ಮಡಿಕೇರಿ, ನ. ೧: ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
೨೦೨೨-೨೩ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಗೆ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಮತ್ತು ರಾಜ್ಯ ಸರ್ಕಾರವು ಅಂಗೀಕರಿಸಿ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-೩ಎ ರಲ್ಲಿನ ೧ (ಎ) ರಿಂದ ೧ (ಟಿ)ನಲ್ಲಿ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ಗೌಂಡರ್, ನಾಧಾರಿ ಗೌಡ, ಉಪ್ಪಿನ ಕೊಳಗ/ಉತ್ತಮ ಕೊಳಗ ಸಮುದಾಯಗಳಿಗೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನವಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವು ಎಲ್ಲಾ ಮೂಲಗಳಿಂದ ರೂ.೩.೫೦ ಲಕ್ಷಗಳನ್ನು ಮೀರಿರಬಾರದು. ವಿದ್ಯಾರ್ಥಿಯು ಸರ್ಕಾರಿ ಕಾಲೇಜು/ ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ ತಾಂತ್ರಿಕ/ ಉನ್ನತ ವ್ಯಾಸಂಗದ ಕೋರ್ಸ್ಗಳಲ್ಲಿ ಸಿಇಟಿ ಮೂಲಕ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಯು ಶೈಕ್ಷಣಿಕ ಉದ್ದೇಶಕ್ಕೆ ಇತರೆ ಯಾವುದೇ ಬ್ಯಾಂಕ್/ ಆರ್ಥಿಕ ಸಂಸ್ಥೆ/ ಇಲಾಖೆಗಳಿಂದ ಸಾಲ ಪಡೆದಿರಬಾರದು. ವಯೋಮಿತಿ ಸ್ನಾತಕ ೧೮ ರಿಂದ ೨೧ ವರ್ಷ ಹಾಗೂ ಸ್ನಾತಕೋತ್ತರ ೨೧ ರಿಂದ ೩೦ ವರ್ಷದ ಒಳಗಿರಬೇಕು.
ಇಂಜಿನಿಯರಿAಗ್, ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (ಆಯರ್ವೇದ, ಹೋಮಿಯೋಪತಿ, ಯುನಾನಿ), ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಕೋರ್ಸ್ಗಳಾದ ಬಿಎಸ್ಸಿ (ಕೃಷಿ), ಬಿಎಸ್ಸಿ (ಫಾರೆಸ್ಟಿç), ಬಿಎಸ್ಸಿ (ಸಿರಿಕಲ್ಚರ್), ಬಿಎಸ್ಸಿ (ಅಗ್ರಿ ಬಯೋಟೆಕ್), ಬಿಎಸ್ಸಿ (ತೋಟಗಾರಿಕೆ), ೪ ವರ್ಷದ ಬಿಎಸ್ಸಿ (ಹಾನರ್ಸ್), ಬಿಎಸ್ಸಿ (ನರ್ಸಿಂಗ್), ಬಿಪಿಟಿ, ಬಿಪಿಒ, ಅಲೈಟ್ ಹೆಲ್ತ್ ಸೈನ್ಸ್, ಬಿಹೆಚ್ಎಸ್ಸಿ (ಗೃಹ ವಿಜ್ಞಾನ), ಬಿಟೆಕ್ (ಫುಡ್ ಟೆಕ್ನಾಲಜಿ), ಬಿಟೆಕ್ (ಡೈರಿ ಟೆಕ್ನಾಲಜಿ), ಬಿಎಫ್ಎಸ್ಸಿ (ಫಿಶರಿ ಸೈನ್ಸ್), ಬಿಟೆಕ್ (ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ), ಬಿಎಸ್ಸಿ (ಅಗ್ರಿ ಮಾರ್ಕೆಟಿಂಗ್ ಮತು ಕೋಅಪರೇಶನ್), ಬಿಟೆಕ್ (ಅಗ್ರಿಕಲ್ಚರ್ ಇಂಜಿನಿಯರಿAಗ್), ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ(ಬಿವಿಎಸ್ಸಿ ಮತ್ತು ಎಹೆಚ್), ಬಿಫಾರ್ಮ ೨ನೇ ವರ್ಷದ ಬಿ.ಫಾರ್ಮ, ಪಾರ್ಮ-ಡಿ. ಉದ್ದೇಶಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.
ಎಂಬಿಎ, ಎಂಸಿಎ, ಎಂಆರ್ಕಿಟೆಕ್ಚರ್, ಎಂ.ಟೆಕ್, ಎಂಇ, ಎಂ.ಡಿ.ಇಎಸ್., ಎಂ.ಡಿ., ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ) ಪಿ.ಜಿ. ಡಿಪ್ಲೊಮ, ಎಂ.ಎಸ್.ಸಿ (ನರ್ಸಿಂಗ್), ಎಂ.ಎಸ್.ಸಿ. (ಅಲೈಡ್ ಹೆಲ್ತ್ ಸೈನ್ಸ್) ಎಂ.ಎಸ್.ಸಿ., ಎಂ.ಪಿ.ಟಿ., ಎಂ.ಫಾರ್ಮ, ಎಂ.ಪಾರ್ಮ ಡಿ. ಉದ್ದೇಶಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.
ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆಗೆ ೨೦೨೨-೨೩ನೇ ಸಾಲಿನಲ್ಲಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ವಾರ್ಷಿಕ ರೂ. ೩.೫೦ ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.೧೦ ಲಕ್ಷಗಳ ಸಾಲವನ್ನು ಶೇ.೨ರ ಬಡ್ಡಿ ದರದಲ್ಲಿ ಮಂಜೂರು ಮಾಡಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನವಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಮಾಸ್ಟರ್ ಡಿಗ್ರಿ, ಪಿಎಚ್ಡಿ, ಪೋಸ್ಟ್ ಡಾಕ್ಟರಲ್ ಕೋರ್ಸ್ಗಳ ವ್ಯಾಸಂಗಕ್ಕೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಬೇಕು. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಔಟಿಟಥಿ ಣhe ಣoಠಿ ೫೦ Uಟಿiveಡಿsiಣies iಟಿ ಕಿS Woಡಿಜ Uಟಿiveಡಿsiಣಥಿ ಖಚಿಟಿಞiಟಿg ಒoಟeಛಿuಟಚಿಡಿ ಅouಡಿses ತಿiಟಟ be oಜಿಜಿeಡಿeಜ. ವಿದ್ಯಾರ್ಥಿ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ರೂ. ೩.೫೦ ಲಕ್ಷ ಮಿತಿಯಲ್ಲಿರಬೇಕು. ವಿದ್ಯಾರ್ಥಿಗೆ ಮಂಜೂರು ಮಾಡುವ ಸಾಲದ ಭದ್ರತೆಗೆ ಪೋಷಕರು/ಜಾಮೀನುದಾರರು ಸ್ಥಿರಾಸ್ತಿ ಭದ್ರತೆಯನ್ನು ನೀಡಬೇಕು. ವಿದ್ಯಾರ್ಥಿಗಳು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಆಧಾರ್ ಕಾರ್ಡ್ನಲ್ಲಿರುವಂತೆಯೇ ವಿದ್ಯಾರ್ಥಿಗಳ ಹೆಸರು ಬ್ಯಾಂಕ್ ಖಾತೆಯ ಪುಸ್ತಕದಲ್ಲಿಯೂ ಇದ್ದು, ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಬೇಕು. ಈ ಯೋಜನೆಯಲ್ಲಿ ವಿದ್ಯಾರ್ಥಿಗಳು ಅರ್ಜಿಯನ್ನು ಸೇವಾ ಸಿಂಧು ಪೊರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ನಿಗಮದ hಣಣಠಿs://ಞvಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ/ವೆಬ್ ಸೈಟ್ನಲ್ಲಿ ಅಥವಾ ನಿಗಮದ ದೂರವಾಣಿ ಸಂಖ್ಯೆ ೦೮೦-೨೯೯೦೪೨೬೮ ಹಾಗೂ ಇಮೇಲ್ ವಿಳಾಸ: mಜಞvಛಿಜಛಿ@gmಚಿiಟ.ಛಿomಗೆ ಸಂಪರ್ಕಿಸುವುದು.
ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ (ನಿ), ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಅಥವಾ ದೂ.ಸಂ.೦೮೨೭೨-೨೨೧೬೫೬ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಒಕ್ಕಲಿಗ ಸಮುದಾಯದ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.