ಶನಿವಾರಸAತೆ, ನ. ೨: ನಾಡಪ್ರಭು, ಬೆಂಗಳೂರು ಆಭಿವೃದ್ಧಿ ಹರಿಕಾರ ಕೆಂಪೇಗೌಡರ ೧೦೮ ಕಂಚಿನ ಪ್ರತಿಮೆ ಉದ್ಘಾಟನೆ ಹಾಗೂ ಆವರಣಕ್ಕೆ ಮೃತ್ತಿಕೆ ಸಂಗ್ರಹ ರಥಯಾತ್ರೆ ಆಭಿಯಾನ ನಡೆಯುತ್ತಿದ್ದು, ಈ ರಥಯಾತ್ರೆಯನ್ನು ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಸಂಯುಕ್ತ ಆಶ್ರಯದಲ್ಲಿ ಮೃತ್ತಿಕೆ ಸ್ವಾಗತಿಸಲಾಯಿತು. ಶನಿವಾರಸಂತೆ ಗ್ರಾ.ಪಂ.ಯಿAದ ಗ್ರಾ.ಪಂ. ಆಧ್ಯಕ್ಷೆ ಫರ್ಜಾದ್ ಶಾಹಿದ್‌ಖಾನ್ ಮತ್ತು ಗ್ರಾ.ಪಂ. ಸದಸ್ಯರು, ಪಿಡಿಓ ಮೇದಪ್ಪ, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಮತ್ತು ಕಲಶಹೊತ್ತ ಮಹಿಳೆಯರು ಸಂಗ್ರಹ ರಥಯಾತ್ರೆಗೆ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು. ನಂತರ ಗ್ರಾ.ಪಂ.ಪರವಾಗಿ ಸಂಗ್ರಹಿಸಿದ ಮೃತ್ತಿಕೆಯನ್ನು ವಾಹನದಲ್ಲಿ ಕಳುಹಿಸಲಾಯಿತು. ಸ್ಥಳೀಯ ಜಾಮೀಯ ಮಸೀದಿ ಪರವಾಗಿ ಮಸೀದಿ ಅಧ್ಯಕ್ಷರು ರಥಯಾತ್ರೆಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಪಟ್ಟಣದ ಕೆ.ಆರ್.ಸಿ. ವೃತ್ತಕ್ಕೆ ತಲುಪಿದ ರಥಯಾತ್ರೆಯನ್ನು ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್, ಗ್ರಾ.ಪಂ. ಸದಸ್ಯರು ಪಿಡಿಓ ಮತ್ತು ಗ್ರಾಮಸ್ಥರು ಕಲಶ ಹೊತ್ತ ಮಹಿಳೆಯರು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ರಥಯಾತ್ರೆ ಕುರಿತು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮ್ಮ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರ; ಬೆಂಗಳೂರು ಕಟ್ಟಿದ ಕೆಂಪೇಗೌಡರು ಇಂದಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯ, ರಾಷ್ಟç, ವಿದೇಶಿಗರು ನೆಲೆಸಿದ್ದು, ರಾಷ್ಟçದ ಸಿಲಿಕಾನ್ ಸಿಟಿ ಎಂದು ಹೆಸರುಗಳಿಸಲು ಆಗ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಮೂಲ ಕಾರಣರು ಎಂದರು.
ರಾಜ್ಯ ಸರಕಾರ ಕೆಂಪೇಗೌಡರ ೧೦೮ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಿದ್ದು ಅದರ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ನೆರವೇರಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಎಲ್ಲೆಡೆ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುವ ರಥಯಾತ್ರೆ ಅಭಿಯಾನವು ನಡೆಯುತ್ತಿದೆ ಎಂದರು. ಜಿ.ಪಂ. ಮಾಜಿ ಸದಸ್ಯ ಭಾರತೀಶ್ ಹಾಗೂ ಶನಿವಾರಸಂತೆ ಗ್ರಾ.ಪಂ. ಸದಸ್ಯ ಎಸ್.ಎನ್. ರಘು ಮಾತನಾಡಿದರು. ರಥಯಾತ್ರೆ ಅಭಿಯಾನದಲ್ಲಿ ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ, ತಾಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ ವಿವಿಧ ಇಲಾಖೆ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು, ಶಿಕ್ಷಕರು, ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡರ ಪ್ರತಿಮೆಗೆ ಮೃತ್ತಿಕೆ ಸಂಗ್ರಹ ರಥವನ್ನು ವೀರಾಜಪೇಟೆ ಪುರಸಭೆ ವತಿಯಿಂದ ಪೂರ್ಣಕುಂಭದೊAದಿಗೆ ಕಾರು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಬೆಂಗಳೂರಿನಲ್ಲಿ ನವೆಂಬರ್ ೧೧ ರಂದು ನಡೆಯುವ ಉದ್ಘಾಟನೆ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವಂತೆ ಹಾಗೂ ಅವರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಬೋಪಯ್ಯ ಹೇಳಿದರು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಎಲ್ಲಾ ಕಡೆಯಿಂದ ಸಂಗ್ರಹವಾದ ಮಣ್ಣನ್ನು ಕೆಂಪೇಗೌಡರ ಪ್ರತಿಮೆ ಇರುವ ಜಾಗದಲ್ಲಿ ಉದ್ಯಾನವನದಲ್ಲಿ ಹಾಕಲಾಗುತ್ತದೆ ಎಂದರು. ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಈ ಸಂದರ್ಭ ಮಾತನಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬೀನ್ ದೇವಯ್ಯ, ಪುರಸಭೆಯ ಅಧ್ಯಕ್ಷೆ ಸುಶ್ಮಿತಾ, ಸದಸ್ಯರಾದ ಜೂನ, ಯಶೋಧ, ಆಶಾ ಸುಬ್ಬಯ್ಯ, ಅನಿತಾ, ತಾಲೂಕು ತಹಶೀಲ್ದಾರ್ ಅರ್ಚನಭಟ್, ಮುಖ್ಯಾಧಿಕಾರಿ ಚಂದ್ರಕುಮಾರ್, ಅಧಿಕಾರಿ ವರ್ಗ, ಅಂಗನವಾಡಿ ಕಾರ್ಯಕರ್ತರು, ಸ್ತಿçà ಶಕ್ತಿ ಬಳಗದವರು ಉಪಸ್ಥಿತರಿದ್ದರು.