ವೀರಾಜಪೇಟೆ, ನ. ೨: ಮಾಧ್ಯಮ ರಂಗದಲ್ಲಿರುವ ಉದ್ಯೋಗಾವಕಾಶ ಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ. ದಯಾನಂದ್ ಸಲಹೆಯಿತ್ತರು.

ಕೊಡಗು ಪ್ರೆಸ್ ಕ್ಲಬ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅರ್ಥಶಾಸ್ತç ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಧ್ಯಮ ದೇಶದ ಬೆನ್ನೆಲುಬು. ಸಂವಿಧಾನ ಬದ್ಧ ಮೂರು ಅಂಗಗಳಿಗಿAತ ಮಾಧ್ಯಮ ರಂಗ ಶ್ರೇಷ್ಠ ಅಂಗ ಎಂದು ಬಣ್ಣಿಸಿ ವರದಿಗಳು ವಸ್ತುನಿಷ್ಠವಾಗಿರಬೇಕು ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವೈಯಕ್ತಿಕ ಆಸಕ್ತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಮಾಧ್ಯಮದ ಬಗ್ಗೆ ಅರಿವು ಮೂಡಿಸಲು ಮಾಧ್ಯಮ ಕಾರ್ಯಾಗಾರ ಆಯೋಜಿಸಲ್ಪಟ್ಟಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಮಾಧ್ಯಮ ರಂಗದ ಮೂಲಕ ಸಾರ್ಥಕ ಜೀವನ ಸಾಗಿಸಲು ಅವಕಾಶವಿದೆ, ಯಾವುದೇ ಸುದ್ದಿ ವಸ್ತುನಿಷ್ಠವಾಗಿದ್ದರೆ ಸುದ್ದಿಗಳಿಗೆ ಮಹತ್ವವಿರುತ್ತದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ೪ನೇ ಅಂಗ ಎಂದು ಗುರುತಿಸಲ್ಪಟ್ಟಿದೆ. ಮುದ್ರಣ ಮಾಧ್ಯಮ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದು ಪತ್ರಕರ್ತ ಕೆ.ಕೆ. ರೆಜಿತ್ ಕುಮಾರ್ ಹೇಳಿದರು.

ಪದವಿ ಮುಗಿದ ಬಳಿಕ ಮುಂದೇನು ಮಾಡುವುದು ಎಂಬ ಗೊಂದಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ದೃಶ್ಯ ಮಾಧ್ಯಮದಲ್ಲಿ ಒಳ್ಳೆಯ ಉದ್ಯೋಗಾವಕಾಶ ಇದೆ ಎಂದು ಪತ್ರಕರ್ತ ಐಮಂಡ ಗೋಪಾಲ್ ಸೋಮಯ್ಯ ಹೇಳಿದರು. ಪದವಿಯೊಂದಿಗೆ ವೃತ್ತಿಪರ ಶಿಕ್ಷಣದಿಂದ ಉದ್ಯೋಗಾವಕಾಶ ಸಿಗಲಿದೆ. ಮಾಧ್ಯಮ ರಂಗ ವ್ಯಾಪ್ತಿ ವಿಸ್ತಾರವಾಗಿದೆ ಎಂದು ಪತ್ರಿಕೋದ್ಯಮ ಉಪನ್ಯಾಸಕ ಐನಂಡ ಸೋಮಣ್ಣ ಹೇಳಿದರು.

ಪತ್ರಕರ್ತ ಮಂದನೆರವAಡ ಯುಗ ದೇವಯ್ಯ ಮಾತನಾಡಿ ಪಿಆರ್‌ಒ, ಜಾಹೀರಾತು, ತಾಂತ್ರಿಕ ಬರವಣಿಗೆ ಸೇರಿದಂತೆ ಹಲವಾರು ಉದ್ಯೋಗಾವಕಾಶ ಇದೆ. ವಿಡಿಯೋ ಜರ್ನಲಿಸ್ಟ್, ಫೋಟೋಗ್ರಾಫರ್‌ಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂದು ಎಂದು ಹೇಳಿದರು. ವೇದಿಕೆಯಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತç ಉಪನ್ಯಾಸಕಿ ಸುನೀತಾ ಇದ್ದರು. ವಿದ್ಯಾರ್ಥಿ ಕಿಶೋರ್ ನಿರೂಪಿಸಿದರು.