ಗೋಣಿಕೊಪ್ಪ ವರದಿ, ನ. ೧: ಗೋಣಿಕೊಪ್ಪ ಪಿ.ಸಿ. ಕ್ಲಬ್ ಹಾಗೂ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಸಂಸ್ಥೆ ವತಿಯಿಂದ ತಾ. ೧೩ ರಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯಲ್ಲಿ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಪಿ.ಸಿ. ಕ್ಲಬ್ ಅಧ್ಯಕ್ಷ ಪೊನ್ನಿಮಾಡ ಆರ್. ಪ್ರದೀಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಮತ್ತು ಮುಕ್ತ ವಿಭಾಗದಲ್ಲಿ ಭಾಗವಹಿಸಬಹುದಾಗಿದ್ದು, ಅಂದು ಬೆಳಿಗ್ಗೆ ೯ ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಚೆಸ್ ಬೋರ್ಡ್ ಅನ್ನು ಸ್ಪರ್ಧಿಗಳೆ ತರಬೇಕಿದೆ. ತಾ. ೧೧ ರೊಳಗೆ ೯೪೪೮೩೮೩೯೧೦, ೯೯೭೨೫೩೮೦೩೦ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಗೋಷ್ಠಿಯಲ್ಲಿ ಸಲಹೆಗಾರ ಟಿ.ಜೆ. ಆಂಥೋನಿ, ಕಾರ್ಯಕರ್ತ ಶಾಜಿ ಅಚ್ಚುತ್ತನ್, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಇದ್ದರು.