ಮಡಿಕೇರಿ, ನ. ೧: ಚೆಂಬು ಗ್ರಾಮದ ಕೊಡಗು ರಕ್ಷಣಾ ವೇದಿಕೆಯ ಹೊಂಬಾಳೆ ಮತ್ತು ಕಟ್ಟಪ್ಪಳ್ಳಿ ಘಟಕದ ಸಭೆ ಜಂಟಿಯಾಗಿ ನಡೆಯಿತು.
ಹೊಂಬಾಳೆ ಘಟಕದ ಅಧ್ಯಕ್ಷÀ ಪ್ರಕಾಶ್ ಅತ್ಯಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮಾತನಾಡಿ ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸಾ ವ್ಯವಸ್ಥೆಯಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಇದೆ. ಆದ್ದರಿಂದ ಅನಿವಾರ್ಯವಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಮುಂದಿಟ್ಟುಕೊAಡು ಅಭಿಯಾನ ನಡೆಸಲಾಗುತ್ತಿದೆ. ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕೊರವೇ ಜಿಲ್ಲಾ ಕಾರ್ಯದರ್ಶಿ ಜಯಂತ್, ಗ್ರಾಮದ ಹಿರಿಯರಾದ ದೇವಂಗೋಡಿ ಅಚ್ಚಪ್ಪ, ದೇವಂಗೋಡಿ ತನು, ಸಂಪಾಜೆ ಹೋಬಳಿ ಘಟಕದ ಅಧ್ಯಕ್ಷÀ ಹೇಮಾದರ ಹೊಸೂರು, ಕುಡಿಯರ ಸತೀಶ್ ತೋರಿಮಲೆ ಮತ್ತಿತರ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.