್ಥಿತರಿದ್ದರು.