ಕುಶಾಲನಗರ, ನ.೪ : ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ಅಷ್ಟಬಂಧ ಪ್ರತಿಷ್ಟೆ, ಬ್ರಹ್ಮ ಕಲಶೋತ್ಸವ, ಕುಂಭಾಬಿಷೇಕ ಕಾರ್ಯಕ್ರಮಗಳು ತಾ. ೪ ರಿಂದ ಆರಂಭಗೊAಡಿದೆ.
ವೇದಬ್ರಹ್ಮ ಕೇಶವ ದೀಕ್ಷಿತ್ ಮತ್ತು ಅರ್ಚಕರ ತಂಡದ ಮೂಲಕ ಮೂರು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಲಿವೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್ ವಸಂತ್ಕುಮಾರ್ ತಿಳಿಸಿದ್ದಾರೆ.
ತಾ. ೫ ರಂದು (ಇಂದು) ಬೆಳಗ್ಗೆ ೮ ಗಂಟೆಗೆ ದೇವಾಲಯದಲ್ಲಿ ನಾಡಿನ ಸುಭಿಕ್ಷೆಗಾಗಿ ಭಕ್ತಾದಿಗಳ ಸಾಮೂಹಿಕ ಸಂಕಲ್ಪ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮವಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಆರ್.ಕೆ ನಾಗೇಂದ್ರ ಅವರು ತಿಳಿಸಿದ್ದಾರೆ.