ಗುಡ್ಡೆಹೊಸೂರು, ನ. ೪: ಕುಶಾಲನಗರ ತಾಲೂಕು ಗುಡ್ಡೆಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಕ್ರೀಡಾ ಸಂಸ್ಥೆಯು ಯಶಸ್ವಿ ೫ನೇ ವರ್ಷಗಳನ್ನು ಪೂರೈಸಿದೆ. ಇಲ್ಲಿ ಫುಟ್‌ಬಾಲ್, ಕ್ರಿಕೆಟ್ ಮತ್ತು ಬ್ಯಾಡ್‌ಮಿಂಟನ್ ಕ್ರೀಡೆಗಳಲ್ಲಿ ತರಬೇತಿ ಹೊಂದಿರುವ ಕ್ರೀಡಾಪಟುಗಳು ರಾಜ್ಯ, ಜಿಲ್ಲೆ ಮತ್ತು ವಲಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಆಟಗಾರರಿಗೆ ನೆರವಾಗುವ ಕಾರ್ಯಕ್ರಮವನ್ನು ಐ.ಎನ್.ಎಸ್. ಸಂಸ್ಥೆ ಮಾಡುತ್ತಿದೆ. ಆಸಕ್ತ ಬ್ಯಾಡ್‌ಮಿಂಟನ್ ಆಟಗಾರರಿಗೆ ಸಂಸ್ಥೆಯು ಉಚಿತವಾಗಿ ತರಬೇತಿ ನೀಡುವ ಕಾರ್ಯಕ್ರಮ ನಡೆಸುತ್ತಿದೆ. ಬೂಟ್, ರ‍್ಯಾಕೆಟ್ ಮತ್ತು ಷಟಲ್‌ಗಳನ್ನು ಸಂಸ್ಥೆಯು ಉಚಿತವಾಗಿ ಒದಗಿಸುತ್ತದೆ. ಸೀಮಿತ ಮಕ್ಕಳನ್ನು ಮಾತ್ರ ಇದರಲ್ಲಿ ತೆಗೆದುಕೊಳ್ಳಲಾಗುತ್ತಿದೆ.
ಆಸಕ್ತ ಆಟಗಾರರು ಕೂಡಲೇ ನೋಂದಾಯಿಸಿಕೊಳ್ಳಲು ಸಂಸ್ಥೆಯ ಸಂಸ್ಥಾಪಕ ಐಚೆಟ್ಟಿರ ಪೊನ್ನಪ್ಪ ಕೋರಿಕೊಂಡಿದ್ದಾರೆ.
೮ ರಿಂದ ೧೧ ವರ್ಷದವರಿಗೆ ಒಂದು ವರ್ಷದ ತನಕ ಉಚಿತ ತರಬೇತಿ. ಸರಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳು ಮಾತ್ರ. ಐ.ಎನ್.ಎಸ್. ಕ್ರೀಡಾಂಗಣ ಗುಡ್ಡೆಹೊಸೂರು. ತಾ. ೧೦ ರೊಳಗೆ ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ೯೮೪೫೦೦೨೭೩೭, ೯೮೮೦೫೭೮೫೫೪ ಸಂಪರ್ಕಿಸಬಹುದು.