ಕಕ್ಕಬೆ, ನ. ೨: ಕಕ್ಕಬೆಯ ಟ್ರಯಾಂಗಲ್ ಶೂಟಿಂಗ್ ಕ್ಲಬ್ ವತಿಯಿಂದ ಆಯೋಜಿಸಲಾದ ಮೂರನೇ ವರ್ಷದ ಕೈಲ್ ಮುಹೂರ್ತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮಂಗಳವಾರ ಕಕ್ಕಬೆಯ ಜಿ. ಯಂ. ಪಿ. ಶಾಲೆಯ ಮೈದಾನದಲ್ಲಿ ನಡೆಯಿತು.
೦.೨೨ ರೈಫಲ್ ವಿಭಾಗದಲ್ಲಿ ಮೊದಲನೇ ಸ್ಥಾನವನ್ನು ವರುಣ್ ಬಳಪದ, ಎರಡನೇ ಸ್ಥಾನವನ್ನು ಪುತ್ತರಿರ ಕಾರ್ತಿಕ್ ಕಾರ್ಯಪ್ಪ , ಮೂರನೇ ಸ್ಥಾನವನ್ನು ಐಯ್ಯೇಟಿರ ಸುಗುಣ ಪಡೆದುಕೊಂಡರು.
ತೋಟದ ಕೋವಿಯಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನವನ್ನು ಅಜ್ಜೆಟೀರ ಗೌತಮ್, ಎರಡನೇ ಸ್ಥಾನವನ್ನು ಪಟ್ಟಮಾಡ ಐರಾ ಬೋಪಣ್ಣ, ಮೂರನೇ ಸ್ಥಾನವನ್ನು ಪುದಿಯೊಕ್ಕಡ ಪೂರ್ಣ ಪೂಣಚ್ಚ ಪಡೆದುಕೊಂಡರು. ಏರ್‌ಗನ್ ಟಾರ್ಗೆಟ್ ವಿಭಾಗದಲ್ಲಿ ಮೊದಲನೇ ಸ್ಥಾನವನ್ನು ಕೆ. ಶಬ್ಧ್ ಬೆಳ್ಳಿಯಪ್ಪ, ಎರಡನೇ ಸ್ಥಾನವನ್ನು ಜಸ್ಟಿನ್, ಮೂರನೇ ಸ್ಥಾನವನ್ನು ಪುತ್ತರಿರ ನಂಜಪ್ಪ ಪಡೆದುಕೊಂಡರು.